ಬಾಲಿವುಡ್ ನಲ್ಲಿ ಮೀಟೂ ಭಯ ಹುಟ್ಟಿಸಿದ್ದ ನಟಿ ತನುಶ್ರೀ ದತ್ತ, ಮತ್ತೆ ಈ ವಿಷಯವನ್ನು ನೆನಪಿಸಿದ್ದಾರೆ. ಹಾರ್ನ್, ಓಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಾವು ನಾನಾ ಪಾಟೇಕರ್ ಜೊತೆ ನಟಿಸುವಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಹೇಳಿಕೊಂಡಿದ್ದರು. ಆ ದೌರ್ಜನ್ಯ ಆಗಿದ್ದು ನಾನಾ ಅವರಿಂದ ಎಂದು ದೂರು ದಾಖಲಿಸಿದ್ದರು.
ಇದೀಗ ಮತ್ತೆ ತನುಶ್ರೀ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದು ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ್ದೆ. ನನಗೆ ಏನಾದರೂ ಪ್ರಾಣಹಾನಿಯಾದರೆ, ಅದಕ್ಕೆ ನಾನಾ ಕಾರಣ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಬಾಲಿವುಡ್ ಮಾಫಿಯಾ ಬಗ್ಗೆಯೂ ಮಾತನಾಡಿರುವ ಅವರು, ಸುಶಾಂತ್ ಸಿಂಗ್ ಸಾವಿನಲ್ಲಿ ಕೇಳಿ ಬಂದ ಹೆಸರುಗಳೇ ಬಾಲಿವುಡ್ ಮಾಫಿಯಾದಲ್ಲಿ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಶ್ವೇತಾ ಶ್ರೀವಾಸ್ತವ್
ಬಾಲಿವುಡ್ ಮಾಫಿಯಾ ಕುರಿತು ಹೆಚ್ಚಿನ ಮಾಹಿತಿಯನ್ನೂ ಹಂಚಿಕೊಂಡಿರುವ ತನುಶ್ರೀ, ‘ಈ ಮಾಫಿಯಾದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಯಾರ ಸಿನಿಮಾ ನೋಡಬೇಕು, ಯಾವ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಬೇಕು, ಯಾರನ್ನು ಪ್ರೀತಿಸಬೇಕು, ಯಾರನ್ನು ದ್ವೇಷಿಸಬೇಕು ಹೀಗೆ ಎಲ್ಲವನ್ನೂ ಈ ಮಾಫಿಯಾ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಅವರಿಂದಾಗಿ ತಾನು ಎಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ ಎಂದೂ ಹೇಳಿದ್ದಾರೆ.
ತನುಶ್ರೀ ಕೇವಲ ನಾನಾ ಪಾಟೇಕರ್ ಮೇಲಷ್ಟೇ ಆರೋಪ ಮಾಡಿಲ್ಲ. ಎರಡು ವರ್ಷಗಳ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೇಲೆಯೂ ಆರೋಪ ಮಾಡಿದ್ದರು. ಸಹನಟನ ಜೊತೆ ಬೆತ್ತಲೆಯಾಗಿ ನೃತ್ಯ ಮಾಡಲು ಅವರು ನನಗೆ ಪ್ರಚೋದಿಸಿದ್ದರು ಎಂದು ಹೇಳಿಕೆ ನೀಡಿದ್ದರು. ಈ ವಿಷಯ ಕೂಡ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು.