ಬಹುಭಾಷಾ ನಟಿ ಮೇಘನಾ ರಾಜ್ ಸರ್ಜಾ (Meghana Raj) ಇದೀಗ ದೊಡ್ಡ ಪ್ರಾಜೆಕ್ಟ್ ಮೂಲಕ ಸುದ್ದಿಯಾಗಿದ್ದಾರೆ. ಪುತ್ರ ರಾಯನ್ ರಾಜ್ ಸರ್ಜಾಗೆ ಜನ್ಮಕೊಟ್ಟ ಬಳಿಕ ಕೆಲವು ವರ್ಷಗಳ ಕಾಲ ಅಭಿನಯಕ್ಕೆ ಬ್ರೇಕ್ ಹಾಕಿದ್ದ ಮೇಘನಾ ರಾಜ್ ಇದೀಗ ಮತ್ತೆ ನಟನೆಗೆ ಮರಳಿದ್ದಾರೆ.
ಮೂಲಗಳ ಪ್ರಕಾರ, ಮೇಘನಾ ರಾಜ್ ಇದೀಗ ರಜನಿಕಾಂತ್ (Rajanikanth) ನಟನೆಯ`ಜೈಲರ್ 2′ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಪಾತ್ರದ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ. ಈಗಾಗಲೇ ಮೇಘನಾ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: `ಲಕುಮಿ’ ನಟಿಗೆ ಕೂಡಿ ಬಂತು ಕಂಕಣ ಭಾಗ್ಯ
ತಮಿಳು ಇಂಡಸ್ಟ್ರಿ ಮೇಘನಾಗೆ ಹೊಸದೇನಲ್ಲ. 2012ರಲ್ಲಿ ಮೇಘನಾ `ನಂದ ನಂದಿತ’ ಚಿತ್ರದಲ್ಲಿ ಅಭಿನಯಿಸಿದ್ದರು. ಅತಿಹೆಚ್ಚು ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೀಗೆ ಕನ್ನಡದ ಜೊತೆ ಜೊತೆಗೆ ದಕ್ಷಿಣ ಭಾರತದಲ್ಲಿ ಮೇಘನಾ ಈಗಾಗ್ಲೇ ಹೆಸರು ಮಾಡಿರುವ ನಟಿ. ಇದೀಗ ನೆಲ್ಸನ್ ನಿರ್ದೇಶನದ ಬಹುನಿರೀಕ್ಷಿತ `ಜೈಲರ್ 2′ ಚಿತ್ರದ ಮೂಲಕ ಮತ್ತೆ ಕಾಲಿವುಡ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರಂತೆ ಮೇಘನಾ.
ಅಂದಹಾಗೆ `ಜೈಲರ್ 2′ ಚಿತ್ರ ಕೊನೆಯ ಶೆಡ್ಯೂಲ್ ಚಿತ್ರೀಕರಣ ಬಾಕಿ ಉಳಿಸಿಕೊಂಡಿದ್ದು, ಮೈಸೂರಿನಲ್ಲೇ ಜೈಲರ್ 2 ಚಿತ್ರದ ಬಹುಭಾಗದ ಚಿತ್ರೀಕರಣ ನಡೆದಿದೆ. ಒಟ್ಟಿನಲ್ಲಿ ಜೈಲರ್ 2 ಚಿತ್ರದ ಬಳಿಕ ಮೇಘನಾ ಸಿನಿಮಾ ಜರ್ನಿ ಉನ್ನತ ಮಟ್ಟಕ್ಕೆ ಏರುವ ನಿರೀಕ್ಷೆಯಿದೆ.ಇದನ್ನೂ ಓದಿ: ರಜನಿ-ಕಮಲ್ ಬಿಗ್ ಪ್ರಾಜೆಕ್ಟ್‌ನಿಂದ ಹೊರನಡೆದ ಖುಷ್ಬೂ ಪತಿ – ಕಾರಣ ಏನು?

