ಹಾಸನ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ನಾನು ಸೇರಿ ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದ್ದು ಎಂದು ಮಾಜಿ ಸಚಿವ ಎಚ್‍ಡಿ ರೇವಣ್ಣ ಹೇಳಿದ್ದಾರೆ.
Advertisement
ಸಚಿವ ಅಶ್ವಥ್ ನಾರಾಯಣ್ ಸಂಸದ ಡಿ.ಕೆ.ಸುರೇಶ್ ನಡುವೆ ನಡೆದ ವಾಗ್ವಾದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ, ನಾನು ಸೇರಿ ರಾಮನಗರ ಜಿಲ್ಲೆ ಮಾಡಿದ್ದು. ರಾಮನಗರದಲ್ಲಿ ಡೈರಿ, ಡಿಸಿಸಿ ಬ್ಯಾಂಕ್ ಮಾಡಲು ಈ ಅಣ್ಣತಮ್ಮ ಬಿಡಲಿಲ್ಲ ಅಡ್ಡಗಾಲು ಹಾಕಿ ನಿಲ್ಲಿಸಿದ್ದರು. ರಾಮನಗರ ಜಿಲ್ಲೆಗೆ ಕುಮಾರಸ್ವಾಮಿ ಅವರದ್ದೇ ಹೆಚ್ಚು ಕೊಡುಗೆ ಇದೆ ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೋದಿಯ ಎಲ್ಲಾ ರ‍್ಯಾಲಿಗಳನ್ನು ಬಂದ್ ಮಾಡಿ ನಂತರ ನಮ್ಮ ಪಾದಯಾತ್ರೆ ಬಗ್ಗೆ ಯೋಚಿಸುತ್ತೇವೆ: ಡಿ.ಕೆ.ಸುರೇಶ್
Advertisement
Advertisement
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವುದಕ್ಕೆ ಕೃಷ್ಣ ನಡೆ, ಮೇಕೆದಾಟು ನಡೆ ಮಾಡಲು ಹೊರಟಿದ್ದಾರೆ. ಮೇಕೆದಾಟು ಪಾದಯಾತ್ರೆ ಹದಿನೈದು ದಿನ ಬಿಟ್ಟು ಮಾಡಿದರೆ ಏನಾಗುತ್ತೆ, ಒಂದೆರಡು ತಿಂಗಳು ಬಿಟ್ಟು ಮಾಡಲಿ ಎಂದರು.
Advertisement
ಬಿಜೆಪಿ ಸರ್ಕಾರ 40% ಕಮೀಷನ್ ಸರ್ಕಾರ ಎಂಬ ಕೈ ಪಕ್ಷದ ಆರೋಪದ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಅದನ್ನು ಶುರು ಮಾಡಿದ್ದೇ ಕಾಂಗ್ರೆಸ್ ಪಕ್ಷದವರು. ಅಧಿಕಾರದಲ್ಲಿದ್ದಾಗ ಎರಡು ಸರ್ಕಾರಗಳು ಮೇಕೆದಾಟು ಯೋಜನೆ ಯಾಕೆ ಮಾಡಲಿಲ್ಲ. ಇವರಿಗೆ ಜನ ಸತ್ತರೂ ಪರ್ವಾಗಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಸತ್ತು ಹೋಗಿದೆ. ಅದಕ್ಕೆ ಪಕ್ಷವನ್ನು ಮೇಲೆಳಿಸಲು ಈ ಗಿಮಿಕ್ ಮಾಡುತ್ತಿದ್ದಾರೆ. ಎರಡನೇ ಅಲೆಯಲ್ಲಿ ಚುನಾವಣೆ ಮಾಡಲು ಹೋಗಿ ಸಾವಿರಾರು ಜನ ಬೀದಿಪಾಲಾಗಿದ್ದಾರೆ. ಜನರು ದೇವೇಗೌಡರನ್ನು ಐವತ್ತು ವರ್ಷ ರಾಜಕೀಯದಲ್ಲಿ ಉಳಿಸಿದ್ದಾರೆ. ಹಾಸನ, ಮಂಡ್ಯ, ರಾಮನಗರ ಜನ ನಮ್ಮ ಕುಟುಂಬ ಉಳಿಸಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ನಾವು ರ‍್ಯಾಲಿ ಮಾಡಲ್ಲ, ಸಮಾವೇಶ ಮಾಡಲ್ಲ, ಕಾವೇರಿಗಾಗಿ ನಡೆಯುತ್ತೇವೆ: ಡಿಕೆಶಿ
ಕುಮಾರಸ್ವಾಮಿ ಹತ್ತಿರ ಜನ ಇಲ್ಲಾ ಎಂಬ ಮಾಜಿ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಹತ್ರ ಜನ, ದೇವರು ಇದ್ದಾರೆ. ಕುಮಾರಸ್ವಾಮಿ ಬಿಟ್ಟು ಹೋದವರು ಮನೆಯಲ್ಲಿ ಇದ್ದಾರೆ. ಕುಟುಂಬ ರಾಜಕಾರಣ ಅಂಥಾ ಎಲ್ಲಾ ಹೇಳಿದ್ದರು. ಈ ಕುಟುಂಬದ ಜೊತೆ ಜನ ಇದ್ದಾರೆ. ಅದಕ್ಕೆ ಎಂ.ಎಲ್.ಸಿ. ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಿದ್ದಾರೆ. 2023 ಕ್ಕೆ ನೋಡೋಣ, ನಾನು ಎಲ್ಲೂ ಹೋಗಲ್ಲ. ದೇವರ ಆಶೀರ್ವಾದ, ಜನತೆ ಶಕ್ತಿ ಕೊಟ್ಟರೆ ಕೆಲಸ ಮಾಡುತ್ತೇವೆ ಎಂದರು.
ನೂತನ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನಕ್ಕೆ ಡಾ.ಸೂರಜ್ ರೇವಣ್ಣ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕೊರೊನಾ ವೇಳೆ ವಿಧಾನ ಪರಿಷತ್ ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ಏಕೆ ಬೇಕಿತ್ತು? ನನ್ನ ಮಗ ಹೋಗುತ್ತೇನೆ ಎಂದಿದ್ದ. ಆದರೆ ಕೊರೊನಾ ಇದೆ ಬೇಡ ಅಂತಾ ನಾನೇ ಹೇಳಿದೆ. ಸೂರಜ್ ಜೊತೆ ಇಪ್ಪತ್ತೈದು ಜನ ಹೋಗುವುದು, ಕೊರೊನ ಮಾರ್ಗಸೂಚಿ ಉಲ್ಲಂಘನೆ ಆಗುವುದು ಏಕೆ ಬೇಕು? ಲಾಕ್ ಡೌನ್ ಮುಗಿಯಲಿ ಆಮೇಲೆ ಪ್ರಮಾಣವಚನ ತೆಗೆದುಕೊಂಡರೆ ಆಯ್ತು ಅಂತಾ ಹೇಳಿದೆ. 15 ದಿನದ ಸಂಬಳ ಹೋಗಲಿ ಬಿಡು ಅಂತಾ ತಡೆದಿದ್ದೇನೆ ಎಂದು ಹೇಳಿದರು.