ಬೆಂಗಳೂರು: ಕಿರುತೆರೆ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ ನಟಿ ಮೇಘಾ ಶೆಟ್ಟಿ ಹೊಸ ಎರಡು ದುಬಾರಿ ಕಾರುಗಳನ್ನು ಖರೀದಿಸಿದ್ದು, ಕಾರಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Advertisement
ಜೊತೆ ಜೊತೆಯಲಿ ಸಿರಿಯಲ್ ಮೂಲಕ ಅನು ಸಿರಿಮನೆಯಾಗಿ ಕನ್ನಡದ ಕಿರುತೆರೆಗೆ ಎಂಟ್ರಿ ಕೊಟ್ಟ ಮೇಘಾ ಶೆಟ್ಟಿ. ತಮ್ಮ ಮೊದಲ ಸಿರಿಯಲ್‍ನಲ್ಲಿ ಪ್ರೇಕ್ಷಕರ ಮನಗೆಲ್ಲುವುದರ ಜೊತೆಗೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಸದ್ಯ ಕಿರುತೆರೆಗೆ ಮಾತ್ರವಲ್ಲದೇ ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣಹಚ್ಚುತ್ತಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿಯೇ ಸ್ಟಾರ್ ನಟನೊಂದಿಗೆ ಅಭಿನಯಿಸುತ್ತಿರುವ ಮೇಘಾ ಶೆಟ್ಟಿ ನಿಜಕ್ಕೂ ಲಕ್ಕಿ ಎಂದೇ ಹೇಳಬಹುದು.
Advertisement
Advertisement
ಈ ನಡುವೆ ಮೇಘಾ ಶೆಟ್ಟಿ ಬಿಎಂಡಬ್ಲೂ ಮತ್ತು ಎಂಜಿ ಎಂಜಿ ಹೆಕ್ಟರ್ ಎಂಬ ದುಬಾರಿ ವೆಚ್ಚದ ಕಾರುಗಳನ್ನು ಖರೀದಿಸಿದ್ದಾರೆ. ಇನ್ನೂ ಈ ಕಾರುಗಳ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ವೆಲ್ ಕಮ್ ಹೋಂ 1 ಹಾಗೂ ವೆಲ್ ಕಮ್ ಹೋಂ 2 ಎಂದು ಬರೆದುಕೊಂಡಿದ್ದಾರೆ.
Advertisement
ಇತ್ತೀಚೆಗಷ್ಟೇ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಸಿರಿಯಲ್‍ನಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ ನಂತರ ಕುಟುಂಬದಲ್ಲಿ ಗೊಂದಲಗಳು ಸಹಜ ಇದೀಗ ಎಲ್ಲಾ ಗೊಂದಲಗಳು ಬಗೆಹರಿದಿದೆ. ಜೊತೆ ಜೊತೆಯಲಿ ಸಿರಿಯಲ್ ಬರುವ ತನಕ ತಾನೇ ಅಭಿನಯಿಸುವುದಾಗಿ ಸ್ಪಷ್ಟನೆ ನೀಡಿದ್ದರು.
ಸದ್ಯ ಜೊತೆ ಜೊತೆಯಲಿ ಸಿರಿಯಲ್‍ನಲ್ಲಿ ಆರ್ಯ ಹಾಗೂ ಅನು ಸಿರಿಮನೆ ಮದುವೆ ಸಮಾರಂಭ ನಡೆಯುತ್ತಿದ್ದು, ಮದುವೆ ಚಿತ್ರೀಕರಣಕ್ಕೆ ಅದ್ದೂರಿ ಸೆಟ್ ನಿರ್ಮಿಸಲಾಗಿದೆ. ಇದನ್ನೂ ಓದಿ:ಕುಟುಂಬದಲ್ಲಿ ಆದ ಗೊಂದಲ ಬಗೆಹರಿದಿದೆ: ಮೇಘಾ ಶೆಟ್ಟಿ