Connect with us

Cinema

ಕಾಳಿದಾಸನ ಸಂಗಾತಿ ಮೇಘನಾ ಗಾಂವ್ಕರ್!

Published

on

ಬೆಂಗಳೂರು: ನಟಿ ಮೇಘನಾ ಗಾಂವ್ಕರ್ ಎರಡು ವರ್ಷದಿಂದೀಚೆಗೆ ಚಿತ್ರರಂಗದಿಂದ ನಾಪತ್ತೆಯಾದಂತಿದ್ದರು. ಇದೀಗ ಈ ಸುದೀರ್ಘಾವಧಿಯ ನಂತರ ವಿಶಿಷ್ಟವಾದೊಂದು ಚಿತ್ರದ ಮೂಲಕ ಅವರು ವಾಪಾಸಾಗಿದ್ದಾರೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಮೇಘನಾ ನವರಸ ನಾಯಕ ಜಗ್ಗೇಶ್ ಅವರಿಗೆ ನಾಯಕಿಯಾಗಿದ್ದಾರೆ!

ಈ ಚಿತ್ರದ ಹೆಸರು ಕಾಳಿದಾಸ ಕನ್ನಡ ಮೇಷ್ಟ್ರು. ಇದನ್ನು ಖ್ಯಾತ ಗೀತ ಸಾಹಿತಿ ಕವಿರಾಜ್ ನಿರ್ದೇಶನ ಮಾಡಲಿದ್ದಾರೆ. ಬದುಕಿಗೆ ಹತ್ತಿರಾದ ಕಥೆಯೊಂದಕ್ಕೆ ಕವಿರಾಜ್ ಕಮರ್ಶಿಯಲ್ ಚೌಕಟ್ಟು ನೀಡಲು ಅಣಿಯಾಗಿದ್ದಾರೆ. ಈ ಚಿತ್ರಕ್ಕೆ ಮೇಘನಾ ಗಾಂವ್ಕರ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

Advertisement
Continue Reading Below

ಈ ಹಿಂದೆ 8 ಎಂಎಂ ಚಿತ್ರದ ಮೂಲಕ ಜಗ್ಗೇಶ್ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿಯೂ ಕೂಡಾ ವಿಶೇಷವಾದ ಪಾತ್ರವನ್ನು ಕವಿರಾಜ್ ಸೃಷ್ಟಿ ಮಾಡಿದ್ದಾರಂತೆ. ಮದುವೆಯ ಮಮತೆಯ ಕರೆಯೋಲೆ ಚಿತ್ರದ ನಂತರ ಈ ಕಥೆ ರಚನೆಯಲ್ಲಿ ತೊಡಗಿಕೊಂಡಿದ್ದ ಕವಿರಾಜ್ ಇದೀಗ ಹೊಸಾ ಹುರುಪಿನೊಂದಿಗೆ ಮತ್ತೆ ಆಗಮಿಸಿದ್ದಾರೆ.

ಮೇಘನಾ ಗಾಂವ್ಕರ್ ಕೂಡಾ ಎರಡು ವರ್ಷದಿಂದ ಯಾವ ಚಿತ್ರದಲ್ಲಿಯೂ ನಟಿಸಿರಲಿಲ್ಲ. ಅವರ ಪಾತ್ರವೂ ಈ ಚಿತ್ರದಲ್ಲಿ ವಿಶೇಷವಾಗಿದೆಯಂತೆ. ಈ ಮೂಲಕ ಮತ್ತೆ ವಾಪಾಸಾಗುತ್ತಿರೋದರ ಬಗ್ಗೆ ಮೇಘನಾ ಕೂಡಾ ಖುಷಿಗೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *