ಬಳ್ಳಾರಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿನಲ್ಲಿದ್ದ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದ ಬಗ್ಗೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಭಿನ್ನ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ಮೇಲೆ ಆದ ದಾಳಿ ಬಗ್ಗೆ ಮಾತನಾಡಿದ ಡಿಕೆಶಿ, “ದೇಶದ ಐಕ್ಯತೆ ಮುಖ್ಯ. ಮಾಧ್ಯಮಗಳಲ್ಲಿ ದಾಳಿ ಬಗ್ಗೆ ಭಿನ್ನ ವಿಶ್ಲೇಷಣೆ ಬರುತ್ತಿದೆ. ದೇಶ ಒಗ್ಗಟ್ಟಿನಲ್ಲಿ ಇರಬೇಕಿದೆ. ಚುನಾವಣೆ ಹೊತ್ತಿನಲ್ಲಿ ನಾನೇನು ಮಾತನಾಡೋದಿಲ್ಲ. ಈ ಸಂಬಂಧ ನಮ್ಮ ನಾಯಕರು ಹೇಳುತ್ತಾರೆ. ಸೈನಿಕರ ಪರ ನಾವು ಇರುತ್ತೇವೆ ಹಾಗೂ ನಮಗೆ ಸೈನಿಕರ ರಕ್ಷಣೆ ಮುಖ್ಯ. ರಾಜಕಾರಣದ ಮಾತು ಈಗ ಬೇಡ. ದಾಳಿ ಸರಿಯೋ ತಪ್ಪೋ ಅದರ ಬಗ್ಗೆ ಈಗ ಮಾತನಾಡೋದು ಸರಿಯಲ್ಲ. ದಾಳಿ ಬಗ್ಗೆ ಬೇರೆ ಬೇರೆ ವಾಖ್ಯಾನ ಬರುತ್ತಿದೆ” ಎಂದರು.
Advertisement
Advertisement
ಸುಮಲತಾ ಮಂಡ್ಯ ಲೋಕಸಭೆ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿ “ಸುಮಲತಾ ಅವರು ನಮ್ಮ ರಾಜ್ಯ ನಾಯಕರ ಜೊತೆ ಮಾತನಾಡಲಿ. ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದೇವೆ. ಇದು ಮುಂದುವರಿಯುತ್ತದೆ. ಸುಮಲತಾ ಪಕ್ಷದ ವೇದಿಕೆಯಲ್ಲಿ ಕೆಲಸ ಮಾಡಲು ಅವಕಾಶ ಇದೆ. ರಾಜಕೀಯಕ್ಕೆ ಬಂದಿರೋದು ಸ್ವಾಗತಾರ್ಹ ಎಂದು ಹೇಳುತ್ತಾ ಪರೋಕ್ಷವಾಗಿ ಸುಮಲತಾಗೆ ಟಿಕೆಟ್ ಇಲ್ಲ ಎಂದು ಡಿಕೆಶಿ ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv