ನಾನು, ಯಶ್ ನಿಮ್ಮನ್ನು ಪ್ರೀತಿಸ್ತೇವೆ, ಆರಾಧಿಸ್ತೇವೆ: ವೈದ್ಯೆಯ ಬರ್ತ್ ಡೇಗೆ ರಾಧಿಕಾ ವಿಶ್

Public TV
2 Min Read
YASH

ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ತಮಗೆ ಹೆರಿಗೆ ಮಾಡಿಸಿದ ವೈದ್ಯೆಯ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಶುಭಾಶಯ ತಿಳಿಸುವ ಮೂಲಕ ಪೋಸ್ಟ್ ಮಾಡಿದ್ದಾರೆ.

ರಾಧಿಕಾ ಪಂಡಿತ್ ಅವರು ಡಿಸೆಂಬರ್ 2 ಭಾನುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇವರ ಹೆರಿಗೆಯನ್ನು ಡಾ. ಸ್ವರ್ಣಲತಾ ಅವರು ಮಾಡಿಸಿದ್ದರು. ಸೋಮವಾರ ಸ್ವರ್ಣಲತಾ ಅವರು ಹುಟ್ಟುಹಬ್ಬವಿದ್ದು, ರಾಧಿಕಾ ಪಂಡಿತ್ ಅವರ ಜೊತೆ ಹಾಗೂ ಯಶ್ ಜೊತೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಒಬ್ಬರ ಜೀವನದಲ್ಲಿ ವೈದ್ಯರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನನ್ನ ಗರ್ಭಾವಸ್ಥೆಯಲ್ಲಿ ಹಾಗೂ ನನ್ನ ಹೆರಿಗೆಯ ಸಮಯದಲ್ಲಿ ಇಂತಹ ಅದ್ಭುತ ವ್ಯಕ್ತಿ ಸಿಕ್ಕಿರುವುದು ನಮ್ಮ ಅದೃಷ್ಟ. ಡಾ. ಸ್ವರ್ಣಲತಾ ನೀವು ನಮಗೆ ವೈದ್ಯರಿಕ್ಕಿಂತ ಹೆಚ್ಚು. ನನ್ನ ಗರ್ಭಾವಸ್ಥೆಯ ಸಮಯದಲ್ಲಿ ನೀವು ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಯಿದ್ದು, ನನ್ನ ಪಯಣವನ್ನು ಸುಂದರವಾಗಿಸಿದ್ದೀರಿ. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಅದು ಕಡಿಮೆ ಆಗುತ್ತದೆ. ನಾನು ಹಾಗೂ ಯಶ್ ನಿಮ್ಮನ್ನು ಪ್ರೀತಿಸುತ್ತೇವೆ ಹಾಗೂ ಆರಾಧಿಸುತ್ತೇವೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಅಕ್ಕ. ಲವ್ ಯೂ ಎಂದು ಪೋಸ್ಟ್ ಮಾಡಿದ್ದಾರೆ.

ರಾಧಿಕಾ ಪಂಡಿತ್ ತಾಯಿಯಾದ ಬಳಿಕ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಮೊದಲಿಗೆ ಮಗು ಹಿಡಿದುಕೊಳ್ಳುವುದು ಗೊತ್ತಿರಲಿಲ್ಲ. ಅಮ್ಮ ಹೇಳಿಕೊಟ್ಟ ಬಳಿಕ ಮಗುವನ್ನು ಎತ್ತಿಕೊಂಡೆ. ಮಗಳು ಬಂದ ನಂತರದ ಜೀವನ ಸಂಪೂರ್ಣ ಬದಲಾದಂತೆ ಆಗುತ್ತಿದೆ. ಪ್ರತಿಯೊಂದು ಕ್ಷಣವೂ ರೋಮಾಂಚನವನ್ನು ಉಂಟುಮಾಡಿದೆ ಎಂದು ಹೇಳುವ ತಾಯ್ತನದ ಹಿತವನ್ನು ಹಂಚಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *