ಬೆಂಗಳೂರು: ಟೈಡಾಲ್ ಮಾತ್ರೆ ಸೇವಿಸಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರೆ ಮಾರಾಟ ಮಾಡಿದ್ದ ಮೆಡಿಕಲ್ ಅಂಗಡಿ ಮಾಲೀಕನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ಮೋದಿ ಆಸ್ಪತ್ರೆ ಸಿಗ್ನಲ್ ಬಳಿಯ ‘ಮನ್‍ದೀಪ್ ಫಾರ್ಮ್ ಮೆಡಿಕಲ್ ಶಾಪ್’ ಮಾಲೀಕ ಮನೀಶ್ ಕುಮಾರ್ ನನ್ನ ಬಂಧಿಸಲಾಗಿದೆ. 17ರಂದು ಮೃತ ಯುವಕ ಗೋಪಿಗೆ ಅನಧಿಕೃತವಾಗಿ ಮೆಡಿಕಲ್‍ನಿಂದ ಮನೀಶ್ ಕುಮಾರ್ ಟೈಡಾಲ್ ಮಾತ್ರೆ ಮಾರಾಟ ಮಾಡಿದ್ದನು. ಅದೇ ಮಾತ್ರೆಗಳನ್ನು ತಂದು ಗೋಪಿ, ಅಭಿಷೇಕ್, ಸುಹಾಸ್ ಮಾತ್ರೆಯನ್ನು ಪುಡಿ ಮಾಡಿ ಡಿಸ್ಟಿಲ್ ನೀರಿನಲ್ಲಿ ಬೆರಿಸಿ ಸಿರಿಂಜ್ ಮೂಲಕ ದೇಹಕ್ಕೆ ಇಂಜಕ್ಟ್ ಮಾಡಿಕೊಂಡಿದ್ದರು. ಪರಿಣಾಮ ಗೋಪಿ, ಅಭಿಷೇಕ್ ಮೃತಪಟ್ಟಿದ್ದು, ಸುಹಾಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ:ಬರ್ತ್ ಡೇ ಪಾರ್ಟಿಯಲ್ಲಿ ಯುವಕರ ಸಾವು- ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ
Advertisement
Advertisement
ನವೆಂಬರ್ 19ರ ರಾತ್ರಿ ಮಲ್ಲೇಶ್ವರಂ ಕೋದಂಡರಾಮಪುರದಲ್ಲಿ ಈ ಘಟನೆ ನಡೆದಿತ್ತು. ಗೆಳೆಯನ ಹುಟ್ಟುಹಬ್ಬದ ಪಾರ್ಟಿಗೆ ಗೋಪಿ, ಅಭಿಪೇಕ್ ಜೊತೆಗೆ ಇನ್ನೂ 6 ಮಂದಿ ಯುವಕರು ಹೋಗಿದ್ದರು. ತಡರಾತ್ರಿವರೆಗೂ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದ ಯುವಕರು ನಶೆಗಾಗಿ ಟೈಡಲ್ ಮಾತ್ರೆಯನ್ನು ತೆಗೆದುಕೊಂಡಿದ್ದರು.ಇದನ್ನೂ ಓದಿ:ಗೆಳೆಯನ ಬರ್ತ್ ಡೇ ಪಾರ್ಟಿ ಮಾಡಿದ್ದ ಇಬ್ಬರು ಬಲಿ, 6 ಮಂದಿ ಸ್ಥಿತಿ ಗಂಭೀರ
Advertisement
Advertisement
ರಾತ್ರಿ ಪಾರ್ಟಿ ಮಾಡಿದ ಬಳಿಕ ಯುವಕರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಾತ್ರ ಸೇವನೆಯಿಂದ ಗೋಪಿ ಹಾಗೂ ಅಭಿಷೇಕ್ ಮೃತಪಟ್ಟಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಯುವಕರು ಟೈಡಾಲ್ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾರೆ ಎಂಬುದು ಬಯಲಾಗಿತ್ತು. ಈ ಸಂಬಂಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಯುಡಿಆರ್ ಕೇಸ್ ದಾಖಲಾಗಿತ್ತು. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದರು.