ಕೊಲೆ ಪ್ರಕರಣ ಸಂಬಂಧ ಅ.30ರಂದು ದರ್ಶನ್‌ಗೆ (Darshan) 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆ ರಿಲೀಸ್ ಆಗಿದ್ದಾರೆ. 5 ತಿಂಗಳ ಜೈಲುವಾಸದ ಬಳಿಕ ಮನೆಗೆ ಬಂದಿರುವ ಮಗನನ್ನು ನೋಡಲು ಮೀನಾ ತೂಗುದೀಪ (Meena Thoogudeepa) ಆಗಮಿಸಿದ್ದಾರೆ. ಇದನ್ನೂ ಓದಿ:1 ವರ್ಷದಿಂದ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದೇನೆ- ಶ್ರೀದೇವಿ ಭೈರಪ್ಪ
- Advertisement -
ವಿಜಯಲಕ್ಷ್ಮಿ (Vijayalakshmi) ನೆಲೆಸಿರುವ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ಗೆ ಮೊಮ್ಮಗ ಚಂದನ್ ಜೊತೆ ಮಗನನ್ನು ನೋಡಲು ಆಗಮಿಸಿದ್ದಾರೆ. ದೀಪಾವಳಿ ಹಬ್ಬ, ಮೊಮ್ಮಗ ವಿನೀಶ್ ಹುಟ್ಟುಹಬ್ಬವನ್ನು ಆಚರಿಸುವುದರ ಜೊತೆಗೆ ಮಗ ದರ್ಶನ್‌ನನ್ನು ನೋಡಿ ಮೀನಾ ಖುಷಿಪಟ್ಟಿದ್ದಾರೆ. ಇದೇ ವೇಳೆ, ಅಪಾರ್ಟ್‌ಮೆಂಟ್ ಬಳಿ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಫ್ಯಾನ್ಸ್ ಜಮಾಯಿಸಿದ್ದಾರೆ.
- Advertisement -
- Advertisement -
ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11ರಂದು ಆರೋಪಿ ದರ್ಶನ್‌ಗೆ ನ್ಯಾಯಾಂಗ ಬಂಧನವಾಗಿತ್ತು.