ಕರಾವಳಿ ಬ್ಯೂಟಿ ಮೇಘಾ ಶೆಟ್ಟಿ (Megha Shetty) ಹೊಸ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಮೇಘಾ ನಯಾ ಲುಕ್ ಪಡ್ಡೆಹುಡುಗರ ಗಮನ ಸೆಳೆಯುತ್ತಿದೆ.
ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ ಮಸ್ತ್ ಆಗಿ ಕ್ಯಾಮೆರಾ ಕಣ್ಣಿಗೆ ‘ಕೈವ’ ಬ್ಯೂಟಿ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಯಲ್ಲಿ ಗ್ಲ್ಯಾಮರಸ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಫೋಟೋ ನೋಡ್ತಿದ್ದಂತೆ ಬೇಲೂರ ಶಿಲಾಬಾಲಿಕೆಯಂತೆ ಮಿಂಚ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾಗೆ ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ಇದನ್ನೂ ಓದಿ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಪತ್ರಕರ್ತ ಬಾನಾಸುಗೆ ತವರಿನ ಗೌರವ
ಧನ್ವೀರ್ ಗೌಡ ಜೊತೆ ಕೈವ ಸಿನಿಮಾ, ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾಗಳನ್ನ ನಟಿ ಮುಗಿಸಿ ಕೊಟ್ಟಿದ್ದಾರೆ. ಹೊಸ ಬಗೆಯ ಕಥೆಗಳನ್ನ ನಟಿ ಕೇಳುತ್ತಿದ್ದಾರೆ.
‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಫೇಮಸ್ ಆಗಿರುವ ನಟಿ ಈಗಾಗಲೇ ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.