ಸಾರ್ವಜನಿಕವಾಗಿ ಮಹಿಳೆಗೆ ಥಳಿಸಿದ ದುರುಳರು- ವೀಡಿಯೋ ವೈರಲ್

Public TV
1 Min Read
Meghalaya Woman Beaten In Public Over Affair Claim Video Goes Viral

ಶಿಲ್ಲಾಂಗ್: ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಮೇಲೆ ಗುಂಪೊಂದು ಮಹಿಳೆಯೊಬ್ಬಳಿಗೆ ದೊಣ್ಣೆಯಿಂದ ಥಳಿಸಿದ ಅಮಾನವೀಯ ಘಟನೆ ಮೇಘಾಲಯದ (Meghalaya) ಪಶ್ಚಿಮ ಗರೋ ಹಿಲ್ಸ್‌ನ ದಾಡೆಂಗ್ಗ್ರೆ ನಡೆದಿದೆ.

ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಪುರುಷರ ಗುಂಪು ಮಹಿಳೆಯನ್ನು ಸಾರ್ವಜನಿಕವಾಗಿ ಥಳಿಸಿದೆ. ನೆರೆದಿದ್ದ ಸಾರ್ವಜನಿಕರು, ಗುಂಪು ಹಲ್ಲೆ ನಡೆಸುತ್ತಿರುವುದನ್ನು ಸುಮ್ಮನೆ ನಿಂತು ನೊಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಯಲ್ಲಿ ದರ್ಶನ್ ಅರೆಸ್ಟ್ ಆಗಿರೋದು ನೋವುಂಟು ಮಾಡಿದೆ: ನಟಿ ಶ್ರುತಿ

ಮಹಿಳೆಯ ಮೇಲೆ ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಮೇಘಾಲಯದ ಮಹಿಳಾ ಸಬಲೀಕರಣದ ಸಮಿತಿಯ (Assembly Committee on Women’s Empowerment) ಮುಖ್ಯಸ್ಥೆ ಸಾಂತಾ ಮೇರಿ ಶೈಲ್ಲಾ ಅವರು ಪೊಲೀಸರಿಂದ ವರದಿ ನೀಡುವಂತೆ ಕೇಳಿದ್ದಾರೆ. ಇದನ್ನೂ ಓದಿ: ಹೃದಯಾಘಾತದಿಂದ 24 ವರ್ಷದ ಯುವತಿ ಸಾವು

Share This Article