ಶಿಲ್ಲಾಂಗ್: ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬಂದಲ್ಲಿ 7ನೇ ವೇತನ ಆಯೋಗವನ್ನು ಜಾರಿ ಮಾಡಲಾಗುವುದು, ಸಕಾಲದಲ್ಲಿ ಸರ್ಕಾರಿ ನೌಕರರ ವೇತನ ನೀಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಭರವಸೆ ನೀಡಿದ್ದಾರೆ. ಮೇಘಾಲಯ ವಿಧಾನಸಭಾ ಚುನಾವಣೆ (Meghalaya Assembly Election) ಹಿನ್ನೆಲೆ ಅವರು ಬುಧಾವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು.
Advertisement
ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿದ್ದು ಮುಖ್ಯವಾಗಿ ಪಿಎಂ-ಕಿಸಾನ್ ಸಮ್ಮಾನ್ ನಿಧಿಯಡಿ ರೈತರಿಗೆ ನೀಡುವ ಸಹಾಯಧನವನ್ನು ವಾರ್ಷಿಕವಾಗಿ 2,000 ರೂ.ಗಳಷ್ಟು ಹೆಚ್ಚಿಸಲಾಗುವುದು, ನವಜಾತ ಹೆಣ್ಣು ಮಗುವಿಗೆ 50,000 ರೂ.ಗಳ ಬಾಂಡ್ ನೀಡುವ ಹಾಗೂ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಭರವಸೆ ನೀಡಿದೆ. ಇದನ್ನೂ ಓದಿ: ಮತ್ತೆ ಬಿಜೆಪಿ V/S ಕಾಂಗ್ರೆಸ್ ಕಮಿಷನ್ ಕದನ- ಕಾಂಗ್ರೆಸ್‍ನಿಂದ ಹೊಸ ಪೊಲಿಟಿಕಲ್ ಚಾರ್ಜ್‍ಶೀಟ್
Advertisement
Advertisement
ವಿಧವೆಯರ, ಒಂಟಿ ಮಹಿಳೆಯರ ಸಬಲೀಕರಣಕ್ಕಾಗಿ ವಾರ್ಷಿಕ 24,000 ಆರ್ಥಿಕ ಸಹಾಯದ ಬೆಂಬಲ, ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕ 2 ಉಚಿತ ಎಲ್‌ಪಿಜಿ ಸಿಲಿಂಡರ್ ನೀಡುವುದಾಗಿ ಬಿಜೆಪಿ ಹೇಳಿದೆ. ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿ 27 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಮೊದಲ ಬಾರಿಗೆ ಬಿಜೆಪಿ ಮೇಘಾಲಯದಲ್ಲಿ ಎಲ್ಲಾ 60 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದನ್ನೂ ಓದಿ: ಬಿಜೆಪಿಗೆ ಮತ್ತೆ ಅಧಿಕಾರ – ಬಿ.ಎಸ್ ಯಡಿಯೂರಪ್ಪ ವಿಶ್ವಾಸ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k