Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

Crime

Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

Public TV
Last updated: June 9, 2025 7:22 pm
Public TV
Share
5 Min Read
Meghalaya Honeymoon 7
SHARE

– ಡಾಬಾ ಮಾಲೀಕನ ಮುಂದೆಯೂ ಸೋನಂ ಸುಳ್ಳಿನ ನಾಟಕ
– ತಂದೆ ಫ್ಯಾಕ್ಟರಿಯಲ್ಲೇ ಸೋನಮ್‌-ರಾಜ್‌ ಸರಸ

ಶಿಲ್ಲಾಂಗ್‌: ಮೇಘಾಲಯದಲ್ಲಿ (Meghalaya) ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಬಗೆದಷ್ಟೂ ರೋಚಕ ಸಂಗತಿಗಳನ್ನು ಬಯಲಾಗುತ್ತಿವೆ. ನಾಲ್ವರು ಕೊಲೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ಶುರು ಮಾಡಿದ ಬಳಿಕ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಬಾಯ್‌ಫ್ರೆಂಡ್‌ (Boyfriend) ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಸೋನಮ್‌ ಕೊಲೆಗೆ ಹೇಗೆಲ್ಲಾ ಪ್ಲ್ಯಾನ್‌ ಮಾಡಿದ್ದಳು ಅನ್ನೋದು ಗೊತ್ತಾಗಿದೆ… ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

Contents
  • – ಡಾಬಾ ಮಾಲೀಕನ ಮುಂದೆಯೂ ಸೋನಂ ಸುಳ್ಳಿನ ನಾಟಕ – ತಂದೆ ಫ್ಯಾಕ್ಟರಿಯಲ್ಲೇ ಸೋನಮ್‌-ರಾಜ್‌ ಸರಸ
  • ತಪ್ಪೊಪ್ಪಿಕೊಂಡ ಸೋನಮ್‌
  • ಫೋನ್‌ಕಾಲ್‌ನಲ್ಲೇ ಪಿನ್‌-ಟು-ಪಿನ್‌ ಅಪ್ಡೇಟ್‌
  • ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಎಸ್ಕೇಪ್‌
  • ಕಾಲ್‌ ಡೀಟೆಲ್ಸ್‌ ರಹಸ್ಯ
  • ಸುಳ್ಳಿನ ನಾಟಕವಾಡಿದ್ದ ಸೋನಂ
  • ಪ್ರೀ ಪ್ಲ್ಯಾನ್ಡ್‌ ಮರ್ಡರ್‌
  • ಸೋನಮ್‌ ತಂದೆ ಕಾರ್ಖಾನೆಯಲ್ಲೇ ಕೆಲಸ ಮಾಡ್ತಿದ್ದ ಬಾಯ್‌ಫ್ರೆಂಡ್‌
  • ಸ್ಫೋಟಕ ತಿರುವು ನೀಡಿದ ಟೂರಿಸ್ಟ್ ಗೈಡ್‌ ಹೇಳಿಕೆ

Meghalaya Honeymoon 8

ತಪ್ಪೊಪ್ಪಿಕೊಂಡ ಸೋನಮ್‌

ಇಂದೋರ್‌ನ (Indore) ರಾಜ ರಘುವಂಶಿ ಕೊಲೆ ಪ್ರಕರಣದಲ್ಲಿ (Honeymoon Murder Case) ಆರೋಪಿ ಪತ್ನಿ ಸೋನಂ ರಘುವಂಶಿಯನ್ನ ಉತ್ತರ ಪ್ರದೇಶದ ಘಾಜಿಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಕೊಲೆಯಲ್ಲಿ ಭಾಗಿಯಾಗಿಯಾಗಿದ್ದ ಮೂವರು ಕಾಂಟ್ರ್ಯಾಕ್ಟ್‌ ಕಿಲ್ಲರ್‌ ಹಾಗೂ ಆಕೆಯ ಬಾಯ್‌ಫ್ರೆಂಡ್‌ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ರಾಜ್‌ ಕುಶ್ವಾಹ್‌ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸೋನಮ್‌ ಕೊಲೆ ಮಾಡಲೆಂದೇ ಹನಿಮೂನ್‌ಗೆ ಪ್ಲ್ಯಾನ್‌ ಮಾಡಿದ್ದಳು ಎಂದು ಹೇಳಲಾಗಿದೆ. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್ – ಪತ್ನಿ ಅರೆಸ್ಟ್

Meghalaya Honeymoon 5

ಫೋನ್‌ಕಾಲ್‌ನಲ್ಲೇ ಪಿನ್‌-ಟು-ಪಿನ್‌ ಅಪ್ಡೇಟ್‌

ರಾಜಾ ರಘುವಂಶಿಯನ್ನ ಕೊಲೆ ಮಾಡಲು ರಾಜ್‌ ಖುದ್ದು ಶಿಲ್ಲಾಂಗ್‌ಗೆ ಹೋಗಿರಲಿಲ್ಲ. ಆರೋಪಿಗಳು, ಸೋನಮ್‌ ಮತ್ತು ರಾಜ್‌ ಪರಸ್ಪರ ಫೋನ್‌ನಲ್ಲೇ ಸಂಪರ್ಕದಲ್ಲಿದ್ದರು. ಸೋನಮ್‌ ಬಳಿ ಎಲ್ಲೆಲ್ಲಿಗೆ ಹೋಗ್ತಿದ್ದಾರೆ ಅನ್ನೋ ಅಪ್ಡೇಟ್‌ ಪಡೆದುಕೊಂಡು ನೇಮಿಸಿದ್ದ ಕಾಂಟ್ರ್ಯಾಕ್ಟ್‌ ಕಿಲ್ಲರ್‌ಗಳಿಗೆ ಫೋನ್‌ ಮೂಲಕವೇ ಮುಂದೇನು ಮಾಡಬೇಕು ಅನ್ನೋದ್ರ ಬಗ್ಗೆ ಸೂಚನೆ ಕೊಡ್ತಿದ್ದ. ಸೋನಮ್‌ ಶಿಲ್ಲಾಂಗ್‌ನಲ್ಲಿ ಕಿಲ್ಲರ್‌ಗಳನ್ನ ಭೇಟಿಯಾದ ಬಳಿಕ ಗೈಡ್‌ಗಳ ನೆಪದಲ್ಲಿ ಚಿರಾಪುಂಜಿ ತಲುಪಿದ್ರು. ಈ ವೇಳೆ ಸೋನಮ್‌ ನಿರ್ಜನ ಪ್ರದೇಶಕ್ಕೆ ಕರೆದೊಯ್ದಾಗ ಅಲ್ಲಿಯೇ ಹಂತಕರು ರಘುವಂಶಿಯನ್ನ ಹತ್ಯೆಗೈದಿದ್ದಾರೆ. ಇದನ್ನೂ ಓದಿ: Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

Meghalaya Honeymoon 6

ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಎಸ್ಕೇಪ್‌

ನಂತರ ಚಿರಾಪುಂಜಿಯಿಂದ ಸೋನಮ್, ಆಕಾಶ್, ವಿಶಾಲ್ ಮತ್ತು ಆನಂದ್ ಶಿಲ್ಲಾಂಗ್‌ಗೆ ಬಂದಿದ್ದಾರೆ, ಅಲ್ಲಿಂದ ನೇರವಾಗಿ ಗುವಾಹಟಿಗೆ ಹೋಗಿದ್ದಾರೆ. ಎಲ್ಲರೂ ಒಂದು ದಿನ ಗುವಾಹಟಿಯಲ್ಲೇ ಕಳೆದು, ಕೊಲೆಗೆ ಬಳಸಿದ್ದ ಆಯುಧಗಳನ್ನು ಬಚ್ಚಿಟ್ಟಿದ್ದಾರೆ. ಮರುದಿನ ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಎಸ್ಕೇಪ್‌ ಆಗಿದ್ದಾರೆ. ಬಹಳ ಹುಡುಕಾಡಿದ ಬಳಿಕ ರಘುವಂಶಿಯ ದೇಹ ಪತ್ತೆಯಾಗಿತ್ತು, ಮುಖದ ಗುರುತಿ ಸಿಗದಂತೆ ವಿಕೃತವಾಗಿ ಕೊಲೆ ಮಾಡಿದ್ದ ಕಾರಣ ಕೈ ಮೇಲಿನ ಟ್ಯಾಟೂ ನೋಡಿ ಪತ್ತೆ ಮಾಡಲಾಯಿತು. 2-3 ದಿನ ಕಳೆದ್ರೂ ಪತ್ನಿ ಸೋನಮ್‌ಳ ಮೃತದೇಹ ಪತ್ತೆಯಾಗದ ಕಾರಣ ಪೊಲೀಸರಿಗೆ ಕೊಲೆ ಸಂಶಯ ಹುಟ್ಟಿಕೊಂಡಿತ್ತು. ಪ್ರಾಥಮಿಕ ತನಿಖೆ ವೇಳೆಯೇ ಸೋನಮ್‌ ಇನ್ನೂ ಜೀವಂತವಾಗಿದ್ದಾಳೆ ಎಂಬುದು ಪೊಲೀಸರಿಗೆ ಖಚಿತವಾಯಿತು. ಜೊತೆಗೆ ರಾಜನ ಕೊಲೆಯ ಹಿಂದೆ ಇವಳದ್ದೇ ಪ್ರಮುಖ ಪಾತ್ರ ಇರಬಹುದು ಎಂಬ ಅನುಮಾನವೂ ಇತ್ತು. ಇದನ್ನೂ ಓದಿ: ಹನಿಮೂನ್‌ ಮರ್ಡರ್‌ | ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್‌ ತಂದೆ

ಕಾಲ್‌ ಡೀಟೆಲ್ಸ್‌ ರಹಸ್ಯ

ಬಳಿಕ ಪೊಲೀಸರು ಸೋನಮ್‌ಳ ಫೋನ್‌ಕಾಲ್‌ ಡೀಟೆಲ್ಸ್‌ ಪರಿಶೀಲಿಸಿದ ಬಳಿಕ ಆಕೆ ರಾಜ್‌ ಕುಶ್ವಾಹ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದದ್ದು ಗೊತ್ತಾಯಿತು. ಇವರಿಬ್ಬರ ನಡುವೆ ಅಕ್ರಮ ಸಂಬಂಧ ಇರುವುದೂ ತಿಳಿದುಬಂದಿತ್ತು. ಇಲ್ಲಿಂದ ತನಿಖೆ ಮತ್ತಷ್ಟು ಚುರುಕುಗೊಂಡಿತು. ಶಿಲ್ಲಾಂಗ್‌ ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿ ನೆರೆಯ ರಾಜ್ಯಗಳಲ್ಲೂ ತಪಾಸಣೆ ಶುರು ಮಾಡಿದ್ರು. ಲಲಿತಪುರದಲ್ಲಿ ನಡೆದ ಮೊದಲ ಕಾರ್ಯಾಚರಣೆಯಲ್ಲೇ ಆರೋಪಿ ಆಕಾಶ್ ರಜಪೂತ್‌ನನ್ನ ಬಂಧಿಸಿದರು. ನಂತರ ರಾಜ್ ಕುಶ್ವಾಹ ಮತ್ತು ವಿಶಾಲ್‌ನನ್ನ ಇಂದೋರ್‌ನಲ್ಲಿ, ಸೋನಮ್‌ನನ್ನ ಘಾಜಿಪುರದಲ್ಲಿ, 5ನೇ ಆರೋಪಿ ಆನಂದ್‌ ಸಾನರ್‌ನಲ್ಲಿ ಬಂಧಿಸಿದ್ರು. ಸದ್ಯ ಸ್ಥಳೀಯ ಪೊಲೀಸರ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ಶಿಲ್ಲಾಂಗ್‌ಗೆ ಕರೆತರಲಾಗುತ್ತದೆ, ಬಳಿಕ ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

Meghalaya Honeymoon 2

ಸುಳ್ಳಿನ ನಾಟಕವಾಡಿದ್ದ ಸೋನಂ

ಇಂದು (ಜೂ.9) ತಡರಾತ್ರಿ 1:42ರ ವೇಳೆ ಘಾಜಿಪುರ ಜಿಲ್ಲೆಯ ನಂದಗಂಜ್‌ನ ಡಾಬಾದಲ್ಲಿ ಮಹಿಳೆಯೊಬ್ಬರು ಭಯಭೀತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ತಲುಪಿದಾಗ ಆಕೆ ತನ್ನನ್ನ ಸೋನಮ್‌ ಎಂದು ಗುರುತಿಸಿಕೊಂಡಳು. ತನ್ನ ಪತಿಯೊಂದಿಗೆ ಮೇಘಾಲಯಕ್ಕೆ ಹೋಗಿರುವುದಾಗಿ ಹೇಳಿಕೊಂಡಿದ್ದಳು, ಡಾಬಾ ಮಾಲೀಕನ ಮುಂದೆಯೂ ಸುಳ್ಳಿನ ನಾಟಕವಾಡಿದ್ದಳು. ಅಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ತನ್ನ ಪತಿಯನ್ನು ಕೊಂದರು. ಬಳಿಕ ನನ್ನನ್ನ ಕಿಡ್ನ್ಯಾಪ್‌ ಮಾಡಿ ಇಲ್ಲಿ ಬಿಟ್ಟುಹೋದ್ರು ಎಂದು ಕಥೆ ಕಟ್ಟಿದ್ದಳು.

Indore Couple Missing

ಪ್ರೀ ಪ್ಲ್ಯಾನ್ಡ್‌ ಮರ್ಡರ್‌

ಕಿಡ್ನ್ಯಾಪ್‌ ಮಾಡಿದ್ಮೇಲೆ ನನ್ನ ಚಿನ್ನಾಭರಣ ದೋಚಿದ್ರು, ಪ್ರಜ್ಞೆ ಬಂದುತ್ತಿದ್ದಂತೆ ಘಾಗಿಪುರದ ಡಾಬಾ ಬಳಿ ಕತ್ತಲೆ ಕೋಣೆಯಲ್ಲಿ ಬಿಟ್ಟು ಹೋದ್ರು ಅಂತೆಲ್ಲ ಕಥೆ ಕಟ್ಟಿದ್ದಳು. ಆದ್ರೆ ಪೊಲೀಸರು ಇದ್ಯಾವುದನ್ನೂ ನಂಬಲಿಲ್ಲ. ಕೊಲೆಗಾರರು ಪತ್ತೆಯಾದ ಕೆಲವೇ ಸಮಯದಲ್ಲಿ ಸೋನಮ್‌ ಕೂಡ ಕಾಣಿಸಿಕೊಂಡಿದ್ದರಿಂದ ಅನುಮಾನ ಹೆಚ್ಚಾಗಿಯೇ ಇತ್ತು. ಆಕೆಯನ್ನು ಬಂಧಿಸಿದ ಬಳಿಕ ಇದು ಪೂರ್ವಯೋಜನೆಯಾಗಿತ್ತು ಎಂಬುದನ್ನು ಪೂರ್ವ ಖಾಸಿ ಹಿಲ್ಸ್ ಎಸ್ಪಿ ವಿವೇಕ್ ಸಿಮ್ ಬಹಿರಂಗಪಡಿಸಿದ್ದಾರೆ.

ಸೋನಮ್‌ ತಂದೆ ಕಾರ್ಖಾನೆಯಲ್ಲೇ ಕೆಲಸ ಮಾಡ್ತಿದ್ದ ಬಾಯ್‌ಫ್ರೆಂಡ್‌

ಸೋಮನ್‌ ತಂದೆ ದೇವಿಸಿಂಗ್‌ ಇಂದೋರ್‌ನಲ್ಲಿ ಸಣ್ಣ ಪ್ಲೈವುಡ್‌ ಕಾರ್ಖಾನೆಯೊಂದನ್ನ ಹೊಂದಿದ್ದಾರೆ. ರಾಜ್‌ ಕುಶ್ವಾಹ ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ. ಸೋನಮ್‌ಗಿಂತ 5 ವರ್ಷ ಚಿಕ್ಕವನಿದ್ದ. ಸೋನಮ್‌ ಆಗಾಗ್ಗೆ ಕಾರ್ಖಾನೆಗೆ ಬರುತ್ತಿದ್ದಳು, ಈ ವೇಳೆ ಇಬ್ಬರಿಗೂ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಇವರಿಬ್ಬರು ಸರಸವಾಡೋದನ್ನ ಕೆಲವೊಮ್ಮೆ ಇತರ ಕಾರ್ಮಿಕರು ನೋಡಿದ್ದರು. ಆದ್ರೆ ಮದುವೆ ಜೀವನ ಹಾಳು ಮಾಡೋದು ಬೇಡ ಅಂತ ಸುಮ್ಮನಾಗಿದ್ದರಂತೆ. ಇದೀಗ ರಾಜ್‌ ಅರೆಸ್ಟ್‌ ಆದ ನಂತರ ಈ ಎಲ್ಲ ಮಾಹಿತಿಗಳು ಬಹಿರಂಗಗೊಂಡಿದೆ.

ಸ್ಫೋಟಕ ತಿರುವು ನೀಡಿದ ಟೂರಿಸ್ಟ್ ಗೈಡ್‌ ಹೇಳಿಕೆ

ಮೇಘಾಲಯದ ಸೊಹ್ರಾ ಪ್ರದೇಶದಲ್ಲಿ ಈ ಮೊದಲು ಕೂಡ ಟೂರಿಸ್ಟ್‌ಗಳು ನಾಪತ್ತೆಯಾಗಿದ್ದರು. ಇದರಿಂದಾಗಿ ರಾಜಾ ರಘುವಂಶಿ ದಂಪತಿ ನಾಪತ್ತೆ ಪ್ರಕರಣ ಮೇಘಾಲಯದಲ್ಲಿ ಭಾರೀ ಸುದ್ದಿಯಾಗಿತ್ತು. ರಾಜಾ ರಘುವಂಶಿ ಮೃತದೇಹ ಪತ್ತೆ ಬಳಿಕ ಪ್ರಕರಣದ ಹಿಂದಿನ ಪಿತೂರಿ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಇದೇ ವೇಳೆ ಸ್ಥಳೀಯ ಟೂರಿಸ್ಟ್ ಗೈಡ್ ಒಬ್ಬರು ಸ್ಫೋಟಕ ಮಾಹಿತಿ ನೀಡಿದ್ದರು.

ಮೇ 23 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್‌ನಿಂದ ಮಾವ್ಲಾಖಿಯಾತ್‌ಗೆ 3,000 ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಮೂವರು ಪುರುಷ ಪ್ರವಾಸಿಗರು ದಂಪತಿ ಜೊತೆಗೆ ಇದ್ದುದ್ದನ್ನು ನೋಡಿದೆ. ಮೇ.22ರಂದು ದಂಪತಿಯನ್ನ ನೊಂಗ್ರಿಯಾಟ್‌ಗೆ ಕರೆದೊಯ್ಯಲು ನಾನು ಮುಂದಾದೆ. ಆದರೆ, ಅವರು ನನ್ನ ಗೈಡ್ ಸೇವೆಯನ್ನ ಒಳ್ಳೆಯ ಮಾತುಗಳಿಂದಲೇ ಬೇಡವೆಂದರು. ಇದೇ ವೇಳೆ ಭಾ ವಾನ್ಸಾಯಿ ಎಂಬ ಇನ್ನೊಬ್ಬ ಗೈಡ್‌ನನ್ನು ನೇಮಕ ಮಾಡಿಕೊಂಡ ದಂಪತಿ, ಶಿವಾರಾ ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಅವರಿಬ್ಬರೇ ಹೊರಬಂದರು. ನಾನು ಅವರನ್ನು ಮತ್ತೆ ನೋಡಿದಾಗ ನಾಲ್ವರು ಪುರುಷರಿದ್ದರು, ಆದ್ರೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹಾಗಾಗಿ ನನಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಪುರುಷರು ಮೌಲಖಿಯಾತ್ ತಲುಪಿದಾಗ, ದಂಪತಿಗಳ ಸ್ಕೂಟರ್ ಅಲ್ಲಿ ಇರಲಿಲ್ಲ ಎಂದು ಗೈಡ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಪೊಲೀಸ್ ತನಿಖೆಯ ದಿಕ್ಕನ್ನೇ ಬದಲಿಸಿತ್ತು.

TAGGED:AffairHoneymoon MurderIndore ManMeghalayaMeghalaya Policeಮೇಘಾಲಯಮೇಘಾಲಯ ಪೊಲೀಸ್‌ಹನಿಮೂನ್ಹನಿಮೂನ್‌ ಮರ್ಡರ್‌
Share This Article
Facebook Whatsapp Whatsapp Telegram

Cinema news

Jailer
ತಲೈವಾ ನಟನೆಯ ಜೈಲರ್-2 ಸಿನಿಮಾಗೆ ವಿದ್ಯಾ ಬಾಲನ್ ಎಂಟ್ರಿ!
Bollywood Cinema Latest South cinema Top Stories
Samantha Ruth Prabhu Raj Nidimoru
ಮದ್ವೆ ಬಳಿಕ ಕಾಣಿಸಿಕೊಂಡ ಸಮಂತಾ-ರಾಜ್ ನಿಡಿಮೋರು..!
Cinema Latest Top Stories
Miraj
ʻದೇವರು ರುಜು ಮಾಡಿದನುʼ ಚಿತ್ರದ ಸಾಂಗ್ ರಿಲೀಸ್ – ವಿರಾಜ್ ಬಿಂದಾಸ್ ಕುಣಿತ
Cinema Latest Sandalwood
gilli rajat
ರಜತ್‌ ಆಚೆ ಕಳಿಸಿಯೇ ನಾನು ಆಚೆ ಹೋಗೋದು: ಸುದೀಪ್‌ ಎದುರೇ ಗಿಲ್ಲಿ ಸವಾಲ್‌
Cinema Latest Top Stories TV Shows

You Might Also Like

Delhi Airport Karnataka MLAs Ministers Stranded On IndiGo Flight
Karnataka

ದೆಹಲಿಯಲ್ಲಿ ಹೊಗೆ – ಇಂಡಿಗೋ ವಿಮಾನದಲ್ಲಿ ರಾಜ್ಯದ 21 ಶಾಸಕರು‌ ಲಾಕ್‌!

Public TV
By Public TV
41 minutes ago
Muruga Shree visits Shamanuru Shivashankarappa house condolences to family
Davanagere

ಶಾಮನೂರು ಕುಟುಂಬಸ್ಥರಿಗೆ ಮುರುಘಾ ಶ್ರೀ ಸಾಂತ್ವನ

Public TV
By Public TV
1 hour ago
special vibhuti from siddaganga mutt for shamanuru shivashankarappas funeral
Davanagere

ಶಾಮನೂರು ಅಂತ್ಯಕ್ರಿಯೆಗೆ ಸಿದ್ದಗಂಗಾ ಮಠದಿಂದ 100 ವಿಶೇಷ ವಿಭೂತಿ ಗಟ್ಟಿ

Public TV
By Public TV
2 hours ago
Pakistan Link To Sydney Terror Attack Pakistani Man Son Behind Deadly Shooting At Bondi Beach During Jewish Festival
Latest

ಆಸ್ಟ್ರೇಲಿಯಾದಲ್ಲಿ ಉಗ್ರರ ದಾಳಿ – ಪಾಕ್‌ ಮೂಲದ ತಂದೆ, ಮಗನ ಹುಚ್ಚಾಟಕ್ಕೆ 16 ಬಲಿ

Public TV
By Public TV
2 hours ago
S.S. Mallikarjun
Davanagere

ತಂದೆಯನ್ನು ನೆನೆದು ಭಾವುಕರಾದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್

Public TV
By Public TV
3 hours ago
cold weather
Bagalkot

ಚಳಿಗೆ ಉತ್ತರ ಕರ್ನಾಟಕ ತತ್ತರ – 9 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?