ಬೆಂಗಳೂರು: ಬೆಂಗಳೂರಿನಂತಹ (Bengaluru) ಮಹಾ ನಗರದಲ್ಲಿ ವೆಹಿಕಲ್ಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಪ್ರಮುಖ ರಸ್ತೆಗಳಲ್ಲಿ (Roads) ಸಾರ್ವಜನಿಕರು ಓಡಾಡೋಕೆ ಅವಕಾಶ ಇಲ್ಲದೇ ಇರೋ ಥರ ವೆಹಿಕಲ್ ಓಡಾಟ ಜಾಸ್ತಿ ಇದೆ. ವೆಹಿಕಲ್ ಓಡಾಟದ ಮಧ್ಯೆ ಪ್ರಾಣ ಪಣಕ್ಕಿಟ್ಟು ಪೌರ ಕಾರ್ಮಿಕರು ನಗರವನ್ನು ಸ್ವಚ್ಛ ಮಾಡ್ತಾರೆ. ಯಾವಾಗ ಯಾವ ರೀತಿ ಅಪಘಾತ ಆಗುತ್ತೆ ಅಂತಾ ಹೇಳೋಕೆ ಸಾಧ್ಯ ಆಗಲ್ಲ. ಹಾಗಾಗಿ ಬಿಬಿಎಂಪಿ (BBMP) ಪೌರಕಾರ್ಮಿಕರ ರಕ್ಷಣೆಗೆ ನಿಂತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಮೆಕ್ಯಾನಿಕಲ್ ಸ್ವೀಪರ್ ಮಷಿನ್ನಿಂದ (Mechanical Sweeper Machine) ಸ್ವಚ್ಛತೆ ಮಾಡಿಸಲು ಪ್ಲ್ಯಾನ್ ಮಾಡಿದೆ.
Advertisement
ಹೊಸ ತಂತ್ರಜ್ಞಾನದ ಸ್ವೀಪರ್ ಮಷಿನ್ 30 ಕೆಜಿ ತೂಕ ಇರಲಿದ್ದು, ಯಂತ್ರದ ಕೆಳಭಾಗದಲ್ಲಿ ಟ್ರಾಲಿ ಮಾದರಿಯ ಚಕ್ರಗಳನ್ನು ಆಳವಡಿಸಿ. ಟ್ರಾಲಿ ಸ್ಟಾರ್ಟ್ ಮಾಡಿದ ಕೂಡಲೇ ತನ್ನಿಂದ ತಾನೇ ಕಸ ತೆಗೆದುಕೊಂಡು ಹೋಗಲು ಸುಲಭವಾಗಿರುವಂತೆ ರೂಪಿಸಲಾಗಿದೆ. ಇದನ್ನೂ ಓದಿ: ರ್ಯಾಪಿಡ್ ರೋಡ್ ರಿಪೋರ್ಟ್ ವಿಚಾರದಲ್ಲಿ ಬಿಬಿಎಂಪಿ ಡಬಲ್ ಗೇಮ್!
Advertisement
Advertisement
ಬೆಂಗಳೂರು ನಗರದಲ್ಲಿ 13 ಸಾವಿರ ಉದ್ದದ ರಸ್ತೆಗಳಿವೆ. 1,400 ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಿವೆ ಜೊತೆಗೆ ವಾರ್ಡ್ ರಸ್ತೆಗಳಿವೆ. ಇಲ್ಲಿ ಕ್ಲೀನ್ ಮೆಕ್ಯಾನಿಕಲ್ ಸ್ವೀಪರ್ ಮಷಿನ್ ಜೊತೆಗೆ 815 ಮ್ಯಾನ್ಯುಯಲ್ ಪುಶ್ ಆಪರೇಟಿಂಗ್ ಮಷಿನ್ಗಳನ್ನು ಖರೀದಿ ಮಾಡಲು ಬಿಬಿಎಂಪಿ ಮುಂದಾಗಿದೆ. ಇದಕ್ಕೆ ಅಂತಾ ಮೂರೂವರೆ ಕೋಟಿ ರೂ. ಮೀಸಲಿಟ್ಟಿದ್ದು ಹೊಸದಾಗಿ ಟೆಂಡರ್ ಕರೆಯುವುದಾಗಿ ತಿಳಿಸಿದೆ. ಪ್ರಾಯೋಗಿಕವಾಗಿ ಸಕ್ಸಸ್ ಆದರೆ ಮತ್ತಷ್ಟು ಮಷಿನ್ ಖರೀದಿಸುತ್ತೇವೆ ಅಂತಿದ್ದಾರೆ. ಇದನ್ನೂ ಓದಿ: ಎಲೆಕ್ಷನ್ ಎಫೆಕ್ಟ್: ಸಂಕ್ರಾಂತಿ ಹಬ್ಬಕ್ಕೆ ಜನರಿಗೆ ಗಿಫ್ಟೋ ಗಿಫ್ಟ್ – ಮನೆ ಮನೆಗೆ ತಟ್ಟೆ, ಲೋಟ, ಸ್ಪೂನ್ ಕೊಟ್ಟ MLA
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k