ಬೇಸಿಗೆ ಬಂತೆಂದರೆ ಸಾಕು ಮಕ್ಕಳು ಒಂದಲ್ಲ ರೀತಿಯಲ್ಲಿ ಅನಾರೋಗ್ಯಕ್ಕೀಡಾಗುತ್ತಾರೆ. ಇದರಲ್ಲಿ ದಡಾರ ಕೂಡ ಒಂದು. ಗ್ರಾಮೀಣ ಭಾಗದಲ್ಲಿ ‘ ಅಮ್ಮ’ ಎಂದು ಕರೆಯಲಾಗುವ ಇದನ್ನು ಇಂಗ್ಲಿಷ್‍ನಲ್ಲಿ ಮೀಸೆಲ್ಸ್ (Measles) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಚಿಕ್ಕಮಕ್ಕಳಲ್ಲಿ ಕಂಡು ಬರುವ ಈ ರೋಗಕ್ಕೆ ಮಧ್ಯಪ್ರದೇಶದಲ್ಲಿ ಈಗಾಗಲೇ ಇಬ್ಬರು ಪುಟ್ಟ ಕಂದಮ್ಮಗಳು ಬಲಿಯಾಗಿವೆ. ಜೊತೆಗೆ ಸುಮಾರು 17 ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ರುಬಿಯೋಲಾ ಎಂದೂ ಕರೆಯಲ್ಪಡುವ ದಡಾರವು ಮೊದಲು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸಿಲ್ಲಾ ಎಂಬ ವೈರಸ್ ನಿಂದ ಬರುವ ರೋಗ ಇದಾಗಿದ್ದು, ಒಬ್ಬರಿಂದ ಒಬ್ಬರಿಗೆ ಬಹಳ ಬೇಗ ಹರಡುತ್ತದೆ. ಶಾಲೆಗೆ ಹೋಗುವ ಮಕ್ಕಳಲ್ಲಿ ದಡಾರ ಕಾಣಿಸಿಕೊಂಡಲ್ಲಿ, ಮಗು ಗುಣಮುಖವಾಗುವವರೆಗೂ ಶಾಲೆಗೆ ಕಳುಹಿಸದೇ ಇರುವುದು ಒಳಿತು. ದಡಾರ ಇರುವ ಮಗುವನ್ನು ಶಾಲೆಗೆ ಕಳುಹಿಸಿದಲ್ಲಿ ಇತರ ಮಗುವಿಗೂ ರೋಗ ಹರಡುವ ಸಾಧ್ಯತೆ ಹೆಚ್ಚು.
Advertisement
ಒಂದು ಕಾಲದಲ್ಲಿ ದಡಾರವು ಬಾಲ್ಯದಲ್ಲಿ ಕಂಡುಬರುವ ಸಾಮಾನ್ಯ ಕಾಯಿಲೆಯಾಗಿತ್ತು. ಇದಕ್ಕೆ ವ್ಯಾಕ್ಸಿನ್ ಬಂದ ಬಳಿಕ ಇದರ ಹರಡುವಿಕೆ ಕಡಿಮೆಯಾಗುತ್ತಾ ಬಂದಿದೆ. ಸದ್ಯ ಮಕ್ಕಳಿಗೆ ದಡಾರದ ಚುಚ್ಚುಮದ್ದು ಕೊಡಿಸುವ ಮೂಲಕ ಈ ರೋಗ ನಿಯಂತ್ರಿಸಬಹುದು. ಸಾಮಾನ್ಯವಾಗಿ ಮಗು ಜನಿಸಿದ ಆರು ತಿಂಗಳವರೆಗೆ ದಡಾರ ಕಾಣಿಸಿಕೊಳ್ಳುವುದಿಲ್ಲ. ಇದಕ್ಕೆ ತಾಯಿಯಿಂದ ಬಳುವಳಿಯಾಗಿ ಪಡೆದ ರೋಗ ನಿರೋಧಕ ಶಕ್ತಿಯೇ ಕಾರಣ. ಕೇವಲ ಮಕ್ಕಳಲ್ಲಿ ಮಾತ್ರವಲ್ಲದೇ ರೋಗನಿರೋಧಕ ಶಕ್ತಿ ಹೊಂದಿರದ ಯಾವುದೇ ವಯಸ್ಸಿನ ವ್ಯಕ್ತಿಗಳಲ್ಲಿ ಸಂಭವಿಸಬಹುದು.
Advertisement
Advertisement
ಲಕ್ಷಣಗಳು: ಈ ರೋಗ ಕಾಣಿಸಿಕೊಳ್ಳುವ ಮೊದಲನೇ ದಿನ ಜ್ವರ ಬರುತ್ತದೆ. ಆರಂಭದಲ್ಲಿ ಮುಖದ ಮೇಲಷ್ಟೇ ಕಾಣಿಸಿಕೊಳ್ಳುವ ನೀರಗುಳ್ಳೆಗಳು ದಿನಗಳೆದಂತೆ ಹೊಟ್ಟೆ ಹಾಗೂ ದೇಹದ ಇತರ ಭಾಗಕ್ಕೂ ವಿಸ್ತರಿಸುತ್ತವೆ. ದಡಾರವು ಸಾಮಾನ್ಯವಾಗಿ ಜ್ವರ, ಶೀತ, ಕೆಮ್ಮು ಮತ್ತು ಕಣ್ಣುಗಳು ಕೆಂಪಾಗಿ ನೀರು ಬರುವುದು. ಬೆಳಕು ನೋಡೋಕೆ ಆಗದೇ ಇರುವುದು. ಕೆಲ ದಿನಗಳ ನಂತರ ದೇಹದ ಮೇಲೆ ದದ್ದು ಕಾಣಿಸಿಕೊಳ್ಳುತ್ತದೆ. ಮುಖದ ಮೇಲೆ ಪ್ರಾರಂಭವಾಗುತ್ತದೆ ಮತ್ತು ದೇಹದ ಉಳಿದ ಭಾಗಗಳಿಗೆ ಹರಡುತ್ತದೆ.
Advertisement
ಹೇಗೆ ಹರಡುತ್ತದೆ?: ಕೆಮ್ಮಿದಾಗ, ಸೀನಿದಾಗ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ದಡಾರ ರೋಗಿಯ ಬಾಯಲ್ಲಿ, ಮೂಗಿನಲ್ಲಿ ಮತ್ತು ಗಂಟಲ ಸ್ರವಿಕೆಯಲ್ಲಿ ವೈರಸ್‍ಗಳಿರುತ್ತವೆ. ಈ ರೋಗಿ ಸೀನಿದಾಗ, ಕೆಮ್ಮಿದಾಗ ಹೊರಗಿನ ಪರಿಸರಕ್ಕೆ ವೈರಸ್‍ಗಳು ಸೇರುತ್ತವೆ. ಉಸಿರಾಟದ ಮೂಲಕ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹವನ್ನು ಪ್ರವೇಶಿಸಿ, ರೋಗ ಲಕ್ಷಣಗಳನ್ನು ಹೊರಹೊಮ್ಮಿಸುತ್ತವೆ. ಆರೋಗ್ಯವಂತ ಮಗುವಿಗೆ ಸೋಂಕಿನ ಮೂಲಕ ದಡಾರ ಹರಡುತ್ತದೆ. ದಡಾರ ರೋಗಿ ಉಪಯೋಗಿಸಿದ ಸೋಂಕಿನಿಂದ ಕೂಡಿದ ವಸ್ತುಗಳಿಂದಲೂ ಸೋಂಕು ಹರಡಬಹುದು. ದಡಾರ ಕಾಣಿಸಿಕೊಂಡ ಪ್ರಾರಂಭದ ಐದು ದಿನಗಳವರೆಗೆ ಸೋಂಕು ತೀವ್ರವಾಗಿರುವುದರಿಂದ ಬೇರೆ ಮಕ್ಕಳಿಂದ ಮಗುವನ್ನು ಪ್ರತ್ಯೇಕವಾಗಿರಿಸುವುದು ಅಗತ್ಯ.
ಇತ್ತೀಚಿನ ವರ್ಷಗಳಲ್ಲಿ ಇದು 18ರಿಂದ 40 ವರ್ಷ ವಯೋವಾನದವರಲ್ಲೂ ಕಂಡುಬರುತ್ತಿದೆ. ಮಕ್ಕಳಲ್ಲಿ ದಡಾರ ಕಾಣಿಸಿಕೊಂಡರೆ ಅಮ್ಮ ಬರುವುದು ಅಥವಾ ದೇವಿಯ ಕಾಟವೆಂಬ ನಂಬಿಕೆ ಇದೆ. ಹೀಗಾಗಿ ಕೆಲವರು ದೇವಸ್ಥಾನಗಳಿಗೆ ತೆರಳಿ ಎಣ್ಣೆಕೊಟ್ಟು ಬರುತ್ತಾರೆ. ಇದರ ಬದಲು ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಿದಲ್ಲಿ ಮಗು ಬೇಗ ಗುಣಮುಖವಾಗುತ್ತದೆ. ಇದನ್ನೂ ಓದಿ: ಬಂಜೆತನ ನಿವಾರಿಸಲು IVF ಚಿಕಿತ್ಸೆ- ಏನಿದು ಚಿಕಿತ್ಸೆ..?, ಖರ್ಚು ಎಷ್ಟು..?
ತಡೆಗಟ್ಟುವಿಕೆ ಹೇಗೆ?: ದಡಾರವನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ವ್ಯಾಕ್ಸಿನೇಷನ್. ದಡಾರ, ಮಂಪ್ಸ್ ಮತ್ತು ರುಬೆಲ್ಲಾ (ಒಒಖ) ಲಸಿಕೆ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಲಸಿಕೆಯಾಗಿದ್ದು ಅದು ದಡಾರದ ವಿರುದ್ಧ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ಲಸಿಕೆಯನ್ನು ಸಾಮಾನ್ಯವಾಗಿ ಎರಡು ಡೋಸ್ ಗಳಲ್ಲಿ ನೀಡಲಾಗುತ್ತದೆ, ಮೊದಲ ಡೋಸ್ ಅನ್ನು 12-15 ತಿಂಗಳ ವಯಸ್ಸಿನಲ್ಲಿ ಮತ್ತು ಎರಡನೇ ಡೋಸ್ ಅನ್ನು 4-6 ವರ್ಷ ವಯಸ್ಸಿನಲ್ಲಿ ನೀಡಲಾಗುತ್ತದೆ. ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡರೆ ಮನೆಯಲ್ಲಿಯೇ ಇರುವ ಮೂಲಕ ದಡಾರ ಹರಡುವುದನ್ನು ತಪ್ಪಿಸಬಹುದು.
ಮುನ್ನೆಚ್ಚರಿಕೆ ಕ್ರಮ: ದಡಾರದ ಲಸಿಕೆಯನ್ನು ಮಕ್ಕಳಿಗೆ ಕೊಡಿಸಬೇಕು. ಈ 2017 ರ ಫೆಬ್ರವರಿ ತಿಂಗಳಲ್ಲಿ ಕರ್ನಾಟಕದಲ್ಲಿ ಈ ಲಸಿಕೆಯನ್ನು ಎಲ್ಲಾ ಮಕ್ಕಳಿಗೆ ಕೊಡುವ ಅಭಿಯಾನ ಆರಂಭವಾಗಿದೆ. ಅದರ ಉಪಯೋಗವನ್ನು ಅಗತ್ಯವಿರುವ ಎಲ್ಲರೂ ಪಡೆದುಕೊಳ್ಳಬೇಕು. ಇದನ್ನೂ ಓದಿ: ಥೈರಾಯ್ಡ್ ಸಮಸ್ಯೆ ಅಂದ್ರೆ ಏನು? – ಸಾಮಾನ್ಯ ಲಕ್ಷಣಗಳು ಯಾವುವು?
ದಡಾರ ತಡೆಗಟ್ಟುವ ಚುಚ್ಚುಮದ್ದನ್ನು ಕೊಡಿಸದಿದ್ದರೆ ಮಗುವಿಗೆ ದಡಾರ ರೋಗ ಬರುವ ಸಾಧ್ಯತೆ ಹೆಚ್ಚು ಇದೆ. ಪುಟ್ಟ ಕಂದಮ್ಮಗಳಲ್ಲಿ ಮತ್ತು ಅಪೌಷ್ಟಿಕತೆ ಹೊಂದಿರುವ ಮಕ್ಕಳಲ್ಲಿ ದಡಾರ ಬಹಳ ಬೇಗ ತೊಂದರೆ ಉಂಟು ಮಾಡುತ್ತದೆ. ದಡಾರದಿಂದ ಪ್ರಾಣಕ್ಕೆ ಯಾವ ಅಪಾಯವೂ ಇಲ್ಲ. ಆದರೆ ಮಕ್ಕಳಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಕೊಡುತ್ತದೆ. ಹೀಗಾಗಿ ಮಕ್ಕಳು ಕಿರಿಕಿರಿ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ತಪ್ಪದೇ ದಡಾರದ ಲಸಿಕೆಯನ್ನು ಕೊಡಿಸುವುದು ಅತ್ಯಗತ್ಯವಾಗಿದೆ.
ಅಗತ್ಯ ಕ್ರಮಗಳೇನು?
* ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ: ಆಗಾಗ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಿರಿ. ಕೆಮ್ಮುವುದು, ಸೀನುವುದು ಮಾಡುವಾಗ ಜಾಗ್ರತೆವಹಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಸೋಪ್ ಮತ್ತು ನೀರು ಲಭ್ಯವಿಲ್ಲದಿದ್ದರೆ, ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಳಸಿ.
* ಅನಾರೋಗ್ಯದ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ: ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ದಡಾರ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ಹೀಗಾಗಿ ಅನಾರೋಗ್ಯದ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ.
* ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ: ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ, ಸಾಕಷ್ಟು ನಿದ್ರೆ ಮತ್ತು ಒತ್ತಡವನ್ನು ನಿರ್ವಹಿಸುವ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ. ಬಲವಾದ ರೋಗನಿರೋಧಕ ಶಕ್ತಿಯು ನಿಮ್ಮ ದೇಹವು ಸೋಂಕುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಲು ಸಹಾಯ ಮಾಡುತ್ತದೆ.
* ನವೀಕೃತ ವ್ಯಾಕ್ಸಿನೇಷನ್‍ಗಳನ್ನು ಖಚಿತಪಡಿಸಿಕೊಳ್ಳಿ: ದಡಾರವನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಲಸಿಕೆಯನ್ನು ಪಡೆಯುವುದು. ಸೋಂಕಿನ ಸಾಂಕ್ರಾಮಿಕ ಹರಡುವಿಕೆಯಿಂದ ಸುರಕ್ಷಿತವಾಗಿರಲು ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ದಡಾರ ಡೋಸ್‍ಗಳೊಂದಿಗೆ ನವೀಕೃತವಾಗಿರುವುದನ್ನು ಖಚಿತಪಡಿಸಿಕೊಳ್ಳಿ.
* ಬಾಯಿ ಮತ್ತು ಮೂಗನ್ನು ಮುಚ್ಚಿ: ಕೆಮ್ಮುವಾಗ ಅಥವಾ ಸೀನುವಾಗ, ಉಸಿರಾಟದ ಹನಿಗಳು ಹರಡುವುದನ್ನು ತಡೆಯಲು ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ ಬಳಿಕ ತಕ್ಷಣವೇ ನಿಮ್ಮ ಕೈಗಳನ್ನು ತೊಳೆಯಿರಿ.