ಸ್ಯಾಂಡಲ್ವುಡ್ (Sandalwood) ನಟಿ ಮೇಘನಾ ರಾಜ್ (Meghana Raj) ಮತ್ತೆ ಸುದ್ದಿಯಲ್ಲಿದ್ದಾರೆ. ಪತಿ ಜೊತೆಗಿನ ತಮ್ಮ ಫೋಟೋ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.
ರಾಜಾಹುಲಿ, ಅಲ್ಲಮ, ಆಟಗಾರ ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ಮೇಘನಾ ರಾಜ್ ಸದ್ಯ ಮಗ ರಾಯನ್ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಪತಿ ಚಿರಂಜೀವಿ ಸರ್ಜಾ (Chiranjeevi Sarja) ಅಗಲಿಕೆಯ ನಂತರ ಮಗನ ಆರೈಕೆಯಲ್ಲಿ ಬ್ಯುಸಿಯಿದ್ದ ನಟಿ ಈಗ ಹೊಸ ಪ್ರಾಜೆಕ್ಟ್ಗಳ ಮೂಲಕ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಸದ್ಯ ಪತಿ ಚಿರು ಜೊತೆಗಿನ ಬ್ಯೂಟಿಫುಲ್ ಫೋಟೋವೊಂದನ್ನ ಮೇಘನಾ ರಾಜ್ ಶೇರ್ ಮಾಡಿದ್ದಾರೆ. ಮದುವೆಗೂ ಮುನ್ನ ತೆಗೆದ ಚಿರು ಜೊತೆಗಿನ ತಮ್ಮ ಹಳೆಯ ಫೋಟೋವನ್ನ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ
View this post on Instagram
ಸರ್ಜಾ ಕುಟುಂಬಕ್ಕೆ ಮತ್ತು ಚಿತ್ರರಂಗಕ್ಕೆ ಚಿರು ಅಗಲಿಕೆ ತುಂಬಲಾರದ ನಷ್ಟ, ಚಿರು ನೆನಪಿಗೆ ಪೂರಕವಾಗಿರುವಂತಹ ವಸ್ತು ಮತ್ತು ಫೋಟೋಗಳನ್ನ ಮೇಘನಾ ಜೋಪಾನ ಮಾಡುತ್ತಿದ್ದಾರೆ. ಇದೀಗ ಪತಿ ಚಿರು ಜೊತೆಗಿನ ರೊಮ್ಯಾಂಟಿಕ್ ಫೋಟೋವೊಂದನ್ನ ಮೇಘನಾ ಶೇರ್ ಮಾಡಿ, ʻನಾವು ಮಾತ್ರʼ ಎಂದು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಇದೀಗ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ.