‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರಕ್ಕೆ ಹಾಡಿದ ಮೆಹಬೂಬ್ ಸಾಬ್

Public TV
1 Min Read
FotoJet 8 7

ಗ್ರಾಮೀಣ ಸೊಗಡಿನ ಕಥಾಹಂದರ ಹೊಂದಿರುವ ‘ದೊಡ್ಡಹಟ್ಟಿ ಬೋರೇಗೌಡ’ (Doddhatti Boregowda) ಚಿತ್ರ ಟ್ರೈಲರ್ ಮೂಲಕ ಜನಮನ ಗೆದ್ದಿದೆ. 2021 ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.  ಬಿಡುಗಡೆಗೂ ಪೂರ್ವದಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಹಾಡೊಂದು (Song) ಜನವರಿ 30 ರ ಸೋಮವಾರ ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಹರ್ಷವರ್ಧನ್ ರಾಜ್ ಸಂಗೀತ ನೀಡಿರುವ ಈ ಹಾಡನ್ನು ‘ಸರಿಗಮಪ’ ಖ್ಯಾತಿಯ ಮೆಹಬೂಬ್ ಸಾಬ್ (Mehboob Sabad) ಹಾಡಿದ್ದಾರೆ.

FotoJet 7 13

ರಾಜರಾಜೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ಬಿ.ಸಿ.ಶಶಿಕುಮಾರ್ ಹಾಗೂ ಕೆ.ಎಂ.ಲೋಕೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  ತರ್ಲೆ ವಿಲೇಜ್,  ಪರಸಂಗ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ‌.ಎಂ.ರಘು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.  ಹಳ್ಳಿಯ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಲಾವಿದರಿಗೆ  ಮೂರು ತಿಂಗಳು ವಿಶೇಷ ತರಬೇತಿ ನೀಡಲಾಗಿದೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳು

FotoJet 9 8

ಶಿವಣ್ಣ ಬೀರಹುಂಡಿ, ಗೀತಾ, ಲಾವಣ್ಯ, ಕಲಾರತಿ ಮಹದೇವ್, ಕಾತ್ಯಾಯಿನಿ, ಯೋಗೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ವೀನಸ್ ನಾಗರಾಜ್ ಅವರ  ಛಾಯಾಗ್ರಹಣವಿರುವ ಈ ಚಿತ್ರ ಈಗಾಗಲೇ ಹಲವು ಪ್ರಶಸ್ತಿಗಳು ಸಂದಿವೆ. ಅಲ್ಲದೇ, ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಈ ಸಿನಿಮಾ ಪ್ರದರ್ಶನ ಕಂಡಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *