ಬಾಗಲಕೋಟೆ: ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ಬದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ತಂಗಿದ್ದ ಕೃಷ್ಟಾ ಹೆರಿಟೆಜ್ ರೆಸಾರ್ಟ್ ಮೇಲೆ ನಡೆದ ಐಟಿ ದಾಳಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಾರಸ್ಮಲ್ ಜೈನ್‍ರನ್ನು ಟಾರ್ಗೆಟ್ ಮಾಡಿ ಐಟಿ ಅಧಿಕಾರಿಗಳು ಮೂರು ಕಡೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಬದಾಮಿ ಮತ್ತು ಬಾಗಲಕೋಟೆ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಹೊತ್ತಿರುವ ಪಾರಸ್ಮಾಲ್ ಜೈನ್ ಹುಬ್ಬಳ್ಳಿ ಮೂಲದ ಉದ್ಯಮಿಯಾಗಿದ್ದು, ಚುನಾವಣೆ ಹಿನ್ನೆಲೆ ಎಸ್.ಆರ್ ಪಾಟೀಲ್ ಮತ್ತು ಸಿ.ಎಂ ಇಬ್ರಾಹಿಂ ಜೊತೆ ಚರ್ಚೆ ನಡೆಸಲು ಆನಂದ್ ಸಿಂಗ್ ಒಡೆತನದ ಕೃಷ್ಣಾ ಹೇರಿಟೆಜ್ ರೆಸಾರ್ಟ್ ಗೆ ತೆರಳಿದ್ದರು. ಈ ವೇಳೆ ಏಕಕಾಲದಲ್ಲಿ ಹುಬ್ಬಳ್ಳಿಯಲ್ಲಿರುವ ಜೈನ್ ನಿವಾಸ, ಬದಾಮಿಯ ಕೃಷ್ಣಾ ಹೇರಿಟೆಜ್ ರೆಸಾರ್ಟ್ ಮತ್ತು ಜೈನ್ ತಂಗಿದ್ದ ಕೆಎಸ್‍ಟಿಡಿಸಿ ಹೋಟೆಲ್‍ನ ರೂಂ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ರು. ಇದನ್ನೂ ಓದಿ: ಕೋಟ್ಯಾಂತರ ರೂ. ಸಿಗುತ್ತೆ ಅಂತ 20 ಮಂದಿಯ ಪಟಾಲಂ ದಾಳಿ ಮಾಡ್ತು- ಐಟಿ ದಾಳಿಗೆ ಇಬ್ರಾಹಿಂ ವ್ಯಂಗ್ಯ
Advertisement
Advertisement
ಈ ಸಂಬಂಧ ಪ್ರತಿಕ್ರಿಯಿಸಿರುವ ಜೈನ್, ದಾಳಿ ವೇಳೆ ಎರಡ್ಮೂರು ಲಕ್ಷ ಹಣ ಸಿಕ್ಕಿದೆ. ಇದು ನಾನು ಖರ್ಚಿಗೆ ಅಂತಾ ಇಟ್ಟು ಕೊಂಡಿದ್ದ ಹಣ. ನನ್ನ ಮೇಲಿನ ಐಟಿ ದಾಳಿ ಬಿಜೆಪಿ ಸೋಲಿನ ಹತಾಷೆ ತೋರಿಸುತ್ತೆ. ಇದು ರಾಜಕೀಯ ಪ್ರೇರಿತ ದಾಳಿ ಅಂತ ಆರೋಪಿಸಿದ್ರು. ಇದನ್ನೂ ಓದಿ: ನಾನೂ ಆ ರೂಮಿನಲ್ಲಿ ದುಡ್ಡು ಮಡಚಿಟ್ಟು ಬಂದಿದ್ದೇನಾ: ಸಿಎಂ ಆಕ್ರೋಶ
Advertisement
ಇದನ್ನೂ ಓದಿ: ಬದಾಮಿ ಕಾಂಗ್ರೆಸ್‍ಗೆ ಮಿಡ್‍ನೈಟ್ ಐಟಿ ಶಾಕ್!