ನವದೆಹಲಿ: ಎಐಎಮ್‍ಐಎಮ್ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಹಾಗೂ ಜಮ್ಮು- ಕಾಶ್ಮೀರದ ಮೆಹಬೂಬಾ ಮುಫ್ತಿ ಅವರು ಇತಿಹಾಸವನ್ನು ಮತ್ತೊಮ್ಮೆ ಓದಬೇಕು ಎಂದು ಸಲಹೆ ನೀಡುತ್ತೇನೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಫ್ತಿ ಹಾಗೂ ಓವೈಸಿ ಅವರು ಶಾಂತಿ ಮತ್ತು ಸಹೋದರತ್ವವನ್ನು ಕಾಪಾಡಬೇಕು. ಇದರ ಜೊತೆಗೆ ಸಮಾಜಕ್ಕೆ ಧಕ್ಕೆ ತರುವ ಯಾವುದೇ ಕೆಲಸವನ್ನು ಮಾಡಬಾರದು ಎಂದು ಮನವಿ ಮಾಡಿದರು.
Advertisement
Advertisement
ಜ್ಞಾನವಾಪಿ ಮಸೀದಿಯ ವಿಷಯ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಅವರು ಮಧ್ಯ ಪ್ರವೇಶಿಸಬಾರದು. ಜೊತೆಗೆ ಸಮಾಜಕ್ಕೆ ಧಕ್ಕೆಯನ್ನು ತರಬಾರದು ಎಂದರು.
Advertisement
ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಸರ್ವೇ ಕಾರ್ಯದ ವೇಳೆ ಮಸೀದಿಯ ಬಾವಿಯೊಳಗೆ 12 ಅಡಿ, 8 ಇಂಚಿನ ಶಿವಲಿಂಗ ಪತ್ತೆಯಾದ ಹಿನ್ನೆಲೆಯಲ್ಲೇ ಓವೈಸಿ ಹಾಗೂ ಮೆಹಬೂಬಾ ಮುಫ್ತಿ ಟೀಕಿಸಿದ್ದರು. ಇದನ್ನೂ ಓದಿ: ಭಾರೀ ಮಳೆಗೆ ಕೊಚ್ಚಿ ಹೋಯ್ತು ಸೇತುವೆ, ಕುಸಿಯಿತು ರಸ್ತೆ
Advertisement
ನ್ಯಾಯಾಲಯದ ಆದೇಶವನ್ನು ಟೀಕಿಸಿದ್ದ ಓವೈಸಿ, ಡಿಸೆಂಬರ್ 1949ರಲ್ಲಿ ಬಾಬರಿ ಮಸೀದಿಯಲ್ಲಿ ಪಠ್ಯಪುಸ್ತಕ ಪುನರಾವರ್ತನೆ ಆಗಿದೆ. ಈ ಆದೇಶವು ಮಸೀದಿಯ ಧಾರ್ಮಿಕ ಸ್ವರೂಪವನ್ನು ಬದಲಾಯಿಸುತ್ತದೆ. ಇದು ಆರಾಧನ ಸ್ಥಳ (1991 ಕಾಯಿದೆ) ಕಾಯಿದೆ ಉಲ್ಲಂಘನೆಯಾಗಿದೆ. ಇದು ನನ್ನ ಆತಂಕವಾಗಿತ್ತು ಮತ್ತು ಇದು ನಿಜವಾಗಿದೆ. ಜ್ಞಾನವಾಪಿ ಮಸೀದಿಯು ಮಸೀದಿಯಾಗಿತ್ತು. ಮಸೀದಿಯಾಗಿಯೇ ಉಳಿಯುತ್ತದೆ ಎಂದಿದ್ದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಇಂದು ಸುಪ್ರೀಂ ಕೋರ್ಟ್ ವಿಚಾರಣೆ