ಜೋಧಪುರ: ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಹಿಂಸಾಚಾರದ ಮೂಲಕ ತಮಗೆ ಬೇಕಾದ್ದನ್ನು ಪಡೆಯಲು ಪ್ರಯತ್ನಿಸುತ್ತಾರೆ ಎಂದು ಕೇಂದ್ರಕ್ಕೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಎಚ್ಚರಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರೊಂದಿಗೆ ಜಗಳವಾಡಬೇಡಿ, ಅವರು ಅಪಾಯಕಾರಿ ಜನರು. ಇದು ದೆಹಲಿಗೆ ನನ್ನ ಸಲಹೆಯಾಗಿದೆ. ರೈತರು ತಮಗೆ ಬೇಕಾದ್ದನ್ನು ತೆಗೆದುಕೊಳ್ಳುತ್ತಾರೆ. ಅದು ಮಾತುಕತೆಯ ಮೂಲಕ ಸಾಧ್ಯವಾಗದಿದ್ದರೆ, ಅದನ್ನು ಹೋರಾಟದ ಮೂಲಕ ತೆಗೆದುಕೊಳ್ಳುತ್ತಾರೆ. ಅದೂ ಸಾಧ್ಯವಾಗದಿದ್ದರೇ ಹಿಂಸಾಚಾರದ ಮೂಲಕ ಪಡೆಕೊಳ್ಳಬಹುದು ಎಂದು ಹೇಳಿದ್ದಾರೆ.
ರೈತರಿಗೆ ಮೂಗುದಾರ ಹಾಕಲಾಗುವುದಿಲ್ಲ. ಅವರ ಬೇಡಿಕೆಗಳು ಹೇಗೆ ಈಡೇರಿಸಿಕೊಳ್ಳಬೇಕು ಎಂಬುದು ಅವರಿಗೆ ತಿಳಿದಿದೆ. ರೈತರ ವಿರೋಧ ಕಟ್ಟಿಕೊಳ್ಳಬೇಡಿ. ಸಿಖ್ಖರು ಮತ್ತು ಜಾಟ್‌ಗಳು ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಹಗಲುಗನಸು ಕಾಣುವುದನ್ನು ಬಿಡಬೇಕು: ಮೋದಿಗೆ ಮಮತಾ ಬ್ಯಾನರ್ಜಿ ಟಾಂಗ್
ರೈತರ ಬಗ್ಗೆ ಮಾತಾನಾಡಿರುವುದರಿಂದ ದೆಹಲಿಯಿಂದ ಯಾವಾಗ ಬೇಕಾದರೂ ಕರೆ ಬರುವ ಅವಕಾಶವಿದೆ. ರೈತರ ಸಮಸ್ಯೆಯನ್ನು ಎತ್ತುವುದಕ್ಕೆ ನನ್ನ ಹುದ್ದೆಯನ್ನು ಕಳೆದುಕೊಳ್ಳುವ ಭಯವಿಲ್ಲ. ಕೇಂದ್ರದೊಂದಿಗೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ ರೈತರಿಗಾಗಿ ನನ್ನ ಹುದ್ದೆಯನ್ನು ಬಿಡುತ್ತೇನೆ ಎಂದು ರೈತರ ಆಂದೋಲನದ ನಿರ್ವಹಣೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ಸೆಲೆಬ್ರಿಟಿ ಆದ್ರೂ ಕಡಲೆಕಾಯಿ ಮಾರುವುದನ್ನು ಬಿಡುವುದಿಲ್ಲ – ಕಚ್ಚಾ ಬಾದಾಮ್ ಸಿಂಗರ್