ಬೆಂಗಳೂರು: ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಗೆ ರೈತ ಗೀತೆ ಮೂಲಕವಾಗಿ ಚಾಲನೆ ನೀಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಕೈ ನಾಯಕರು ಮೊದಲ ದಿನ 15 ಕಿಲೋ ಮೀಟರ್ ಪಾದಯಾತ್ರೆ ಮಾಡಲಿದ್ದಾರೆ. ಸಂಗಮದಿಂದ ದೊಡ್ಡ ಆಲಹಳ್ಳಿಯವರೆಗೂ ಈ ಪಾದಯಾತ್ರೆ ನಡೆಯಲಿದೆ. ಇದನ್ನೂ ಓದಿ: ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆಶಿ
Advertisement
ಇಂದಿನಿಂದ ಜನವರಿ 18ರವರೆಗೆ ಪಾದಯಾತ್ರೆ ನಡೆಯಲಿದೆ. ನಮ್ಮ ನೀರು ನಮ್ಮ ಹಕ್ಕು ಘೋಷ ವಾಕ್ಯದೊಂದಿಗೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭಿಸಿದೆ. ಸಂಜೆಯ ವೇಳೆಗೆ ಕನಕಪುರವನ್ನು ತಲುಪಲಿದ್ದಾರೆ.
Advertisement
Advertisement
ಮೇಕೆದಾಟು ಪಾದಯಾತ್ರೆ ಸಂಗಮದಲ್ಲಿ ಕೊರೊನಾ ರೂಲ್ಸ್ ದೊಡ್ಡ ಮಟ್ಟದಲ್ಲಿ ಉಲ್ಲಂಘನೆಯಾಗಿದೆ. ಕರ್ಫ್ಯೂ ನಿಯಮ ಮೀರಿ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಸಾವಿರಾರು ಜನ ಸೇರಿದ್ದಾರೆ. ಕೊರೊನಾ ರೂಲ್ಸ್ ಪಾಲನೆ ಮಾಡುತ್ತೇವೆ ಅಂತ ಕಾಂಗ್ರೆಸ್ ಹೇಳಿತ್ತು. ನಿಯಮ ಮೀರಿ ಸಾವಿರಾರು ಜನ ಸಂಗಮದಲ್ಲಿ ಜಮಾಯಿಸಿದ್ದಾರೆ
Advertisement
ರಾಜ್ಯ, ಬೆಂಗಳೂರಿನ ಜನ ಹಿತಕ್ಕಾಗಿ ಈ ಪಾದಯಾತ್ರೆ ಮಾಡ್ತಿದ್ದೇವೆ. ನಾವು 2 ತಿಂಗಳ ಹಿಂದೆಯೇ ಪಾದಯಾತ್ರೆ ಘೋಷಣೆ ಮಾಡಿದ್ದೆವು. ಪಾದಯಾತ್ರೆ ಮಾಡಬಾರದು ಅಂತ ಕರ್ಫ್ಯೂ ಹಾಕಿದ್ದಾರೆ. ಕಾನೂನು ಭಂಗ ಮಾಡದೇ ಪಾದಯಾತ್ರೆ ಮಾಡುತ್ತೇವೆ ಎಂದು ಕನಕಪುರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೇಕೆದಾಟು ಜಲಾಶಯ ನಿರ್ಮಾಣದಿಂದ ಸಮದ್ರಕ್ಕೆ ಹರಿದು ವ್ಯರ್ಥವಾಗುವ ಕಾವೇರಿ ನೀರನ್ನ ಸಮರ್ಥವಾಗಿ ಬಳಸಿಕೊಳ್ಳಬಹದು. ಅದಕ್ಕಾಗಿಯೇ ಈ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಬನ್ನಿ ಕೈ ಜೋಡಿಸಿ ಈ ಪಾದಯಾತ್ರೆಯಲ್ಲಿ ಭಾಗವಹಿಸಿ https://t.co/QxoWxd63ys ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿ #NammaNeeruNammaHakku pic.twitter.com/nsyM3lL5js
— Karnataka Congress (@INCKarnataka) January 5, 2022
ಮೇಕೆದಾಟು ಪಾದಯಾತ್ರೆ ಯೋಜನೆಯ ವಿವರ ಇಲ್ಲಿದೆ:
ಜನವರಿ 9 ರಂದು ಬೆಳಿಗ್ಗೆ 8-30ಕ್ಕೆ ಸಂಗಮದಲ್ಲಿ ಪಾದಯಾತ್ರೆ ಉದ್ಘಾಟನೆಯಾಗಿದೆ. ಮಧ್ಯಾಹ್ನ 1ಕ್ಕೆ ಹೆಗ್ಗನೂರು ತಲುಪಲಿದೆ. ಹೆಗ್ಗನೂರಿನಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ದೊಡ್ಡಆಲಹಳ್ಳಿ ತಲುಪಲಿರುವ ನಾಯಕರು, ಅಂದು ದೊಡ್ಡಆಲಹಳ್ಳಿಯಲ್ಲೇ ಸಭೆ ಸೇರಿ ವಾಸ್ತವ್ಯ ಮಾಡಲಿದ್ದಾರೆ.
ಜನವರಿ 10ಕ್ಕೆ ದೊಡ್ಡಆಲಹಳ್ಳಿಯಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಾದಪ್ಪನದೊಡ್ಡಿ ತಲುಪಲಿದೆ. ಪಾದಯಾತ್ರೆ, ಮಧ್ಯಾಹ್ನ 1ಕ್ಕೆ ಮಾದಪ್ಪನದೊಡ್ಡಿ ,ಕರಿಯಣ್ಣನದೊಡ್ಡಿ ತಲುಪಲಿದೆ. ಇಲ್ಲಿಯೇ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಕನಕಪುರಟೌನ್ ತಲುಪಲಿರುವ ನಾಯಕರು ಅಂದು ಕನಕಪುರಟೌನಲ್ಲೇ ಸಭೆ, ವಾಸ್ತವ್ಯ ಮಾಡಲಿದ್ದಾರೆ.
ಬೆಂಗಳೂರಿಗೆ ಕುಡಿಯುವ ನೀರು, ವಿದ್ಯುತ್, ಕೃಷಿ, ನೀರಾವರಿ ಸೇರಿದಂತೆ ಮೇಕೆದಾಟು ಯೋಜನೆ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಲಿದೆ.
ಅಭಿವೃದ್ಧಿಯ ಚಿತ್ರಣವನ್ನೇ ಬದಲಿಸಬಲ್ಲ ಈ ಯೋಜನೆಯ ಕನಸು ಕಂಡು, ಸಾಕಾರಗೊಳಿಸುವ ನಿಟ್ಟಿನಲ್ಲಿ ಹಲವು ಹೆಜ್ಜೆ ಇಟ್ಟಿದ್ದೇವೆ, ಈಗ ಜಾರಿಗೆ ಒತ್ತಾಯಿಸಿ ಹೆಜ್ಜೆ ಇಡುತ್ತಿದ್ದೇವೆ.#MekedatuPadayatre pic.twitter.com/r53UMBEgPa
— Karnataka Congress (@INCKarnataka) January 9, 2022
ಜನವರಿ 11ಕ್ಕೆ ಕನಕಪುರದಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಗಾಣಾಳು ವೀರಭದ್ರಸ್ವಾಮಿ ದೇವಸ್ಥಾನ ಪಾದಯಾತ್ರೆ ತಲುಪಲಿದೆ. ಮಧ್ಯಾಹ್ನ 1ಕ್ಕೆ ಗಾಣಾಳು ವೀರಭದ್ರಸ್ವಾಮಿ ದೇವಸ್ಥಾನ ತಲುಪಲಿರುವ ಪಾದಯಾತ್ರೆ, ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಚಿಕ್ಕೇನಹಳ್ಳಿ ತಲುಪಲಿರುವ ಪಾದಯಾತ್ರೆ ಬಳಿಕ ಅಂದು ಚಿಕ್ಕೇನಹಳ್ಳಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.
ಜನವರಿ 12ಕ್ಕೆ ಚಿಕ್ಕೇನಹಳ್ಳಿಯಲ್ಲಿ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಕೃಷ್ಣಾಪುರದೊಡ್ಡಿ ಬಳಿ ಪಾದಯಾತ್ರೆ ತಲುಪಲಿದೆ. ಕೃಷ್ಣಾಪುರದೊಡ್ಡಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ರಾಮನಗರ ಟೌನ್ ತಲುಪಲಿರುವ ಪಾದಯಾತ್ರೆ, ಅಂದು ರಾಮನಗರ ಟೌನ್‌ನಲ್ಲಿ ಸಭೆ,ವಾಸ್ತವ್ಯ ಮಾಡಲಿದ್ದಾರೆ.
‘ನೀರಿಗಾಗಿ ನಡಿಗೆ’ ಈ ಹೋರಾಟದಲ್ಲಿ ತಾವೆಲ್ಲರೂ ಬಂದು ಭಾಗವಹಿಸಿ ಯಶಸ್ವಿಗೊಳಿಸಬೇಕು, ಈ ಸಂದರ್ಭದಲ್ಲಿ ಎಲ್ಲರೂ ಕರೋನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಾ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕೋಣ.@DKSureshINC
ನಮ್ಮ ನೀರು, ನಮ್ಮ ಹಕ್ಕು.#MekedatuPadayatre pic.twitter.com/o65X2bzbZs
— Karnataka Congress (@INCKarnataka) January 9, 2022
ಜನವರಿ 13ಕ್ಕೆ ರಾಮನಗರ ಟೌನ್ ಬಳಿ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಮಾಯಾಗಾನಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ಪಾದಯಾತ್ರೆ ತಲುಪಲಿದೆ. ಮಾಯಾಗಾನಹಳ್ಳಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಬಿಡದಿ ತಲುಪಲಿರುವ ಪಾದಯಾತ್ರೆ, ಅಂದು ಬಿಡದಿಯಲ್ಲಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.
ರಾಜ್ಯದ ಅಭಿವೃದ್ಧಿಗೆ, ಯಶಸ್ಸಿಗೆ ಕಾರಣವಾಗುವ ಮೇಕೆದಾಟು ಯೋಜನೆ ಜಾರಿಗಾಗಿ ಕೋವಿಡ್ ನಿಯಮಗಳನ್ನು ಮರೆಯದೆ ಪಾಲಿಸುತ್ತಾ ಈ ಐತಿಹಾಸಿಕ ನೀರಿಗಾಗಿ ನಡಿಗೆಯಲ್ಲಿ ನಾವು ನೀವೆಲ್ಲ ಸೇರಿ ಹೆಜ್ಜೆ ಹಾಕೋಣ.
– @DKShivakumar
ನಮ್ಮ ನೀರು, ನಮ್ಮ ಹಕ್ಕು.#MekedatuPadayatre pic.twitter.com/OtxObqOMyz
— Karnataka Congress (@INCKarnataka) January 9, 2022
ಜನವರಿ 14ಕ್ಕೆ ಬಿಡದಿಯಲ್ಲಿ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ರಾಜ್‍ಕುಮಾರ್ ಫಾರ್‍ಂ-ಮಂಚನಾಯಕನಹಳ್ಳಿಯನ್ನು ಪಾದಯಾತ್ರೆ ತಲುಪಲಿದೆ. ಮಂಚನಾಯಕನಹಳ್ಳಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಕೆಂಗೇರಿ (ಪೂರ್ಣಿಮಾ ಕನ್ವೆಷನ್ ಹಾಲ್) ಬಳಿ ತಲುಪಲಿರುವ ಪಾದಯಾತ್ರೆ ಅಂದು ಕೆಂಗೇರಿ (ಪೂರ್ಣಿಮಾ ಕನ್ವೆಷನ್ ಹಾಲ್) ಯಲ್ಲಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.
ಜನವರಿ 15ಕ್ಕೆ ಕೆಂಗೇರಿ (ಪೂರ್ಣಿಮಾ ಕನ್ವೆಷನ್ ಹಾಲ್) ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ವೆಂಕಟಾದ್ರಿ ಚೌಟ್ರಿ ಬನಶಂಕರಿ ತಲುಪಲಿರುವ ಪಾದಯಾತ್ರೆ ವೆಂಕಟಾದ್ರಿ ಚೌಟ್ರಿ ಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಸಾರಕ್ಕಿ ಸಿಗ್ನಲ್ (ಸಿಂಧೂರ ಕನ್ವೆಷನ್ ಹಾಲ್) ತಲುಪಲಿರುವ ಪಾದಯಾತ್ರೆ ಅಂದು ಸಾರಕ್ಕಿ ಸಿಗ್ನಲ್ (ಸಿಂಧೂರ ಕನ್ವೆಷನ್ ಹಾಲ್) ನಲ್ಲಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.
ಜನವರಿ 16ಕ್ಕೆ ಸಾರಕ್ಕಿ ಸಿಗ್ನಲ್ (ಸಿಂಧೂರ ಕನ್ವೆಷನ್ ಹಾಲ್) ನಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಕೋರಮಂಗಲ (ಮಂಗಳ ಕಲ್ಯಾಣ ಮಂಟಪ) ತಲುಪಲಿರುವ ಪಾದಯಾತ್ರೆ ಅಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆ ಸುಬ್ರಮಣ್ಯಸ್ವಾಮಿ ಚೌಲ್ಟ್ರಿ ಲಕ್ಷ್ಮೀಪುರ ತಲುಪಲಿರುವ ಪಾದಯಾತ್ರೆ ಅಂದು ಸುಬ್ರಮಣ್ಯಸ್ವಾಮಿ ಚೌಲ್ಟ್ರಿ ಲಕ್ಷ್ಮೀಪುರದಲ್ಲಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.
ನಮ್ಮ ನೀರಿಗಾಗಿ ಈಗಾಗಲೇ ಸಾಕಷ್ಟು ಹಾದಿ ಸವೆಸಿದ್ದೇವೆ, ಹೆಜ್ಜೆ ಇಟ್ಟಿದ್ದೇವೆ, ಯೋಜನೆ ಜಾರಿಯಾಗುವವರೆಗೂ ಸಾಗುತ್ತಲೇ ಇರುತ್ತೇವೆ, ಇದು ನಮ್ಮ ಬದ್ಧತೆ.
ರಾಜ್ಯದ ಯಶಸ್ಸಿಗೆ ಮೈಲುಗಲ್ಲಾಗುವ
ಮೇಕೆದಾಟು ಯೋಜನೆಗಾಗಿ ಮೊದಲ ದಿನದ ಪಾದಯಾತ್ರೆ ಸಾಗುವ ವಿವರ ಇಂತಿದೆ.
ಬನ್ನಿ ನಮ್ಮ ನೀರಿಗಾಗಿ ಹೆಜ್ಜೆ ಹಾಕೋಣ.#MekedatuPadayatre pic.twitter.com/gJBV3TUh5l
— Karnataka Congress (@INCKarnataka) January 9, 2022
ಜನವರಿ 17ಕ್ಕೆ ಸುಬ್ರಮಣ್ಯ ಚೌಟ್ರಿ ಲಕ್ಷ್ಮೀಪುರದಲ್ಲಿ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಎಎಸ್ ಕಲ್ಯಾಣ ಮಂಟಪ ತಲುಪಲಿರುವ ಪಾದಯಾತ್ರೆ ಸಂಜೆ ಮತ್ತೆ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ ತಲುಪಲಿದೆ. ಅಂದು ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ ಸಭೆ, ವಾಸ್ತವ್ಯ ಮಾಡಲಿದ್ದಾರೆ.
ಜನವರಿ 18ಕ್ಕೆ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಮೇಕ್ರಿ ಸರ್ಕಲ್ ಹತ್ತಿರದ ಗಾಯತ್ರಿ ವಿಹಾರದಲ್ಲಿ ಭೋಜನ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ. ಅರಮನೆ ಆವರಣದ ಗಾಯತ್ರಿ ವಿಹಾರದಲ್ಲೇ ನಾಯಕರು ವಾಸ್ತವ್ಯ ಮಾಡಲಿದ್ದಾರೆ.
ಜನವರಿ 19ಕ್ಕೆ ರೇಸ್ ಕೋರ್ಸ್ ರಸ್ತೆಯಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1.30ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜ್ ತಲುಪಲಿರುವ ನಾಯಕರು, ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಸಲಿದ್ದಾರೆ.