ನ್ಯೂಯಾರ್ಕ್: ಸಾಮಾನ್ಯವಾಗಿ ನಾಯಿಗಳು ಹೆಚ್ಚು ವರ್ಷಗಳ ಕಾಲ ಬದುಕುವುದಿಲ್ಲ. ಆದರೆ ಅಮೇರಿಕಾದ ಸೌತ್ ಕೆರೊಲಿನಾದ ನಾಯಿಯೊಂದು ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ಬದುಕಿ ಇನ್ನೂ ಜೀವಂತವಾಗಿದ್ದು, ಗಿನ್ನೆಸ್ ದಾಖಲೆ ಬರೆದಿದೆ.
View this post on Instagram
Advertisement
ಈ ಕುರಿತು ಶ್ವಾನದ ಮಾಲೀಕರು ನಾಯಿಯ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಮಾರ್ಚ್ 28, 2000 ರಂದು ಜನಿಸಿದ ಪೂಚ್ ಎಂಬ ಹೆಸರಿನ ನಾಯಿಯ ವಯಸ್ಸು 22 ವರ್ಷ. ಈ ಮುದ್ದಾದ ಟೋಬಿಕೀತ್ ಎಂಬ ಜಾತಿಯ ನಾಯಿಯು ಹಗಲಿನಲ್ಲಿ ಮಲಗಲು ಇಷ್ಟಪಡುತ್ತದೆ ಹಾಗೂ ರಾತ್ರಿಯಿಡೀ ಎಚ್ಚರವಾಗಿರುತ್ತದೆ ಎಂದು ಅದರ ಮಾಲೀಕ ಜೂಲಿ ಹೇಳಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ
Advertisement
View this post on Instagram
Advertisement
ಪೂಚ್ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ನಮ್ಮೊಂದಿಗಿದ್ದು, ಅವಳು ಯಾವಾಗಲೂ ನಮ್ಮ ಕುಟುಂಬದ ದಾರಿದೀಪವಾಗಿದ್ದಾಳೆ. ನಮ್ಮ ಜೀವನದಲ್ಲಿಯೇ ನಾವು ಅವಳನ್ನು ಮರೆಯೊದಕ್ಕೆ ಸಾಧ್ಯವಿಲ್ಲ ಎಂದು ಫೋಟೋಗೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ
Advertisement
ಅಮೇರಿಕನ್ ವೆಟರ್ನರಿ ಮೆಡಿಕಲ್ ಅಸೋಸಿಯೇಷನ್ ಪ್ರಕಾರ, ಮನುಷ್ಯನ ಜೀವನದ 15 ವರ್ಷ ನಾಯಿ ಜೀವನದ 1 ವರ್ಷಕ್ಕೆ ಸಮನಾಗಿರುತ್ತದೆ. ನಾಯಿಗೆ ಎರಡು ವರ್ಷವು ಮನುಷ್ಯನಿಗೆ ಸುಮಾರು ಒಂಬತ್ತು ವರ್ಷಗಳಿಗೆ ಸಮನಾಗಿರುತ್ತದೆ ಎಂದು ತಿಳಿಸಿದೆ.