ಗುವಾಹಟಿ: ಮೇಘಾಲಯದ ಗಾರೋ ಬೆಟ್ಟದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಒಂದೇ ಕುಟುಂಬದ ಮೂವರು ಹಾಗೂ ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ನಡೆದಿದೆ.
ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯಾದ್ಯಂತ ಅನೇಕ ಅನಾಹುತಗಳನ್ನು ಮಾಡುತ್ತಿದೆ. ಇದರ ಬೆನ್ನಲ್ಲೇ ಪಶ್ಚಿಮ ಗರೋ ಬೆಟ್ಟದ ಗ್ಯಾಂಬೆಗ್ರೆ ಬ್ಲಾಕ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರಿರುವ ಕುಟುಂಬದಲ್ಲಿ ಮೂವರು ಸದಸ್ಯರು ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಸದಸ್ಯರಾದ ತಂದೆ ಮತ್ತು ಮಗ ಬದುಕುಳಿದಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿ ಇರುವ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮತ್ತೊಂದು ಘಟನೆಯು ಸೌತ್ ವೆಸ್ಟ್ ಗಾರೋ ಬೆಟ್ಟದ ಬೆಟಾಸಿಂಗ್ ಪ್ರದೇಶದಲ್ಲಿ ನಡೆದಿದ್ದು, ಎರಡೂವರೆ ವರ್ಷದ ಬಾಲಕ ಮೃತಪಟ್ಟಿದ್ದಾನೆ. ಗರೋ ಬೆಟ್ಟದಲ್ಲಿ ಬುಧವಾರ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಈ ಘಟನೆ ನಡೆದಿದೆ. ಇದನ್ನೂ ಓದಿ: ರಾಜ್ಯಸಭೆ ಫೈಟ್‍ನಲ್ಲಿ ಟ್ವಿಸ್ಟ್ – ಕಾಂಗ್ರೆಸ್, ಜೆಡಿಎಸ್ ಮಧ್ಯೆ ‘ಆತ್ಮಸಾಕ್ಷಿ’ ಫೈಟ್
ಅಸ್ಸಾಂನಲ್ಲಿ ಜೂನ್ 12ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಎಚ್ಚರಿಕೆ ನೀಡಿದ್ದು, ಕಳೆದ ತಿಂಗಳು, ಪ್ರವಾಹ ಮತ್ತು ಭೂಕುಸಿತದಿಂದ ಅನೇಕ ಹಾನಿಗಳಾಗಿದ್ದವು. ಅಷ್ಟೇ ಅಲ್ಲದೇ 3 ಈಶಾನ್ಯ ರಾಜ್ಯಗಳಲ್ಲಿ 25 ಜನರು ಜೀವಂತ ಸಮಾಧಿ ಆಗಿದ್ದರು. ಇದನ್ನೂ ಓದಿ: ತಪ್ಪದ ಇಡಿ ಸಂಕಷ್ಟ – ಸತೇಂದ್ರ ಜೈನ್‍ಗೆ ಜೂನ್ 13ವರೆಗೂ ಕಸ್ಟಡಿ ವಿಸ್ತರಣೆ