-ಡಿಕೆಶಿಗೆ ಸರ್ಕಾರದ ಬಗ್ಗೆ ಗೌರವವೇ ಇಲ್ಲ
ಶಿವಮೊಗ್ಗ : ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನರನ್ನು ಸೇರಿಸಿಕೊಂಡು ಪಾದಯಾತ್ರೆ ನಡೆಸಬೇಡಿ ಎಂದು ಸರ್ಕಾರ ಕಾಂಗ್ರೆಸ್‌ನವರಿಗೆ ಹೇಳುತ್ತಲೇ ಇದೆ. ಆದರೆ ಅವರು ಪಾದಯಾತ್ರೆ ನಡೆಸುತ್ತಲೇ ಇದ್ದಾರೆ. ಕೋವಿಡ್ ಮುಗಿದ ನಂತರ ಮೇಕೆದಾಟಿನಲ್ಲೇ ಬಿದ್ದು ಒದ್ದಾಡಿ ನಿಮಗೆ ಯಾರು ಬೇಡ ಅಂತಾರೆ. ಆದರೆ ಸದ್ಯಕ್ಕೆ ಪಾದಯಾತ್ರೆ ನಿಲ್ಲಿಸಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರೊಂದಿಗೆ ಮನವಿ ಮಾಡಿದ್ದಾರೆ.
Advertisement
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಂತಹವರು, ಡಿಕೆಶಿ ಮಂತ್ರಿ ಆಗಿದ್ದವರು. ಸರ್ಕಾರ ನಡೆಸಿದವರೇ ಈ ರೀತಿ ಕೋವಿಡ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದರೆ ಹೇಗೆ?. ಮೇಕೆದಾಟು ಯೋಜನೆ ಆದಷ್ಟು ಬೇಗ ಜಾರಿಗೆ ತರಲು ಸರ್ಕಾರ ಏನು ಪ್ರಯತ್ನ ಮಾಡಬೇಕೋ ಅದನ್ನು ಮಾಡಲಿದೆ ನಿಮ್ಮ ಹೋರಾಟ ನಿಲ್ಲಿಸಿ ಎಂದರು. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ತೆರಳಿದ್ದ 35ಕ್ಕೂ ಹೆಚ್ಚು ಕೈ ಮುಖಂಡರ ವಿರುದ್ಧ FIR ದಾಖಲು
Advertisement
Advertisement
ಪಾದಯಾತ್ರೆ ಆರಂಭದ ದಿನದಲ್ಲಿದ್ದ ಕಾರ್ಯಕರ್ತರು ಈಗ ಕಾಣಿಸುತ್ತಿಲ್ಲ. ಅವರೆಲ್ಲಾ ಈಗಾಗಲೇ ಅವರವರ ಊರಿಗೆ ತೆರಳಿದ್ದಾರೆ. ಊರಿಗೆ ಹೋಗಿ ಅಲ್ಲೆಲ್ಲಾ ಕೋವಿಡ್ ಹರಡುತ್ತಿದ್ದಾರೆ. ನಿಮ್ಮ ರಾಜಕೀಯ ತೆವಲು ತೀರಿಸಿಕೊಳ್ಳಲು ಗ್ರಾಮೀಣ ಭಾಗದ ಅಮಾಯಕ ಜನರು ಕೊರೊನಾ ಅನುಭವಿಸಬೇಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಶಬರಿಮಲೆಯಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂಬ ಕೂಗು
Advertisement
ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ತಜ್ಣರು ಸಲಹೆ ನೀಡುವ ಜೊತೆಗೆ ಮಾಧ್ಯಮಗಳಲ್ಲಿ ವರದಿ ಬರುತ್ತಿವೆ. ಆದರೆ ಡಿಕೆಶಿ ಅವರು ಇದು ಸುಳ್ಳು ಅಂಕಿ ಅಂಶ ಎನ್ನುತ್ತಿದ್ದಾರೆ. ಮುಂದೆ ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಕಾಣುತ್ತಿರುವ ವ್ಯಕ್ತಿ ಸರ್ಕಾರದ ನೀಡುವ ಅಂಕಿ ಅಂಶ ಸುಳ್ಳು ಎನ್ನುತ್ತಾರೆ. ಇವರಿಗೆ ಸರ್ಕಾರದ ಬಗ್ಗೆ ಗೌರವವೇ ಇಲ್ಲ. ಹಾಗಾದರೆ ನಿಮ್ಮ ಸರ್ಕಾರ ಇದ್ದಾಗ ನೀಡಿದ ಅಂಕಿ ಅಂಶಗಳು ಸುಳ್ಳಾ? ಸ್ವತಂತ್ರ ಬಂದ ನಂತರ ಕಾಂಗ್ರೆಸ್ ಎಷ್ಟು ವರ್ಷ ಅಧಿಕಾರ ನಡೆಸಿದೆ. ಹಾಗೆಲ್ಲಾ ನೀಡಿದ ಅಂಕಿ ಅಂಶಗಳು ಸುಳ್ಳಾ? ನಾನು ಸರ್ಕಾರವನ್ನು ನಂಬಿರುವವನು ಈಗಾಗಿ ನಿಮ್ಮ ಸರ್ಕಾರ ನೀಡಿದ್ದ ಅಂಕಿ ಅಂಶ ಸುಳ್ಳು ಅಂತಾ ಹೇಳುವುದಿಲ್ಲ. ಸರ್ಕಾರದ ಅಂಕಿ ಅಂಶ ಸುಳ್ಳು ಅಂತಾ ಹೇಳಿರುವ ಡಿಕೆಶಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು. ಇದನ್ನೂ ಓದಿ: ಅಧಿಕಾರಕ್ಕಾಗಿ ಕಾಂಗ್ರೆಸ್‍ನಿಂದ ಮೇಕೆದಾಟು ಪಾದಯಾತ್ರೆ ನಾಟಕ: ಹಾಲಪ್ಪ ಆಚಾರ್