ಅಮರಾವತಿ: ಸಿಕಂದರಾಬಾದ್ ದುರಂತೋ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ(Pregnant) ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು(Medicine Student) ಹೆರಿಗೆ ಮಾಡಿಸಿದ್ದಾರೆ.
ರೈಲು ಅನಕಾಪಲ್ಲಿ ನಿಲ್ದಾಣಕ್ಕೆ ತಲುಪುವ ಹಂತದಲ್ಲಿತ್ತು. ಆದರೆ ಶ್ರೀಕಾಕುಳಂ ಮೂಲದ ಗರ್ಭಿಣಿ ಮಹಿಳೆಗೆ ಪ್ರಯಾಣಿಸುವಾಗ ಹೆರಿಗೆ ನೋವು ಕಾಣಿಸಿಕೊಂಡಿತು. ಇದನ್ನು ಕಂಡ ಅದೇ ಕೋಚ್‍ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮಹಿಳೆಗೆ ಸಹಾಯ ಮಾಡಿದ್ದಾನೆ. ತಕ್ಷಣ ವೈದ್ಯಕೀಯ ವಿದ್ಯಾರ್ಥಿನಿ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಇದನ್ನೂ ಓದಿ: ಇಷ್ಟೊತ್ತಿಗೆ ಹಗ್ಗ ಹಾಕಿ ನಮ್ಮನ್ನು ಗಲ್ಲಿಗೇರಿಸಬಹುದಿತ್ತಲ್ಲ: ನಳಿನ್‍ಗೆ ಡಿಕೆಶಿ ತಿರುಗೇಟು
Advertisement
Advertisement
ತಾಯಿ ಮತ್ತು ಮಗು(Baby) ಸುರಕ್ಷಿತವಾಗಿದ್ದಕ್ಕೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದು, ಈ ಪ್ರಯಾಣದ ವೇಳೆ ಅವರನ್ನು ರಕ್ಷಿಸಿದ ವಿದ್ಯಾರ್ಥಿನಿಗೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ. ಅನಕಪಲ್ಲಿ ನಿಲ್ದಾಣದಲ್ಲಿ ರೈಲು(Train) ನಿಂತಾಗ ಉಳಿದ ಸಹ ಪ್ರಯಾಣಿಕರು ಮತ್ತು ಕುಟುಂಬ ಸದಸ್ಯರು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ದ್ರೌಪದಿ ಮುರ್ಮು