ಬ್ರಿಟನ್: ಯುಕೆ ಪ್ರಧಾನಿ (UK PM) ಕೀರ್ ಸ್ಟಾರ್ಮರ್ ಆಯೋಜಿಸಿದ್ದ ದೀಪಾವಳಿ (Diwali Party) ಪಾರ್ಟಿಯಲ್ಲಿ ಮಾಂಸ, ಮದ್ಯ ಕಂಡು ಬ್ರಿಟಿಷ್ ಹಿಂದೂಗಳು ಶಾಕ್ ಆಗಿದ್ದಾರೆ.
ಪ್ರಧಾನಮಂತ್ರಿಯವರ ಅಧಿಕೃತ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ, ಸಮುದಾಯದ ಮುಖಂಡರು ಮತ್ತು ಉನ್ನತ ರಾಜಕಾರಣಿಗಳು ಭಾಗವಹಿಸಿದ್ದರು. ದೀಪಾಲಂಕಾರದ ದೀಪಗಳು, ಕೂಚಿಪುಡಿ ನೃತ್ಯ ಪ್ರದರ್ಶನ ಮತ್ತು ಸ್ಟಾರ್ಮರ್ ಅವರ ಭಾಷಣವನ್ನು ಸಮಾರಂಭ ಒಳಗೊಂಡಿತ್ತು. ಇದನ್ನೂ ಓದಿ: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 25ಕ್ಕೂ ಅಧಿಕ ಸಾವು
Advertisement
Advertisement
ಕೆಲವರು ಬ್ರಿಟಿಷ್ ಹಿಂದೂಗಳು, ಊಟದ ಮೆನುವಿನಲ್ಲಿ ಮದ್ಯ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿರುವುದನ್ನು ಕಂಡು ಆಘಾತ ವ್ಯಕ್ತಪಡಿಸಿದರು. ಅತಿಥಿಗಳಿಗೆ ಲ್ಯಾಂಬ್ ಕಬಾಬ್, ಬಿಯರ್ ಮತ್ತು ವೈನ್ ಅನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.
Advertisement
ಕಳೆದ ವರ್ಷ ರಿಷಿ ಸುನಕ್ ದೀಪಾವಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಊಟದ ಮೆನುವಿನಲ್ಲಿ ಮಾಂಸ ಮತ್ತು ಮದ್ಯ ಇರಲಿಲ್ಲ. ಪ್ರಮುಖ ಬ್ರಿಟಿಷ್ ಹಿಂದೂ ಪಂಡಿತರಾದ ಸತೀಶ್ ಕೆ ಶರ್ಮಾ ಅವರು, ಪ್ರಧಾನ ಮಂತ್ರಿ ಕಚೇರಿಯಲ್ಲಿ ಸಂವೇದನಾಶೀಲತೆ ಕೊರತೆ ಎದ್ದು ಕಂಡಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ದಿನಕ್ಕೆ ಒಂದಲ್ಲ.. 16 ಬಾರಿ ಆಗುತ್ತೆ ಸೂರ್ಯೋದಯ, ಸೂರ್ಯಾಸ್ತ – ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್‌ಗೆ ಆಗ್ತಿರೋ ಅನುಭವಗಳೇನು?
Advertisement
ಕಳೆದ 14 ವರ್ಷಗಳಿಂದ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ದೀಪಾವಳಿ ಆಚರಣೆಯು ಮಾಂಸ ಮತ್ತು ಮದ್ಯಪಾನವಿಲ್ಲದೇ ನಡೆಯುತ್ತಿದೆ. ಈ ವರ್ಷದ ಆಚರಣೆಯು ಮಾಂಸಾಹಾರ-ಪ್ರೇರಿತ ಮೂರ್ಖತನದ ಪ್ರಾಬಲ್ಯದ ಘಟನೆಯಾಗಿ ಕಂಡುಬಂದಿದ್ದರಿಂದ ನಾನು ನಿರಾಶೆಗೊಂಡಿದ್ದೇನೆ ಮತ್ತು ಆಘಾತಕ್ಕೊಳಗಾಗಿದ್ದೇನೆ. ಇದು ದುರಂತ. ಪ್ರಧಾನ ಮಂತ್ರಿಯ ಸಲಹೆಗಾರರು ತುಂಬಾ ಅಸಡ್ಡೆ ಮತ್ತು ನಿರ್ಲಕ್ಷ್ಯದಿಂದ ಇರುತ್ತಿದ್ದರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 10, ಡೌನಿಂಗ್ ಸ್ಟ್ರೀಟ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.