ಬೆಂಗಳೂರು: ಮೋಜು, ಮಸ್ತಿ ಮಾಡಲು ಕಾಂಗ್ರೆಸ್ ಈ ಪಾದಯಾತ್ರೆಯನ್ನು ಮಾಡುತ್ತಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಹೆಸರಲ್ಲಿ ಕಾಂಗ್ರೆಸ್ ನಾಟಕವಾಡುತ್ತಿದೆ. ಪಾದಯಾತ್ರೆಗಾಗಿ ಹೋಟೆಲ್ ಬುಕ್ ಮಾಡಿರುವುದಾಗಿ ಕಾಂಗ್ರಸ್ಸಿಗರು ತಿಳಿಸಿದ್ದಾರೆ. ಆದರೆ ಹೋಟೆಲ್ ಬುಕ್ ಮಾಡಿರುವುದು ಪಾದಯಾತ್ರೆಗಲ್ಲ, ರಾತ್ರಿಯಲ್ಲಾ ಮಜಾ ಮಾಡಲು ಎಂದು ವ್ಯಂಗ್ಯವಾಡಿದರು.
Advertisement
Advertisement
ತಾಕತ್ ಬಗ್ಗೆ ಮಾತನಾಡುವ ಡಿ.ಕೆ. ಶಿವಕುಮಾರ್ ಜಾಮೀನು ಮೇಲೆ ಹೊರಗಡೆ ಇದ್ದಾರೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನೀರಾವರಿ ಮಂತ್ರಿ ಇದ್ದಾಗ ಡಿಕೆಶಿ ಏನು ಮಾಡಿದ್ದರು. ಸೋನಿಯಾ ಗಾಂಧಿ ಗೋವಾದಲ್ಲಿ ಕರ್ನಾಟಕಕ್ಕೆ ನೀರು ಕೊಡಬೇಡಿ ಅಂದಿದ್ದರು. ಆಗ ಏನು ಮಾಡದೇ ಸುಮ್ಮನಿದ್ದ ಕಾಂಗ್ರೆಸ್ ಈಗ ನಾಟಕವಾಡುತ್ತಿದೆ ಎಂದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ
Advertisement
Advertisement
ಸಿಎಂ ಆಗಲು ಡಿ.ಕೆ. ಶಿವಕುಮಾರ್ ಪಾದಯಾತ್ರೆಯನ್ನು ಮಾಡುತ್ತಿದ್ದಾರೆ. ಇಂತಹವರು ಸಿಎಂ ಆದರೆ ಏನು ಆಗುತ್ತದೆ ಎನ್ನುವುದನ್ನು ಮೊನ್ನೆ ರಾಮನಗರದಲ್ಲಿ ನಡೆದ ಘಟನೆಯನ್ನು ಜನ ನೋಡಿದ್ದಾರೆ ಎಂದ ಅವರು ಕರ್ನಾಟಕದಲ್ಲಿ ಬೆಂಕಿ ಹಚ್ಚಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ