ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಮತ್ತೆ ಸಿನಿಮಾ, ರಿಯಾಲಿಟಿ ಶೋನತ್ತ ಬ್ಯುಸಿಯಾಗಿದ್ದಾರೆ. ಮಗ ರಾಯನ್ ವೀಡಿಯೋ ಶೇರ್ ಮಾಡಿ, ಮೊಬೈಲ್ ಬಿಡಿ ಮೈದಾನಕ್ಕೆ ಬನ್ನಿ ಅಂತಾ ಸೋಷಿಯಲ್ ಮೀಡಿಯಾ ಸಂದೇಶ ನೀಡಿದ್ದಾರೆ.
Advertisement
ಪತಿ ಚಿರಂಜೀವಿ ಅಗಲಿಕೆಯ ನೋವಿನ ನಂತರ ಮತ್ತೆ ಸಿನಿಮಾಗಳಲ್ಲಿ ರಾಜಹುಲಿ ನಟಿ ಮೇಘನಾ ರಾಜ್ ಆಕ್ಟೀವ್ ಆಗಿದ್ದಾರೆ. ಮಗ ರಾಯನ್ ನೋಡಿ ಜೀವನದ ಖುಷಿಯನ್ನ ಸವಿಯುತ್ತಿದ್ದಾರೆ. ಸ್ಟಾರ್ಗಳ ಮಕ್ಕಳು ಅಂತಾ ನಾಲ್ಕು ಗೋಡೆಯ ಮಧ್ಯೆ ಬೇಲಿ ಹಾಕಿಕೊಂಡು ಬದುಕಬಾರದು ಅಂತಾ ಈಗಿಂದಲೇ ಅಕ್ಕ ಪಕ್ಕದ ಮಕ್ಕಳ ಜೊತೆ ಆಟವಾಡಲು ಅವರೊಂದಿಗೆ ಬೆರೆಯಲು ಮೇಘನಾ ರಾಜ್ ಪ್ರೋತ್ಸಾಹಿಸುತ್ತಿದ್ದಾರೆ. ಇದರ ಜೊತೆಗೆ ಮಗ ರಾಯನ್ ವೀಡಿಯೋ ತುಣುಕು ಶೇರ್ ಮಾಡಿ, ಮಕ್ಕಳಿಗೆ ಮೊಬೈಲ್ ಬಿಡಿ ಮೈದಾನಕ್ಕೆ ಬನ್ನಿ ಎಂದು ಅರ್ಥಪೂರ್ಣ ಸಂದೇಶವನ್ನು ನೀಡಿದ್ದಾರೆ. ಇದನ್ನೂ ಓದಿ: ಅಂತಿಂಥ ಹೆಣ್ಣು ಇವಳಲ್ಲಾ ಎಂದು ಪತ್ನಿಯನ್ನು ಹೊಗಳಿದ ನವರಸ ನಾಯಕ ಜಗ್ಗೇಶ್
Advertisement
View this post on Instagram
Advertisement
ಇದೇ ರೀತಿ ನಾನು ಮತ್ತು ಚಿರು ಬಾಲ್ಯದಲ್ಲಿ ಬೆಳೆದಿದ್ದೀವಿ. ಅದರಂತೆಯೇ ಮಗ ರಾಯನ್ ಕೂಡ ನಮ್ಮ ಏರಿಯಾ ಹುಡುಗರ ಜೊತೆ ಆಟವಾಡ್ತಿದ್ದಾನೆ ಎಂದು ಮಗ ರಾಯನ್ ವೀಡಿಯೋ ಶೇರ್ ಮಾಡಿ, ಮೊಬೈಲ್ ಬಿಡಿ ಮೈದಾನಕ್ಕೆ ಬನ್ನಿ ಎಂಬ ಸಂದೇಶವನ್ನು ಮೇಘನಾ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.