ಬೆಂಗಳೂರು: ರಾಜ್ಯದ ಜನರಿಗೆ ಇದೊಂದು ಶಾಕಿಂಗ್ ಸುದ್ದಿ. ಮಂಗಳವಾರದಂದು ಯಾವುದೇ ಔಷಧಿ ಸಿಗುವುದಿಲ್ಲ.
ನಾನಾ ಬೇಡಿಕೆಗಳನ್ನ ಮುಂದಿಟ್ಟು ರಾಜ್ಯದ್ಯಾಂತ ಔಷಧಿ ಮಳಿಗೆಗಳು ಬಂದ್‍ಗೆ ಕರೆ ನೀಡಿವೆ. ಆನ್‍ಲೈನ್ ಔಷಧ ಮಾರಾಟದ ವಿರುದ್ಧ ಹಾಗೂ ಪರವಾನಿಗೆ ನವೀಕರಿಕರಣದ ಕುರಿತಂತೆ ಮುಖ್ಯವಾಗಿ ಗೊಂದಲ ನಿವಾರಣೆಗೆ ಆಗ್ರಹಿಸಿ ಮೇ. 30ರಂದು ಔಷಧಿ ಮಳಿಗೆಗಳು ಬಂದ್ ನಡೆಸಲಿವೆ.
ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಔಷಧಿ ಮಳಿಗೆಗಳು ಬಂದ್ ಆಗಲಿದ್ದು, ಔಷಧಿಗಳು ಸಿಗುವುದಿಲ್ಲ.
ಅಲ್ಲದೆ ಕೇಂದ್ರದ ಜಿಎಸ್‍ಟಿ ವಿರೋಧಿಸಿ ಹೋಟೆಲ್ ಮಾಲೀಕರು ಕೂಡ ಮೇ 30 ರಂದು ಬಂದ್‍ಗೆ ಕರೆ ನೀಡಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಪುದುಚೆರಿಯ ಹೋಟೆಲ್ ಸಂಘಗಳು ಬಂದ್‍ಗೆ ಬೆಂಬಲ ನೀಡಿವೆ.