ಭುವನೇಶ್ವರ್: ಒಡಿಶಾ ನಗರಸಭೆಗೆ ಮೊದಲ ಮುಸ್ಲಿಂ ಮಹಿಳಾ ಅಧ್ಯಕ್ಷರಾಗಿ ಗುಲ್ಮಕಿ ದಲ್ವಾಜಿ ಹಬೀಬ್ ಅವರು ಚುನಾಯಿತರಾಗಿ ಇತಿಹಾಸ ನಿರ್ಮಿಸಿದ್ದಾರೆ.
ಭದ್ರಕ್ ನಗರಸಭೆಯ 108 ವಾರ್ಡ್‍ಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಇದೀಗ ಮುಸ್ಲಿಂ ಸಮುದಾಯದವರಾದ ಗುಲ್ಮಕಿ ದಲ್ವಾಜಿ ಹಬೀಬ್ ಅವರು ಮೊದಲ ಅಧ್ಯಕ್ಷರಾಗಿ ಆಗಿ ಆಯ್ಕೆಯಾಗಿದ್ದಾರೆ.
Advertisement
Advertisement
ಗುಲ್ಮಕಿ ಅವರು ವ್ಯಾಪಾರ ಆಡಳಿತ ಪಧವೀಧರರಾಗಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗುಲ್ಮಕಿ ಅವರು ಬಿಜೆಡಿಯ ಸಸ್ಮಿತಾ ಮಿಶ್ರಾ ಅವರನ್ನು 3,256 ಮತಗಳಿಂದ ಸೋಲಿಸಿದ್ದರು. ಪತಿ ಬಿಜೆಡಿ ನಾಯಕರಾಗಿದ್ದರೂ ರಾಜಕೀಯಕ್ಕೆ ಹೊಸಬರಾದ ಗುಲ್ಮಕಿ ಅವರು ಸ್ಥಳೀಯ ಜನರ ಪ್ರೋತ್ಸಾಹದ ನಂತರ ನಾಮಪತ್ರ ಸಲ್ಲಿಸಿದ್ದರು. ಇದನ್ನೂ ಓದಿ: ಬ್ಯಾಂಕ್, ಎಟಿಎಂ ಬಾಗಿಲಿನಲ್ಲಿ ಮಲ ವಿಸರ್ಜನೆ ಮಾಡಿ ವಿಕೃತಿ
Advertisement
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಆರಂಭದಲ್ಲಿ ನಾನು ಹೆದರುತ್ತಿದ್ದೆ. ಆದರೆ ಕ್ರಮೇಣ ಎಲ್ಲಾ ಸಮುದಾಯಗಳ ಜನರು ನನ್ನಂತಹ ವಿದ್ಯಾವಂತ ಮಹಿಳೆಯ ಮೇಲೆ ನಂಬಿಕೆ ಇಟ್ಟು ನನ್ನನ್ನು ಬೆಂಬಲಿಸಲು ಮುಂದೆ ಬಂದರು ಎಂದು ಹೇಳಿದರು.
Advertisement
ಒಡಿಶಾ ಕರಾವಳಿಯಲ್ಲಿರುವ ಭದ್ರಕ್ ಪಟ್ಟಣವು ಎಲ್ಲಾ ಸಮುದಾಯಗಳ ಜನರನ್ನು ಹೊಂದಿದೆ. ಹಿಂದೂಗಳು ಶೇ.59.72, ಮುಸ್ಲಿಮರು ಶೇ.39.56, ಕ್ರೈಸ್ತರು ಶೇ.0.12, ಸಿಖ್ಖರು, ಬೌದ್ಧರು ಮತ್ತು ಜೈನರು ಶೇ 0.02 ಜನಸಂಖ್ಯೆಯಿದೆ. ಇದನ್ನೂ ಓದಿ: ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೈದಿ
ನಗರಸಭೆ ಹೇಗೆ ನಡೆಸುತ್ತೀರಿ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ನಾನು ಉತ್ತಮ ರಾಜಕಾರಣಿಯಾಗಬಹುದು ಅಂತ ನಾನು ಭಾವಿಸುತ್ತೇನೆ. ನನ್ನ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಕುಟುಂಬದ ಇತರರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ನನ್ನ ತಾಯಿಯ ಚಿಕ್ಕಪ್ಪ ಕೌನ್ಸಿಲರ್ ಆಗಿದ್ದರು. ನನ್ನ ತಾಯಿಯ ಚಿಕ್ಕಮ್ಮ ಅನೇಕ ವರ್ಷಗಳ ಹಿಂದೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.