ವಾಷಿಂಗ್ಟನ್: ಆಟಗಾರ ಹೊಡೆದ ಬೇಸ್ ಬಾಲ್ ನೇರವಾಗಿ ಯುವತಿಯ ಬಿಯರ್ ಗ್ಲಾಸ್ ಬಿದ್ದಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಟ್ಲಾಂಟಾ ನಗರದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಪಾಡ್ರೆಸ್-ಬ್ರೇವ್ಸ್ ತಂಡಗಳ ನಡುವೆ ಬೇಸ್ ಬಾಲ್ ಆಟ ನಡೆಯುತ್ತಿತ್ತು. ಪ್ರೇಕ್ಷಕರೆಲ್ಲರೂ ನೋಡುತ್ತಾ ಕುಳಿತಿದ್ದರು. ಆಗ ಆಟಗಾರನೊಬ್ಬನ ಭರ್ಜರಿ ಹೊಡೆತಕ್ಕೆ ಕೈ ಹಾಕಿದ್ದು, ಬಾಲ್ ಆಟವನ್ನು ನೋಡುತ್ತಾ ಕುಳಿತಿದ್ದ ಪ್ರೇಕ್ಷಕರ ಮಧ್ಯೆ ಇದ್ದ ಯುವತಿಯ ಬಿಯರ್ ಗ್ಲಾಸ್ ಗೆ ನೇರವಾಗಿ ಹೋಗಿ ಬಿದ್ದಿದೆ.
ಗ್ಲಾಸ್ ಬಿದ್ದ ತಕ್ಷಣ ಯುವತಿ ಎದ್ದು ನಿಂತು, ಬಾಲ್ ಅನ್ನು ಸುತ್ತ ಕುಳಿತಿದ್ದ ಪ್ರೇಕ್ಷಕರಿಗೆ ಸಂತಸದಿಂದ ತೋರಿಸುತ್ತಾ ನಂತರ ಎಲ್ಲರಿಗೂ ಚೀಯರ್ಸ್ ಮಾಡಿ ಬಾಲ್ ತೆಗೆಯದೇ ಬಿಯರ್ ಕುಡಿದಿದ್ದಾಳೆ. ಈ ಎಲ್ಲಾ ದೃಶ್ಯಗಳು ವಿಡಿಯೋದಲ್ಲಿ ಕಾಣಬಹುದು.
ಆಟಗಾರ ಹೊಡೆದ ರಭಸಕ್ಕೆ ಬಾಲ್ ನನ್ನ ಹಿಂದೆ ಬರುತ್ತಿತ್ತು. ಆಗ ನಾನು ಬಾಲ್ ಹಿಡಿಯಲು ಪ್ರಯತ್ನಿಸುತ್ತಿದ್ದೆ. ಆದರೆ ಅಷ್ಟರಲ್ಲಿ ಅದು ಗ್ಲಾಸಿಗೆ ಬಂದು ಬಿತ್ತು ಎಂದು ಯುವತಿ ಹೇಳಿದ್ದಾಳೆ.
ಸದ್ಯಕ್ಕೆ ಯುವತಿಯ ಬಿಯರ್ ಗ್ಲಾಸಿಗೆ ಬಿದ್ದ ಬಾಲ್ ಮತ್ತು ಬಾಲ್ ಸಮೇತ ಚೀಯರ್ಸ್ ಮಾಡಿ ಯುವತಿ ಬಿಯರ್ ಕುಡಿದಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.