ಬೆಂಗಳೂರು: ವಿವಾಹಿತ ಮಹಿಳೆಯರ (Women) ಬಲವರ್ಧನೆಗಾಗಿ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ (Beauty Pageant) ಡಾ.ಮೇಘನಾ ರೆಡ್ಡಿ `ಮಿಸೆಸ್ ಕರ್ನಾಟಕ -2022′ (Misses Karnataka 2022) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಬಿಗ್ ಬಾಸ್ (BigBoss) ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಫೆಮಿನಾ ಮಿಸ್ ಇಂಡಿಯಾದ ಪ್ರಾಚಿ ಮಿಶ್ರಾ, ಗರ್ಭಿಣಿ (Pregnant) ಮಹಿಳೆಯರ ಆರೋಗ್ಯ ಸುರಕ್ಷತೆ ತಜ್ಲೆ ಲೀನಾ ಸವೂರ್, ಡಾ.ಮಂಜುಶ ಪಾಟೀಲ್, ಸೌತ್ ಇಂಡಿಯಾ (South India) ಗಾರ್ಮೆಂಟ್ ಉತ್ಪಾದಕರ ಸಂಘದ ಅಧ್ಯಕ್ಷ ಅನುರಾಗ್ ಸಿಂಗ್ಲಾ ಸೌಂದರ್ಯ ಸ್ಪರ್ಧೆಗೆ ಚಾಲನೆ ನೀಡಿದರು. ಇದನ್ನೂ ಓದಿ: ಭಾರೀ ಮೊತ್ತಕ್ಕೆ ‘F0R REGN’ ಚಿತ್ರದ ಆಡಿಯೋ ಹಕ್ಕು ಸೇಲ್
Advertisement
Advertisement
70ಕ್ಕೂ ಹೆಚ್ಚು ಮಹಿಳೆಯರು ಮಿಸೆಸ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂತಿಮ ಸುತ್ತಿಗೆ 10 ಮಹಿಳೆಯರು ಆಯ್ಕೆಯಾದರು. ಈ ಪೈಕಿ ಮೇಘನಾ ರೆಡ್ಡಿ ಪ್ರಥಮ ಸ್ಥಾನ ಗಳಿಸಿ ಮಿಸೆಸ್ ಕಿರೀಟ ಧರಿಸಿದರು. ಬಿಂದಿ ರಮೇಶ್ ದ್ವಿತೀಯ ಸ್ಥಾನ ಹಾಗೂ ನೌಶೀನ್ ಫರೀಫ್ ತೃತೀಯ ಸ್ಥಾನ ಪಡೆದರು. ಇದನ್ನೂ ಓದಿ: ಮೂರು ದಿನಕ್ಕೆ ‘ಕಾಂತಾರ’ ಬಾಕ್ಸ್ ಆಫೀಸ್ ಗಳಿಕೆ : ಸಿನಿ ಪಂಡಿತರ ಪಕ್ಕಾ ಲೆಕ್ಕಾಚಾರ
Advertisement
Advertisement
ಇದೇ ವೇಳೆ ಮಾತನಾಡಿದ ಮಹಿಳೆಯರು, ಮಹಿಳೆ ಅಬಲೆ ಅಲ್ಲ, ಸಬಲೆ. ಕುಟುಂಬ ನಿರ್ವಹಣೆಯೊಂದಿಗೆ ಸಮಾಜದ ಅಭಿವೃದ್ಧಿಗಾಗಿಯೂ ದುಡಿಯಬಲ್ಲಳು. ಹಾಗಾಗಿಯೇ ಮಹಿಳೆಯರಿಂದು ರಾಜಕೀಯ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಶಕ್ತಿಮೀರಿ ಸಾಧನೆ ಮಾಡುತ್ತಿದ್ದಾರೆ. ತಾಯಿಯಾಗಿ ಮಕ್ಕಳ, ಪಾಲನೆ ಪೋಷಣೆ ಮಾಡುವ ಜೊತೆ-ಜೊತೆಗೆ ಸೌಂದರ್ಯ, ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು. ಮಹಿಳೆ ಆರೋಗ್ಯವಂತರಾಗಿದ್ದಾರೆ ತನ್ನ ಕುಟುಂಬ ಹಾಗೂ ಸಮಾಜವೂ ಆರೋಗ್ಯವಾಗಿರುತ್ತದೆ ಎಂಬ ಸಲಹೆ ನೀಡಿದರು.