ಬೆಂಗಳೂರು: ಮಲಯಾಳಂ, ಸ್ಯಾಂಡಲ್ವುಡ್ನಲ್ಲಿ ಮಿಂಚಿದ ನಟಿ ಮೀರಾ ಜಾಸ್ಮಿನ್ ಇನ್ಸ್ಟಾಗ್ರಾಮ್ಗೆ ಎಂಟ್ರಿಕೊಟ್ಟ ಮೊದಲ ದಿನವೇ ಒಂದುವರೆ ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್ ಹೋಂದುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಮೀರಾ ಜಾಸ್ಮಿನ್ ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿದಿದ್ದರು. ಮದುವೆ ಬಳಿಕ ಚಿತ್ರರಂಗದಿಂದನೂ ದೂರವಾಗಿದ್ದಾರೆ. ಆದರೆ ಇದೀಗ ಮತ್ತೆ ಅಭಿಮಾನಿಗಳ ಜೊತೆಗೆ ನೇರವಾಗಿ ಸಂಪರ್ಕವನ್ನು ಸಾಧಿಸಲು ಸೋಶಿಯಲ್ ಮೀಡಿಯಾಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೀರಾ ಜಾಸ್ಮಿನ್ ಅವರ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ.
Advertisement
View this post on Instagram
Advertisement
ಇನ್ಸ್ಟಾಗ್ರಾಮ್ ತೆರೆದು 2 ದಿನಗಳಾಗಿವೆ. 2 ಪೋಸ್ಟ್ಗಳನ್ನು ಕೂಡಾ ಹಂಚಿಕೊಂಡಿದ್ದಾರೆ. ಮೊದಲ ಪೋಸ್ಟ್ನಲ್ಲಿ ಸೀರೆಯುಟ್ಟ ಫೋಟೋವನ್ನು ಹಂಚಿಕೊಂಡಿದ್ದು, ನಾವು ಯಾವಾಗಲೂ ಪ್ರಾರಂಭವನ್ನು ಘೋಷಿಸೋಣ, ನಮ್ಮೆಲ್ಲರನ್ನೂ ಒಬ್ಬರಿಗೊಬ್ಬರು ಹತ್ತಿರವಾಗಿಸುವ ಈ ಹೆಜ್ಜೆಯನ್ನು ಇಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೋಂದು ಪೋಸ್ಟ್ನಲ್ಲಿ ಡಾನ್ಸ್ ಮಾಡುತ್ತಿರುವ ವೀಡಿಯೋ ಶೇರ್ ಮಾಡಿಕೊಂಡು ನನಗೆ ನಿಮ್ಮ ಅಮೂಲ್ಯವಾದ ಸಮಯವನ್ನು ನೀಡಿದ್ದೀರಾ ಕೃತಜ್ಞತೆ ಎಂದು ಬರೆದಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡುತ್ತಾ ಕಾಮೆಂಟ್ ಮಾಡುತ್ತಿದ್ದಾರೆ.
Advertisement
View this post on Instagram
Advertisement
ಮೀರಾ ಜಾಸ್ಮಿನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ ತೆರೆದ ಮೂರೇ ದಿನಕ್ಕೆ ಒಂದುವರೆ ಲಕ್ಷಕ್ಕೂ ಅಧಿಕ ಮಂದಿ ಅಭಿಮಾನಿಗಳು ಇವರನ್ನು ಫಾಲೋ ಮಡುತ್ತಿದ್ದಾರೆ. 131 ಮಂದಿಯನ್ನು ಮೀರಾ ಫಾಲೋ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಸಿನಿಮಾದ ಹಾಡಿಗೆ ಕಿಲಿ ಪೌಲ್ ಮಸ್ತ್ ಸ್ಟೆಪ್ಸ್
2016ರಲ್ಲೇ ಸಿನಿಮಾ ಕ್ಷೇತ್ರದಿಂದ ದೂರವಾಗಿದ್ದ ನಟಿ ಕೆಲವು ವೈಯಕ್ತಿಕ ಸಮಸ್ಯೆಯಿಂದಾಗಿ ಪತಿಯಿಂದ ದೂರವಾಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾಕ್ಕೆ ಎಂಟ್ರಿ ಕೊಡುವ ಮೂಲಕವಾಗಿ ಮತ್ತೆ ತೆರೆ ಮೇಲೆ ಬರುತ್ತಾರೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಇದನ್ನೂ ಓದಿ: ‘ತೋತಾಪುರಿ’ ಚಿತ್ರತಂಡದಿಂದ ಪ್ರೇಕ್ಷಕರಿಗೆ ಸಿಕ್ತು ಸಿಹಿಸುದ್ದಿ- ಜನವರಿ 24ಕ್ಕೆ ಆಡಿಯೋ ಟೀಸರ್ ರಿಲೀಸ್