ಬೆಂಗಳೂರು: ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಿ ನಿನ್ನೆಯಿಂದ ಪಾದಯಾತ್ರೆಯನ್ನು ಆರಂಭಿಸಿದ್ದರು. ಆದರೆ ಸಿದ್ದರಾಮಯ್ಯರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ಅರ್ಧದಲ್ಲೇ ಪಾದಯಾತ್ರೆಯನ್ನು ನಿಲ್ಲಿಸಿ ಬೆಂಗಳೂರಿಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ಮಾಡಿ ಪಾದಯಾತ್ರೆ ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಈ ಬಗ್ಗೆ ಮಾತನಾಡಿದ ಡಿಕೆಶಿ ಪಾದಯಾತ್ರೆ ಚೆನ್ನಾಗಿ ನಡೆಯುತ್ತಿದೆ. ನಿನ್ನೆ ದೊಡ್ಡ ಆಲಹಳ್ಳಿಯವರೆಗೆ ಏನು ತೊಂದರೆ ಇಲ್ಲದಂತೆ ಬಂದಿದ್ದೇವೆ. ಇಂದು ಇಲ್ಲಿಂದ ಕನಕಪುರದ ವರೆಗೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ಮಾಹಿತಿಯನ್ನು ನೀಡಿ, ಅವರ ಆರೋಗ್ಯವನ್ನು ವಿಚಾರಿಸಿದರು.
Advertisement
Advertisement
ಅದಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ ಈಗ ಸುಧಾರಿಸಿಕೊಂಡಿದ್ದೇನೆ. ಸಂಜೆಯ ಮೇಲೆ ಪಾದಯಾತ್ರೆಗೆ ಬರುತ್ತೇನೆ ಎಂದು ಹೇಳಿದ್ದಕ್ಕೆ ಇಂದು ಬೇಡ ಸರಿಯಾಗಿ ಚಿಕಿತ್ಸೆಯನ್ನು ತೆಗೆದುಕೊಂಡು ವಿಶ್ರಾಂತಿಯನ್ನು ಪಡೆದುಕೊಂಡು ನಾಳೆ ಬನ್ನಿ ಎಂದು ತಿಳಿಸಿದರು. ಇದಕ್ಕೆ ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದರು. ಇದನ್ನೂ ಓದಿ: ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ
Advertisement
Advertisement
ಈ ವೇಳೆ ಡಿಕೆಶಿ ಸ್ಯಾಬ್ ಟೆಸ್ಟ್ ಬಗ್ಗೆ ಮಾತನಾಡಿ, ನಿನ್ನೆ ಜಿಲ್ಲಾಡಳಿತದವರು ಡಿಎಚ್‌ಓ ಅಧಿಕಾರಿಗಳನ್ನು ಮನೆ ಹತ್ತಿರ ಕಳುಹಿಸಿದ್ದರು. ಸ್ವ್ಯಾಬ್ ಕೇಳಲು ಬಂದಿದ್ದರು. ಅದಕ್ಕೆ ನಾನು ಇಂತದ್ದನ್ನೆಲ್ಲಾ ನಾನು ನೋಡಿದ್ದೇನೆ. ನನ್ನ ಆರೋಗ್ಯ ಚೆನ್ನಾಗಿದೆ. ಸುಮ್ಮನೆ ಹೋಗಿ ಎಂದು ಕಳುಹಿಸಿದ್ದೇನೆ ಎಂದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ತಲೆ ಕೆಡಿಸಿಕೊಳ್ಳಬೇಡಾ. ನಿನ್ನ ಪಾಡಿಗೆ ಚೆನ್ನಾಗಿ ಇವತ್ತು ಪಾದಯಾತ್ರೆ ಮಾಡು, ನೀನು ಹೇಳಿದ ಹಾಗೇ ನಾನು ನಾಳೆ ಬಂದು ಜಾಯಿನ್ ಆಗುತ್ತೇನೆ ಎಂದಿದ್ದಾರೆ. ಅದಕ್ಕೆ ಡಿಕೆಶಿ ಓಕೆ ಸರ್ ರೆಸ್ಟ್ ಮಾಡಿ ಎಂದು ಕರೆಯನ್ನು ಕಟ್ ಮಾಡಿದ್ದಾರೆ. ಇದನ್ನೂ ಓದಿ: ನನ್ನನ್ನು ನೋಡಿದ್ರೆ ಕೊರೊನಾ ಇದೆ ಅಂತ ಅನ್ನಿಸುತ್ತಾ?: ಡಿ.ಕೆ. ಶಿವಕುಮಾರ್