ಬರ್ಮಿಂಗ್‌ಹ್ಯಾಮ್: ಪ್ರತಿಷ್ಟಿತ ಕಾಮನ್‌ವೆಲ್ತ್ ಗೇಮ್ಸ್‌ನ ಬಾಕ್ಸಿಂಗ್‌ನಲ್ಲಿಂದು 3ನೇ ಚಿನ್ನದ ಪದಕ ಭಾರತದ ಪಾಲಾಗಿದೆ. ಗೇಮ್ಸ್‌ನಲ್ಲಿ ಒಟ್ಟಾರೆಯಾಗಿ ಇಂದು ಒಂದೇ ದಿನದಲ್ಲಿ 4 ಚಿನ್ನದ ಬೇಟೆಯಾಡಿದ ಕೀರ್ತಿಯನ್ನು ಭಾರತ ಸಂಪಾದಿಸಿದೆ.
GOLD???? For Nikhat???????? #NikhatZareen???? wins Gold Medal in Women's 50Kg Category.#CWG2022 | #India4CWG2022 | #CommonwealthGames | #CWG2022India pic.twitter.com/kquL64h5uu
— All India Radio News (@airnewsalerts) August 7, 2022
Advertisement
50 ಕೆಜಿ ವಿಭಾಗದ ಮಹಿಳೆಯರ ಬಾಕ್ಸಿಂಗ್‌ನಲ್ಲಿ ನಿಖತ್ ಜರೀನ್ ಭರ್ಜರಿ ಗೆಲುವಿನೊಂದಿಗೆ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಇದನ್ನೂ ಓದಿ: CWG-2022: ಭಾರತಕ್ಕೆ ಚಿನ್ನದ ಕಿಕ್ ಕೊಟ್ಟ ಬಾಕ್ಸರ್ಸ್, ಸಿಂಧು ಫೈನಲ್‌ಗೆ ಗ್ರ್ಯಾಂಡ್ ಎಂಟ್ರಿ
Advertisement
ಇದಕ್ಕೂ ಮುನ್ನ 48 ಕೆಜಿ ವಿಭಾಗದ ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ನೀತು ಗಂಗಾಸ್ ಹಾಗೂ 51 ಕೆಜಿ ಪುರುಷರ ವಿಭಾಗದಲ್ಲಿ ಅಮಿತ್ ಪಂಗಲ್ ಭರ್ಜರಿ ಜಯ ಸಾಧಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
Advertisement
Silver???? in Table Tennis ????
India's Sharath Kamal & Sathiyan Gnanasekaran win Silver in Men's Doubles Table Tennis.#CWG2022 | #India4CWG2022 | #CommonwealthGames | #CWG2022India pic.twitter.com/oSsYSNOwyt
— All India Radio News (@airnewsalerts) August 7, 2022
Advertisement
10ನೇ ದಿನದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ 4 ಚಿನ್ನದ ಪದಕಗಳು ಲಭಿಸಿವೆ. ಟ್ರಿಪಲ್ ಜಂಪ್‌ನಲ್ಲಿ ಒಂದು ಹಾಗೂ ಬಾಕ್ಸಿಂಗ್‌ನಲ್ಲಿ 3 ಚಿನ್ನದ ಪದಕ ಪಡೆದಿದೆ.
ಬೆಳ್ಳಿ ಕಿರಣ ಮೂಡಿಸಿದ ಕಮಲ್ -ಸತ್ಯನ್: ಇಂದಿನ ಪುರುಷರ ಡಬಲ್ಸ್ ಟೇಬಲ್ ಟೆನ್ನಿಸ್ ಭಾರತದ ಶರತ್ ಕಮಲ್ ಹಾಗೂ ಸತ್ಯನ್ ಜ್ಞಾನ ಶೇಖರನ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಆದರೆ ಇನ್ನೊಂದೆಡೆ ಮಹಿಳೆಯರ ವಿಭಾಗದ ಟೇಬಲ್ ಟೆನ್ನಿಸ್ ನಲ್ಲಿ ಭಾರತದ ಶ್ರೀಜಾ ಅಕುಲಾ ಅವರು ಪ್ಲೇ ಆಫ್‌ನಲ್ಲಿ ಆಸ್ಟ್ರೇಲಿಯಾದ ಯಾಂಗ್ಜಿ ಲಿಯು ವಿರುದ್ಧ 3-4 ಅಂತರದಲ್ಲಿ ಸೋಲನ್ನು ಕಂಡಿದ್ದಾರೆ. ಒಂದೂವರೆ ಗಂಟೆಗಳಿಗೂ ಅಧಿಕಕಾಲ ಸೆಣಸಿದ ಅವರು 3 6-11 2-11 11-7 13-15 11-9 7-11 ಅಂತರದಲ್ಲಿ ಪರಾಭವಗೊಂಡಿದ್ದು, ಕಂಚಿನ ಪದಕದಿಂದ ವಂಚಿತರಾಗಿದ್ದಾರೆ.