ಮೇಘನಾ ರಾಜ್ (Meghanaraj) ಅವರ ಸಿನಿಮಾಗಾಗಿ ಎದುರು ನೋಡ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ತತ್ಸಮ ತದ್ಭವ’ ಸಿನಿಮಾ ಮೂಲಕ ಮತ್ತೆ ಮೇಘನಾ ರಾಜ್ ಸ್ಯಾಂಡಲ್‌ವುಡ್‌ಗೆ (Sandalwood ಕಂಬ್ಯಾಕ್ ಆಗಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.
ಜೀವನದಲ್ಲಿ ಸಾಕಷ್ಟು ಸಂಕಷ್ಟದ ದಿನಗಳನ್ನ ಎದುರಿಸಿದ್ದರು. ಬಳಿಕ ಮಗ ರಾಯನ್ ಪಾಲನೆಯಲ್ಲಿ ಬ್ಯುಸಿಯಾಗಿದ್ದ ನಟಿ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಮಹಿಳಾ ಪ್ರಧಾನ ಚಿತ್ರದ ಮೂಲಕ ಮೇಘನಾ ಬರುತ್ತಿದ್ದಾರೆ.
ಪನ್ನಗ ಭರಣ, ಸ್ಪೂರ್ತಿ ಅನಿಲ್ ನಿರ್ಮಾಣದ ‘ತತ್ಸಮ ತದ್ಭವ’ (Tatsama Tadbhava Film) ಸಸ್ಪೆನ್ಸ್ ಕ್ರೈಂ ಜಾನರ್ ಚಿತ್ರವಾಗಿದೆ. ಮೇಘನಾ ರಾಜ್ ಅವರು ಡಿಫರೆಂಟ್ ರೋಲ್‌ನಲ್ಲಿ ನಟಿಸಿದ್ದಾರೆ. ಶ್ರುತಿ ಕೃಷ್ಣ ಅವರು ಮನೋವೈದ್ಯ ಪಾತ್ರಕ್ಕೆ ಜೀವತುಂಬಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಖಡಕ್ ಪೊಲೀಸ್ ಆಧಿಕಾರಿಯಾಗಿ ನಟಿಸಿದ್ದಾರೆ. ಸದ್ಯ ಮೇಘನಾ ಏ.12ರಂದು ಕುಂಬಳಕಾಯಿ ಒಡೆಯುವ ಮೂಲಕ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಇದನ್ನೂ ಓದಿ:ಪರಿಣಿತಿ ಜೊತೆಗಿನ ಎಂಗೇಜ್ ಮೆಂಟ್ ವಿಚಾರ: ಹೇಳ್ತೀನಿ ಎಂದು ತಪ್ಪಿಸಿಕೊಂಡ ಎಎಪಿ ಮುಖಂಡ
ಚಿತ್ರಕ್ಕೆ ವಿಶಾಲ್ ಅತ್ರೇಯ ನಿರ್ದೇಶನ ಮಾಡಿದ್ದರೆ, ವಾಸುಕಿ ವೈಭವ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಎಲೆಕ್ಷನ್ ಮುಗಿದ ಮೇಲೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ ಚಿತ್ರತಂಡ. ಚುನಾವಣೆಯ ಬಳಿಕ ಮೇಘನಾ ನಟನೆಯ ಈ ಚಿತ್ರವನ್ನ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದಾಗಿದೆ.