ಬೆಂಗಳೂರು: ಕೋವಿಡ್ ಉಪತಳಿಯ ಭೀತಿ ರಾಜ್ಯ ವ್ಯಾಪಿ ವ್ಯಾಪಿಸಿದೆ. ಈ ಆತಂಕದ ಬೆನ್ನಲ್ಲೆ ಅಲರ್ಟ್ ಆಗಿರೋ ರಾಜ್ಯ, ಕೇಂದ್ರ ಆರೋಗ್ಯ ಇಲಾಖೆಗಳು ಸರಣಿ ಸಭೆಗಳ ಮೂಲಕ ಮುಂಜಾಗ್ರತಾ ಕ್ರಮಗಳು, ಸಿದ್ಧತೆಗಳ ಬಗ್ಗೆ ಗಮನಹರಿಸಿದ್ರೆ, ಇತ್ತ ಬಿಬಿಎಂಪಿ ಮಾತ್ರ ಗಾಢ ನಿದ್ದೆಯಲ್ಲೇ ಇದೆ.
ಹೌದು. 2019ರ ಮೊದಲ ಕೊವೀಡ್ (Corona Virus) ಸಂದರ್ಭದಲ್ಲಿ ನಗರದ ಏರಿಯಾಗಳನ್ನ ಸ್ಯಾನಿಟೈಸ್ ಮಾಡೋಕೆ ಅಂತಾನೇ ಮಿಸ್ಟ್ ಕೆನಾನ್ ಯಂತ್ರಗಳನ್ನ ತರಿಸಲಾಗಿತ್ತು. ಒಂದು ವಾಹನಕ್ಕೆ ಸುಮಾರು 50 ಲಕ್ಷ ವ್ಯಯ ಮಾಡಿ, ನಗರದ 8 ವಲಯಗಳಿಗೆ 8 ವಾಹನಗಳನ್ನ ತರಲಾಗಿದೆ. ಆದರೆ ಈಗ ವಾಹನಗಳು ಬಿಬಿಎಂಪಿ ಆವರಣದಲ್ಲಿ ಧೂಳು ಹಿಡಿದು ನಿಂತಿದೆ. ಕೋವಿಡ್ ಮುಂಜಾಗ್ರತಾ ಸಿದ್ಧತೆ ಬಗ್ಗೆ ಸರ್ಕಾರ ಸೂಚನೆಗಳನ್ನ ನೀಡಿದರೂ ಅದನ್ನ ಸರಿಪಡಿಸುವ ಕೆಲಸಕ್ಕೂ ಬಿಬಿಎಂಪಿ ಮುಂದಾಗಿಲ್ಲ ಅನ್ನೋದು ವಿಪರ್ಯಾಸ.
Advertisement
Advertisement
ನಗರದಲ್ಲಿ ಡೆಂಗ್ಯು (Dengue) ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದಾಗಲೂ ಇವುಗಳ ಬಳಕೆಗೆ ಬಿಬಿಎಂಪಿ (BBMP) ಮುಂದಾಗಿರಲಿಲ್ಲ. ಈಗ ಮತ್ತೆ ಕೋವಿಡ್ ಭೀತಿ ಶುರುವಾಗಿದ್ದು, ಈಗಲೂ ತನ್ನ ನಿರ್ಲಕ್ಷ್ಯವನ್ನ ಸಾಬೀತು ಮಾಡುತ್ತಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಹೊಗೆ ಬಾಂಬ್ – ಬಾಗಲಕೋಟೆಯ ಟೆಕ್ಕಿ ವಶಕ್ಕೆ
Advertisement
Advertisement
ಒಟ್ಟಾರೆ ಕೋಟಿ ಕೋಟಿ ಖರ್ಚು ಮಾಡಿ ತಂದ ವಾಹನಗಳನ್ನ ಜನಪಯೋಗಕ್ಕೆ ಬಾರದಂತೆ ಧೂಳು ಇಡಿಸಿ ಬಿಬಿಎಂಪಿ ನಿಲ್ಲಿಸಿದೆ. ಇನ್ಮುಂದೆ ಆದರೂ ಇಂತಹ ನಿರ್ಲಕ್ಷ್ಯವನ್ನ ಬಿಟ್ಟು ಎಚ್ಚೆತ್ತುಕೊಳ್ಳುತ್ತಾರ ಅನ್ನೋದನ್ನ ಕಾದುನೋಡಬೇಕಿದೆ.