ಬೆಂಗಳೂರು: ಇದೇ ಏಪ್ರಿಲ್ 10ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಅಂದು ʻಮಹಾವೀರ ಜಯಂತಿʼ (MahavirJ ayanti) ಇರುವ ಕಾರಣ ಕಸಾಯಿಖಾನೆಯಲ್ಲಿ ಹಾಗೂ ಮಾಂಸ ಮಾರಾಟ ಮಳಿಗೆಗಳಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ (Meat Sale) ನಿಷೇಧಿಸಿ ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: 2024ರಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ನಿಂದ ಹೊಸ ಮೈಲಿಗಲ್ಲು – 41 ದಶಲಕ್ಷ ಮಂದಿ ಪ್ರಯಾಣ
ಏಪ್ರಿಲ್ 10ರಂದು ಮಹಾವೀರ ಜಯಂತಿ
ಜೈನ ಧರ್ಮದ ಅನುಯಾಯಿಗಳಿಗೆ ಮಹಾವೀರ ಜಯಂತಿ ಬಹಳ ವಿಶೇಷವಾದ ಹಬ್ಬ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲಪಕ್ಷದ ತ್ರಯೋದಶಿ ದಿನದಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಏ.10 ರಂದು ಆಚರಣೆ ಮಾಡಲಾಗುತ್ತದೆ. ಆಚರಣೆ ಹೇಗೆ? ಆಚರಣೆಯ ಮಹತ್ವ ಏನು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ಮರುಜೀವ ನೀಡುವಂತೆ ಡಾ. ಮಂಜುನಾಥ್ ಮನವಿಗೆ ಸ್ಮಂದಿಸಿದ ಕೇಂದ್ರ
ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾವೀರ ಸ್ವಾಮಿಯು ಕ್ರಿ.ಪೂ 599 ರಲ್ಲಿ ಚೈತ್ರ ಮಾಸದ 13ನೇ ದಿನ ಬಿಹಾರದ ಕುಂದಾಗ್ರಾಮದಲ್ಲಿ ರಾಜಮನೆತನದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಅವರ ಬಾಲ್ಯದ ಹೆಸರು ವರ್ಧಮಾನ್. ಅವರು 30ನೇ ವಯಸ್ಸಿನಲ್ಲಿ, ಸಿಂಹಾಸನವನ್ನು ತ್ಯಜಿಸಿ ಆಧ್ಯಾತ್ಮಿಕತೆಯ ಮಾರ್ಗವನ್ನು ಆರಿಸಿಕೊಂಡರು. ಇನ್ನೂ ಮಹಾವೀರ ಜಯಂತಿಯನ್ನು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಇರುವ ಜೈನ ಸಮುದಾಯವರು ಆಚರಿಸುತ್ತಾರೆ. ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಸ್ಫೋಟಕ ಶತಕ – ಎಬಿಡಿ, ಕೊಹ್ಲಿ ದಾಖಲೆ ಪುಡಿಗಟ್ಟಿದ 24ರ ಯುವಕ