ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹೌಸಿಂಗ್ ಕಾಲೋನಿ ಖಾನಬಲ್ ಪ್ರದೇಶದಲ್ಲಿನ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡುವಂತೆ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ (Mehbooba Mufti) ಸೇರಿದಂತೆ ಏಳು ಮಾಜಿ ಶಾಸಕರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಅನಂತನಾಗ್‌ನ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಈ ನೋಟಿಸ್ ಹೊರಡಿಸಿದ್ದಾರೆ. ಮಾಜಿ ಶಾಸಕ ಮೊಹಮ್ಮದ್ ಅಲ್ತಾಫ್ ವಾನಿ, ಮಾಜಿ ಶಾಸಕ ಅಬ್ದುಲ್ ರಹೀಮ್ ರಾಥರ್, ಮಾಜಿ ಶಾಸಕ ಅಬ್ದುಲ್ ಮಜೀದ್ ಭಟ್ ಮತ್ತು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ವಸತಿ ಗೃಹ ತೆರವು ಮಾಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್ ಸೇವೆ ಮಾಡಲು ನೇಮಕವಾಗಿದ್ರು 10 ಜನ!
Advertisement
Advertisement
ಇವರಿಗೆ ಸೇರಿದ ಸರ್ಕಾರಿ ವಸತಿ ಗೃಹ ಸಂಖ್ಯೆ 1, 4, 6 ಮತ್ತು 7 ರ ನಿವಾಸಗಳನ್ನು ತೆರವು ಮಾಡಲು ತಿಳಿಸಲಾಗಿದೆ. 24 ಗಂಟೆಗಳ ಒಳಗೆ ಖಾಲಿ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಮಾಜಿ ಶಾಸಕ ಅಲ್ತಾಫ್ ಷಾ ಅಲಿಯಾಸ್ ಕಾಲೋ, ಮಾಜಿ ಎಂಎಲ್‌ಸಿ ಬಶೀರ್ ಶಾ ಅಲಿಯಾಸ್ ವೀರಿ, ಮಾಜಿ ಎಂಎಲ್‌ಸಿ ಚೌಧರಿ ನಿಜಾಮುದ್ದೀನ್, ಮಾಜಿ ಶಾಸಕ ಅಬ್ದುಲ್ ಕಬೀರ್ ಪಠಾಣ್ ಮತ್ತು ಎಂಸಿ ಕೌನ್ಸಿಲರ್ ಶೇಖ್ ಮೊಹಿಯುದ್ದೀನ್ ಸೇರಿದಂತೆ ಇತರರು ಸಹ ಸರ್ಕಾರಿ ವಸತಿ ಗೃಹ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೊಳಿಸಿ – ಗಿರಿರಾಜ್ ಸಿಂಗ್
Advertisement
ಹೌಸಿಂಗ್ ಕಾಲೋನಿ ಖಾನಬಾಳದಲ್ಲಿ ಸರ್ಕಾರಿ ಕ್ವಾರ್ಟರ್ಸ್ ಇದ್ದು, ನಿಗದಿತ ಸಮಯದೊಳಗೆ ನಿವೇಶನ ತೆರವು ಮಾಡದಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.