– ಬೆಂಗಳೂರಿನಿಂದ ಧಾರವಾಡದವರೆಗೂ ಪೇದೆ ಪಯಣ
ಧಾರವಾಡ: ಲಾಕ್‍ಡೌನ್ ಶುರುವಾದಗಿನಿಂದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪೊಲೀಸರು ಹಗಲಿರುಳು ಎನ್ನದೇ ಕರ್ತವ್ಯ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಪೊಲೀಸ್ ಪೇದೆ ಕ್ಯಾನ್ಸರ್ ರೋಗಿಯೊಬ್ಬರಿಗೆ ಔಷಧಿ ತಲುಪಿಸಲು 450 ಕಿಲೋ ಮೀಟರ್ ಆಕ್ಟಿವಾ ಬೈಕ್ ಮೇಲೆ ಬರುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕುಮಾರಸ್ವಾಮಿ ಕ್ಯಾನ್ಸರ್ ರೋಗಿಯೊಬ್ಬರಿಗೆ ಔಷಧಿ ತಲುಪಿಸಿರುವ ಪೊಲೀಸ್ ಪೇದೆ. ಇವರು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಬ್ಲಿಕ್ ಟಿವಿಯಲ್ಲಿ ಬರುವ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮದಲ್ಲಿ ಧಾರವಾಡದ ಮಣಿಕಂಠನಗರದ ಉಮೇಶ್ ಕೋಟಿ ಎಂಬವರು ತನ್ನ ಕ್ಯಾನ್ಸರ್ ರೋಗದ ಔಷಧಿ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.
Advertisement
Advertisement
ಈ ಔಷದಿ ಕೇವಲ ಬೆಂಗಳೂರಿನಲ್ಲಿ ಮಾತ್ರ ಸಿಗುತ್ತೆ ಎಂದು ಉಮೇಶ್ ಹೇಳಿದ್ದನ್ನು ಪೊಲೀಸ್ ಪೇದೆ ಕುಮಾರಸ್ವಾಮಿ ಕೇಳಿದ್ದರು. ಇಂದು 450 ಕಿಲೋ ಮೀಟರ್ ದೂರ ಕ್ರಮಿಸಿ ಉಮೇಶ್ ಕೋಟಿಗೆ ಔಷಧಿಯನ್ನ ಮುಟ್ಟಿಸಿದ್ದಾರೆ.
Advertisement
ಶುಕ್ರವಾರ ಬೆಂಗಳೂರಿನಿಂದ ಉಮೇಶ್‍ಗೆ ಫೋನ್ ಮಾಡಿದ್ದ ಪೇದೆ ಕುಮಾರಸ್ವಾಮಿ ಆನ್‍ನೈಲ್‍ನಲ್ಲಿ ಬುಕ್ ಮಾಡುವಂತೆ ಉಮೇಶ್‍ಗೆ ತಿಳಿಸಿದ್ದರು. ಅದರಂತೆಯೇ ಉಮೇಶ್ ಆನ್‍ಲೈನ್‍ನಲ್ಲಿ ಔಷಧಿಯನ್ನು ಬುಕ್ ಮಾಡಿದ್ದಾರೆ. ಬಳಿಕ ಕುಮಾರಸ್ವಾಮಿ ಔಷಧಿಯನ್ನ ನಿನ್ನೆ ಸಂಜೆಯೇ ತೆಗೆದುಕೊಂಡು ಇಟ್ಟುಕೊಂಡಿದ್ದರು. ಇಂದು ಬೆಳಗಿನ ಜಾವ ಸುಮಾರು 4.30ಕ್ಕೆ ಬೆಂಗಳೂರಿಂದ ಹೊರಟು ಮಧ್ಯಾಹ್ನ 2.30ಕ್ಕೆ ಧಾರವಾಡಕ್ಕೆ ಬಂದಿದ್ದಾರೆ.
Advertisement
ಉಮೇಶ್‍ಗೆ ಔಷಧಿ ನೀಡಿರುವುದು ಸಂತೋಷವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಇನ್ನೂ ಪೇದೆ ಬಂದ ತಕ್ಷಣ ಉಮೇಶ್ ಮನೆಯವರು ಅವರಿಗೆ ಸನ್ಮಾನ ಮಾಡಿ ಗೌರವಿಸಿದ್ದಾರೆ.
https://www.facebook.com/339166656101093/videos/251362209372610/