ಬೆಳಗಾವಿ: ಮಂಗಳೂರಿನಲ್ಲಿ ತಲೆ ಎತ್ತಿರುವ ಎಂಡಿಎಫ್ ಚಟುವಟಿಕೆಗಳನ್ನ ಗಮನಿಸಿ ಸರ್ಕಾರ ಹದ್ದುಬಸ್ತಿನಲ್ಲಿಡಬೇಕು. ಕೂಡಲೇ ಸರ್ಕಾರ ಎಂಡಿಎಫ್ ಬಗ್ಗೆ ತನಿಖೆ ಮಾಡಿ ಅದು ಏನು ಅಂತಾ ಬಹಿರಂಗಪಡಿಸಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
Advertisement
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳೂರಲ್ಲಿ ಎಂಡಿಎಫ್ ಸಂಘಟನೆ ಸಕ್ರಿಯ ಇರುವ ಬಗ್ಗೆ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಮುಸ್ಲಿಂ ಡಿಫೆನ್ಸ್ ಫೋರ್ಸ್ ಅಂತಾ ಮಾಡಿದ್ದಾರೆ. ಅದರಿಂದ ಖಟ್ಟರ್ ಮುಸ್ಲಿಮರನ್ನು ತಯಾರು ಮಾಡುವ ಪ್ರಕ್ರಿಯೆ ನಡೆಯುತ್ತಿರುವ ಅನುಮಾನವಿದೆ. ಮೆಸೇಜ್ ಮೂಲಕ ಒತ್ತಾಯ ಮಾಡುವ ಮಾಹಿತಿ ಬಂದಿದೆ. ಪಿಎಫ್‍ಐ, ಸಿಎಫ್‍ಐ, ಎಸ್‍ಡಿಪಿಐ, ಎಐಎಂಐಎಂ ಈ ಸಂಘಟನೆಗಳ ಜೊತೆ ಎಂಡಿಎಫ್ ಸಂಘಟನೆ ಹುಟ್ಟುಹಾಕಿದ್ದಾರೆ. ಈ ಎಲ್ಲಾ ಸಂಘಟನೆ ಹದ್ದುಬಸ್ತಿನಲ್ಲಿಟ್ಟು ಕ್ರಮ ಕೈಗೊಳ್ಳಬೇಕು ಎಂದರು. ಇದನ್ನೂ ಓದಿ: ಬಿಹಾರ ಸುಧಾರಣೆಗೆ 3,000 ಕಿ.ಮೀ. ಪಾದಯಾತ್ರೆ: ಪ್ರಶಾಂತ್ ಕಿಶೋರ್ ಘೋಷಣೆ
Advertisement
Advertisement
ಎಂಡಿಎಫ್ ಚಟುವಟಿಕೆ ಗಮನಿಸಿ ಸರ್ಕಾರ ಹದ್ದುಬಸ್ತಿನಲ್ಲಿಡಬೇಕು. ಪಿಎಫ್‍ಐ ಬ್ಯಾನ್ ಆಗಲೇಬೇಕು ಅದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಎಂಡಿಎಫ್ ಚಿಹ್ನೆ, ಮೆಸೇಜ್ ನೋಡಿದ್ರೆ ಅಲ್‍ಖೈದಾ ಮಾದರಿ ವರ್ತನೆ, ಲಕ್ಷಣಗಳು ಕಾಣುತ್ತಿವೆ. ಎಂಡಿಎಫ್ ಹೊಸದಾಗಿ ಹುಟ್ಟು ಹಾಕಿದ್ದಾರೋ ಅಥವಾ ಮೊದಲೇ ಇತ್ತೋ ಅನ್ನೋದನ್ನ ಕೂಡಲೇ ಸರ್ಕಾರ ತನಿಖೆ ಮಾಡಿ ಅದು ಏನು ಅಂತಾ ಬಹಿರಂಗಪಡಿಸಬೇಕು ಎಂದು ಬೆಳಗಾವಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.