ಬೆಂಗಳೂರು: ರಸ್ತೆ ಅಪಘಾತ ಸಂತ್ರಸ್ತರಿಗೆ ನೀಡುತ್ತಿದ್ದ ನಗದು ರಹಿತ ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರ್ಕಾರ (State Govt) ಇದೀಗ 2.5 ಲಕ್ಷ ರೂ.ಗೆ ಏರಿಕೆ ಮಾಡಿದೆ.
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಕೇಂದ್ರ ಸರ್ಕಾರ (Central Govt) 1.5 ಲಕ್ಷ ರೂ.ವರೆಗೂ ನಗದು ರಹಿತ ಚಿಕಿತ್ಸೆಯನ್ನು ನೀಡುತ್ತಿತ್ತು. ಅಪಘಾತ ಸಂಭವಿಸಿದ ಏಳು ದಿನಗಳವರೆಗೂ ಈ ಸೌಲಭ್ಯ ಇತ್ತು. ಈಗ ರಾಜ್ಯ ಸರ್ಕಾರ ಅಪಘಾತ ಆಗಿ ಬಹುಅಂಗಾಂಗಗಳ ವೈಫಲ್ಯ ಆದರೆ ಚಿಕಿತ್ಸೆಗಾಗಿ 1 ಲಕ್ಷ ರೂ. ಟಾಪ್ ಅಪ್ ನೀಡೋದಾಗಿ ಘೋಷಣೆ ಮಾಡಿದೆ.ಇದನ್ನೂ ಓದಿ: 4.8 ಕೋಟಿ ಪತ್ತೆ ಕೇಸ್ – ಸುಧಾಕರ್‌ಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, FIR ರದ್ದು
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಪಘಾತ ಸಂತ್ರಸ್ತ ಯೋಜನೆ ಅಡಿ ಸಂತ್ರಸ್ತರಿಗೆ 2.5 ಲಕ್ಷ ರೂ.ವರೆಗೂ ಚಿಕಿತ್ಸಾ ನೆರವು ಸಿಗಲಿದೆ. ರಸ್ತೆ ಅಪಘಾತದಿಂದ ಆಗುವ ಸಾವುಗಳನ್ನ ತಡೆಗಟ್ಟಲು ಚಿಕಿತ್ಸಾ ವೆಚ್ಚದ ಅನುದಾನ ಹೆಚ್ಚಳ ಮಾಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷಕ್ಕೆ ಸುಮಾರು 40 ಸಾವಿರ ರಸ್ತೆ ಅಪಘಾಗಳು ದಾಖಲಾಗ್ತಿವೆ. ಪ್ರತಿ ವರ್ಷ ಸುಮಾರು 11 ಸಾವಿರ ಜನರು ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ ಗಂಟೆಗೆ 4 ರಿಂದ 5 ರಸ್ತೆ ಅಪಘಾತಗಳು ದಾಖಲಾಗ್ತಿವೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ 125 ಕೋಟಿ ಅನುದಾನ