ಕೋವಿಡ್ ಭೀತಿ ಮರೆತು ಕೋಟೆನಾಡಲ್ಲಿ ಮಟನ್ ಖರೀದಿಸಲು ಮುಗಿಬಿದ್ದ ಮಾಂಸ ಪ್ರಿಯರು

Public TV
1 Min Read
muttan

ಚಿತ್ರದುರ್ಗ: ಶ್ರಾವಣ ಮಾಸದ ಬಳಿಕ ಮೊದಲ ಭಾನುವಾರದ ಹಿನ್ನೆಲೆಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ ಮಾಂಸದ ಅಂಗಡಿಗಳ ಮುಂದೆ ಜನಸಂದಣಿ ಜಮಾಯಿಸಿದೆ.

muttan 2

ಕೋವಿಡ್ ಭೀತಿ ಮರೆತು ಮಾಂಸ ಖರೀದಿಸಲು ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ ಸೇರಿದಂತೆ ವಿವಿಧ ಸ್ಥಳಗಳಲ್ಲಿರುವ ಮಾಂಸದಂಗಡಿಗಳ ಬಳಿ ಜನರು ಮುಗಿಬಿದ್ದಿದ್ದಾರೆ. ಚಿಕನ್ ಹಾಗೂ ಮಟನ್ ಖರೀದಿ ಭರಾಟೆಯಲ್ಲಿ ಮಾಸ್ಕ್ ಸರಿಯಾಗಿ ಧರಿಸದೇ ದೈಹಿಕ ಅಂತರ ಮರೆತು ಜನರು ಜಮಾಯಿಸಿದ್ದಾರೆ. ಇದನ್ನು ನೋಡಿದರೆ ಮತ್ತೆ ಕೋಟೆನಾಡಲ್ಲಿ ಕೊರೊನಾ ಹರಡುವುದೋ ಎಂಬ ಭೀತಿ ಶುರುವಾಗಿದೆ. ಇದನ್ನೂ ಓದಿ:  ಸೈಕ್ಲಿಂಗ್ ವೇಳೆ ಹೃದಯಾಘಾತ – ಸೈಕ್ಲಿಸ್ಟ್ ಸಾವು!

muttan 4

ಸತತ ಒಂದು ತಿಂಗಳಿಂದ ಮಾಂಸಾಹಾರ ಸೇವಿಸದೇ ಶ್ರಾವಣ ಮಾಸದ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದ ಕೋಟೆನಾಡಿನ ಜನರು ಇಂದು ಬೆಳಿಗ್ಗೆಯಿಂದಲೇ ಮಾಂಸ ಖರೀದಿಸಲು ಮುಂದಾಗಿದ್ದರು. ನಾಟಿಪಟ್ಲಿ, ನಾಟಿಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿತ್ತು. ಕಳೆದ ತಿಂಗಳು ಕೇವಲ 450 ರೂ.ಗೆ ಸಿಗುತ್ತಿದ್ದ ಪಟ್ಲಿ ಮಾಂಸವು, 650ರಿಂದ 750 ರೂಪಾಯಿವರೆಗೆ ದರ ಏರಿಕೆಯಾಗಿದೆ. ಆದರೂ ಜನರು ಇದ್ಯಾವುದನ್ನೂ ಲೆಕ್ಕಿಸದೇ ಗಂಡುಕುರಿಯ ಮಾಂಸಕ್ಕಾಗಿ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:  ಹದಗೆಟ್ಟ ರಸ್ತೆಯ ತಾತ್ಕಾಲಿಕ ದುರಸ್ತಿಗೆ ಗ್ರಾಮದ ಯುವಕರ ಶ್ರಮದಾನ

muttan 1

ಮಾಂಸದ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಕೆಲವರು ಚಿಕನ್ ಮೊರೆ ಹೋಗುವುದು ಸಾಮಾನ್ಯವಾಗಿತ್ತು. ನಾಟಿ ಚಿಕನ್ ದರವೂ ಏರಿಕೆಯಾಗಿದ್ದು, ಅನಿವಾರ್ಯವಾಗಿ ಮಾಂಸಪ್ರಿಯರು ಚಿಕನ್ ಖರೀದಿಸಿದರು. ಮಾಂಸ ಮಾರಾಟದ ಸ್ಥಳಗಳು ಇಂದು ತರಕಾರಿ ಮಾರುಕಟ್ಟೆಗಿಂತ ಕೊಂಚ ಬ್ಯುಸಿಯಾಗಿತ್ತು. ಇದನ್ನೂ ಓದಿ:  ಮಹಾರಾಷ್ಟ್ರದ ಮಾಂತ್ರಿಕನಿಂದ ಕೃಷ್ಣಾ ಕಿತ್ತೂರಿನಲ್ಲಿ ವಾಮಾಚಾರ..!

Share This Article
Leave a Comment

Leave a Reply

Your email address will not be published. Required fields are marked *