ಸಿನಿಮಾದಿಂದ ರಾಜಕಾರಣಕ್ಕೆ ಜಿಗಿಯೋದು ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ನಡೆದುಕೊಂಡು ಬಂದಿರೋ ಸಾಮಾನ್ಯ ಪ್ರಕ್ರಿಯೆ. ನಟಿ ಮೇಘನಾ ಗಾಂವ್ಕರ್ ಕೂಡಾ ಅದೇ ಹಾದಿಯಲ್ಲಿದ್ದಾರಾ ಎಂಬ ಪ್ರಶ್ನೆಯೊಂದು ಇದೀಗ ಅವರ ಅಭಿಮಾನಿ ವಲಯವನ್ನು ಕಾಡುತ್ತಿದೆ. ಅದಕ್ಕೆ ಕಾರಣವಾಗಿರೋದು ಅವರೇ ಕೊಟ್ಟ ಒಂದು ಸುಳಿವು!
ಮೇಘನಾ ಅವರ ಅಜ್ಜಿ ಮಲ್ಲಮ್ಮ ಇತ್ತೀಚೆಗಷ್ಟೇ ಕಲಬುರಗಿಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಸಂಭ್ರಮವನ್ನು ಟ್ವಿಟ್ಟರ್ ಮೂಲಕ ಮೇಘನಾ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಅವರೂ ಕೂಡಾ ಅಜ್ಜಿಯಿಂದ ಸ್ಫೂರ್ತಿಗೊಂಡು ರಾಜಕಾರಣದತ್ತ ವಾಲಿಕೊಂಡಿರೋ ಸುಳಿವನ್ನೂ ಕೊಟ್ಟಿದ್ದಾರೆ.
Advertisement
Advertisement
ಮೇಘನಾ ತನ್ನ ಅಜ್ಜಿ ಮೇಯರ್ ಆದ ಖುಷಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರಲ್ಲಾ? ಅದಕ್ಕೆ ಪ್ರತಿಕ್ರಿಯಿಸಿದ ಪತ್ರಕರ್ತೆಯೊಬ್ಬರು `ನೀವೂ ರಾಜಕೀಯಕ್ಕೆ ಎಂಟ್ರಿ ಕೊಡಿ. ಅಲ್ಲಿ ಬುದ್ಧಿವಂತರ ಅಭಾವವಿದೆ’ ಅಂತ ಕಮೆಂಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಮೇಘನಾ ರಾಜಕೀಯದ ಬಗ್ಗೆ ಬಾಲ್ಯದಿಂದಲೂ ಆಸಕ್ತಿ ಇದೆ. ಮುಂದೇನಾಗುತ್ತೋ ನೋಡೋಣ ಎಂಬರ್ಥದಲ್ಲಿ ಉತ್ತರ ಕೊಟ್ಟಿದ್ದಾರೆ.
Advertisement
I’m so so proud of my grandma, Mallamma. She has won the recent election held & is now the Mayor of Gulbarga. Wohooooo????♥️ Many congratulations, love & power to her always!! @INCIndia
— Meghana Gaonkar (@MeghanaGaonkar) September 24, 2018
Advertisement
ಇದುವೇ ಮುಂದಿನ ದಿನಗಳಲ್ಲಿ ಮೇಘನಾ ರಾಜಕೀಯದ ದಾರಿ ಹಿಡಿಯುವ ಮುನ್ಸೂಚನೆಯನ್ನೂ ರವಾನಿಸಿದೆ. ಮೇಘನಾ ನಟಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿಯೇ ಆದರೂ ಪ್ರೇಕ್ಷಕರ ಮನಸಲ್ಲುಳಿಯುವಂಥಾ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಅದೇಕೋ ಇತ್ತೀಚೆಗೆ ಅವರು ಯಾವ ಚಿತ್ರಗಳಲ್ಲಿಯೂ ನಟಿಸಿಲ್ಲ. ಈ ಅವಧಿಯನ್ನವರು ರಾಜಕೀಯ ಎಂಟ್ರಿಗೆ ಪ್ಲಾನು ಮಾಡಲು ಮೀಸಲಿಟ್ಟಿದ್ದಾರಾ ಎಂಬುದಕ್ಕೆ ಕಾಲವೇ ಸ್ಪಷ್ಟನೆ ಕೊಡಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv