ರವಿಚಂದ್ರನ್ ಗೆ ನಾಯಕಿಯಾದ ಮೇಘನಾ ಗಾಂವ್ಕರ್

Public TV
1 Min Read
meghana gaonkar 4

ಶಿವಾಜಿ ಸುರತ್ಕಲ್ 2 ಸಿನಿಮಾದ ಗೆಲುವಿನ ಸಂಭ್ರಮದಲ್ಲಿರುವ ನಟಿ ಮೇಘನಾ ಗಾಂವ್ಕರ್ (Meghana Gaonkar), ತಮ್ಮ  ಅಭಿಮಾನಿಗಳಿಗೆ ಇದೇ ಹೊತ್ತಲ್ಲಿ ಮತ್ತೊಂದು ಖುಷಿಯ ಸುದ್ದಿ ನೀಡಿದ್ದಾರೆ. ರವಿಚಂದ್ರನ್ (Ravichandran) ನಾಯಕನಾಗಿ ನಟಿಸುತ್ತಿರುವ ‘ದಿ ಜಡ್ಜ್ ಮೆಂಟ್’ (The Judgment) ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಎರಡು ತಲೆಮಾರಿನ ಕಥೆಯನ್ನು  ಈ ಸಿನಿಮಾ ಹೊಂದಿದ್ದು, ದಿಗಂತ್ (Digant) ಗೆ ನಾಯಕಿ ಧನ್ಯ ಆಗಿದ್ದರೆ, ರವಿಚಂದ್ರನ್ ಅವರಿಗೆ ಮೇಘನಾ ನಾಯಕಿ.

meghana gaonkar 2

ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. G9 communication media & Entertainment ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಗುರುರಾಜ ಬಿ ಕುಲಕರ್ಣಿ(ನಾಡಗೌಡ) (Gururaja Kulkarni) ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಆಕ್ಸಿಡೆಂಟ್, ಲಾಸ್ಟ್‌ ಬಸ್, ಅಮೃತ ಅಪಾರ್ಟ್‌ಮೆಂಟ್ಸ್ ಚಿತ್ರಗಳನ್ನು ಈ ಸಂಸ್ಥೆ ಮೂಲಕ ನಿರ್ಮಿಸಲಾಗಿತ್ತು ಹಾಗೂ ಈ ಚಿತ್ರಗಳನ್ನು ಗುರುರಾಜ್ ಬಿ ಕುಲಕರ್ಣಿ ಅವರೆ ನಿರ್ದೇಶಿಸಿದ್ದರು. ಸಂಸ್ಥೆಯ ನಾಲ್ಕನೇ ಚಿತ್ರವಾಗಿ ದ ಜಡ್ಜ್ ಮೆಂಟ್ ಚಿತ್ರ ನಿರ್ಮಾಣವಾಗುತ್ತಿದೆ. ಇದನ್ನೂ ಓದಿ:ನಾನು ಮಾತಾಡಿದರೆ ಸಮಂತಾ ಕಥೆ ಅಷ್ಟೆ: ಮತ್ತೆ ಗುಡುಗಿದ ಚಿಟ್ಟಿ ಬಾಬು

meghana gaonkar 1

ಇದೊಂದು ಲಿಗಲ್ ಸಿಸ್ಟಮ್ ಕುರಿತಾದ ಚಿತ್ರ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ. ಲಕ್ಷ್ಮೀಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರೂಪ ರಾಯಪ್ಪ, ರಾಜೇಂದ್ರ ಕಾರಂತ್ ಹೀಗೆ ಬಹುದೊಡ್ಡ ತಾರಾಬಳಗವಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಶಿವು ಬಿ.ಕೆ.ಕುಮಾರ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ ಹಾಗೂ ಎಂ.ಎಸ್ ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

meghana gaonkar 3

ನಿರ್ದೇಶಕರು ಆಕ್ಸಿಡೆಂಟ್ ಮಾಡಿ, ಲಾಸ್ಟ್ ಬಸ್ ಹತ್ತಿ, ಅಮೃತ ಅಪಾರ್ಟ್‌ಮೆಂಟ್ಸ್ ಗೆ ಹೋಗಿ ಈಗ ಜಡ್ಜ್ ಮೆಂಟ್ ನೀಡಲು ಬಂದಿದ್ದಾರೆ.  ಈ ಚಿತ್ರದ ಕಥೆ ಚೆನ್ನಾಗಿದೆ. ನನಗೆ ಈ ತಂಡ ಹಾಗೂ ಜಾನರ್ ಎರಡು ಹೊಸತು. ಆರು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಒಳ್ಳೆಯ ತಂಡದ ಜೊತೆ ಸಿನಿಮಾ ಮಾಡುತ್ತಿರುವ ಖುಷಿಯಿದೆ ಎಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.

Share This Article