ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡಿರುವ ಕರೊನಾ ವೈರಸ್‍ಗೆ ಭಾರತೀಯರು ತುತ್ತಾಗಿಲ್ಲ ಅಂತ ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.
ಬೀಜಿಂಗ್‍ನಲ್ಲಿರುವ ಭಾರತದ ರಾಯಭಾರ ಕಚೇರಿ ಚೀನಾದಲ್ಲಿರುವ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಕರೊನಾ ವೈರಸ್‍ಗೆ ಈವರೆಗೂ ಚೀನಾದಲ್ಲಿ 56 ಮಂದಿ ಸಾವನ್ನಪ್ಪಿದ್ದರೆ, ವೈರಸ್ ಸೋಂಕು ತಗುಲಿರುವವರ ಸಂಖ್ಯೆ 2,008ಕ್ಕೆ ಏರಿದೆ. ಇದನ್ನೂ ಓದಿ: ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?
Advertisement
#CoronavirusOutbreak Update
We are on the job!
EAM @DrSJaishankar is closely monitoring the stituation. @EOIBeijing is in close touch with Indian citizens, including university students, in Wuhan & elsewhere in Hubei Province in China. (1/5) https://t.co/9fGhUJihqq
— Arindam Bagchi (@MEAIndia) January 26, 2020
Advertisement
ಕರೋನಾ ವೈರಸ್ ಚೀನಾದ ಲ್ಯಾಬ್‍ನಿಂದಲೇ ಸೋರಿಕೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಚೀನಾದ ವುಹಾನ್ ಪ್ರಾಂತ್ಯದಲ್ಲಿರುವ ಬಯೋಸೇಫ್ಟಿ ಲ್ಯಾಬ್‍ನಿಂದ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ 13 ನಗರಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಚೀನಾದಲ್ಲಿ ಮೊದಲು ಪತ್ತೆಯಾದ ನಿಗೂಢ ಕೊರೊನಾ ವೈರಸ್‍ಗೆ ಬಲಿಯಾಗುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ – ಬೆಂಗ್ಳೂರಲ್ಲಿ ಸೋಂಕು ಶಂಕಿತ ಮೊದಲ ಪ್ರಕರಣ ದಾಖಲು
Advertisement
We are also closely coordinating with Chinese authorities. As of now, we understand that no Indian citizens have been affected by the outbreak & that food & water supplies are available to them. (3/5)
— Arindam Bagchi (@MEAIndia) January 26, 2020
Advertisement
ಕೊರೊನಾ ವೈರಸ್ ಎಂದರೇನು?
ಕೊರೊನಾ ವೈರಸ್ (ತೀವ್ರ ಉಸಿರಾಟದ ಸಿಂಡ್ರೋಮ್- ಎಸ್‍ಎಆರೆಸ್) ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್‍ಗೆ 2019-ಎನ್‍ಸಿಓವಿ ಎಂದು ನಾಮಕರಣ ಮಾಡಿದೆ. ಈ ವೈರಸ್ ದೇಹಕ್ಕೆ ಸೇರಿದರೆ ನ್ಯೂಮೊನಿಯಾ ಮತ್ತಿತರ ಉಸಿರಾಟದ ತೊಂದರೆಗಳು ಉಂಟಾಗುತ್ತವೆ.
Our @EOIBeijing has opened 3 hotlines to respond to concerns of those affected by this situation & is continuing to respond to concerns basis currently available information. (5/5)
— Arindam Bagchi (@MEAIndia) January 26, 2020
ಕೊರೊನಾ ವೈರಸ್ ಸಾಮಾನ್ಯವಾಗಿ ನಾಯಿ, ಬೆಕ್ಕುಗಳು, ಹಾವು, ಬಾವಲಿ ರೀತಿಯ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಸಮುದ್ರದ ಆಹಾರವನ್ನು ಮಾರಾಟ ಮಾಡಲಾಗುವ ಹ್ಯೂನಾನ್ ಸಮುದ್ರ ಆಹಾರ ಮಾರುಕಟ್ಟೆಯಿಂದ ಪ್ರಸ್ತುತ ಈ ಸೋಂಕು ಹರಡುತ್ತಿದೆ ಎಂದು ಚೀನಾದ ಜನರು ನಂಬಿದ್ದಾರೆ. ಹೀಗಾಗಿ ಹೊಸ ವರ್ಷದಿಂದಲೇ ಹ್ಯೂನಾನ್ ಮಾರುಕಟ್ಟೆಯನ್ನು ರದ್ದುಗೊಳಿಸಲಾಗಿದೆ.