‘ಇರುವುದೆಲ್ಲವ ಬಿಟ್ಟು’ ಹೆಂಡ್ತಿ ಸಿನಿಮಾ ನೋಡಲು ಬಂದ್ರು ಚಿರು ಸರ್ಜಾ

Public TV
1 Min Read
IruvudellavaBittu FF

ಬೆಂಗಳೂರು: ಮದುವೆಯಾದ ನಂತರ ಮೇಘನಾ ರಾಜ್ ನಟಿಸಿರುವ ಮೊದಲ ಸಿನಿಮಾ ತೆರೆಗೆ ಬಂದಿದೆ.

ಕಾಂತಾ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸಾಗಿದೆ. ಈ ಸಿನಿಮಾವನ್ನು ಮೊದಲ ದಿನದ ಮೊದಲ ಶೋ ನೋಡಲು ಚಿರಂಜೀವಿ ಸರ್ಜಾ ಮತ್ತು ಧೃವಾ ಸರ್ಜಾ ಮೆಜೆಸ್ಟಿಕ್ ನ ಅನುಪಮಾ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಇವರಿಬ್ಬರೂ ಬರೋ ಸುದ್ದಿ ತಿಳಿದ ಅಭಿಮಾನಿಗಳು ಕಿಕ್ಕಿರಿದು ಥಿಯೇಟರ್ ಬಳಿ ಜಮಾಯಿಸಿದ್ದರು.

ಮದುವೆಯಾದ ನಂತರ ಹೆಚ್ಚಿನ ನಟಿಯರು ಸಂಸಾರದ ಸಡಗರಗಳಲ್ಲಿ ಕಳೆದು ಹೋಗೋದೇ ಹೆಚ್ಚು. ಚಿರಂಜೀವಿಯವರನ್ನು ಮದುವೆಯಾದ ಮೇಘನಾ ಕೂಡಾ ಅದೇ ಸಾಲಿಗೆ ಸೇರುತ್ತಾರಾ ಅಂತೊಂದು ಆತಂಕ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಆದರೆ ಕಾಂತ ಕನ್ನಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರ ಆ ಆತಂಕವನ್ನು ದೂರಾಗಿಸಿದೆ!

vlcsnap 2018 09 21 14h44m36s763

ಮೇಘನಾ ರಾಜ್ ಇರುವುದೆಲ್ಲವ ಬಿಟ್ಟು ಚಿತ್ರದ ಮೂಲಕ ಪಕ್ಕಾ ಹಾಟ್ ಲುಕ್ಕಿನೊಂದಿಗೆ ಮರಳಿ ಬಂದಿದ್ದಾರೆ. ಈ ಚಿತ್ರವೇ ಅವರ ಪಾಲಿನ ಸೆಕೆಂಡ್ ಇನ್ನಿಂಗ್ಸನ್ನು ಭರ್ಜರಿಯಾಗಿಸಿದೆ. ಇರುವುದೆಲ್ಲವ ಬಿಟ್ಟು ಚಿತ್ರದ ಪ್ರತೀ ಪಾತ್ರಗಳನ್ನೂ ನಿರ್ದೇಶಕ ಕಾಂತ ಕನ್ನಲಿ ವಿಶಿಷ್ಟವಾಗಿಯೇ ರೂಪಿಸಿದ್ದಾರೆ. ಅದರಲ್ಲೊಂದು ಮುಖ್ಯ ಪಾತ್ರವನ್ನು ಮೇಘನಾ ನಿರ್ವಹಿಸಿದ್ದಾರೆ. ಈವರೆಗೂ ಥರ ಥರದ ಪಾತ್ರಗಳಲ್ಲಿ ನಟಿಸಿದ್ದರೂ ಮೇಘನಾ ಅವರು ಈ ಥರದ ಹಾಟ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಇದೇ ಮೊದಲು. ತಿಲಕ್‍ಗೆ ಜೋಡಿಯಾಗಿ ನಟಿಸಿರೋ ಮೇಘನಾ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲು ಹೊರಟ ಯುವ ಮನಸುಗಳ ಸಂಕೇತದಂಥಾ ಪಾತ್ರ ನಿರ್ವಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *