ಮಂಗಳೂರು: ಬುರುಡೆ ಚಿನ್ನಯ್ಯನ ಬಂಧನದ ಬೆನ್ನಲ್ಲೇ ದೂತ ಸಮೀರ್‌ನ ಸುಳ್ಳಿನ ಕಂತೆ ಕಳಚಿ ಬಿದ್ದಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ (Dharmasthala Police Station) ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣದಲ್ಲಿ ಇಂದು ವಿಚಾರಣೆಗೆ ಹಾಜರಾಗಲಿದ್ದಾನೆ.
ಧರ್ಮಸ್ಥಳ ದೇಗುಲ ವಿರುದ್ಧ ಅಪಪ್ರಚಾರ ಆರೋಪದಲ್ಲಿ `ದೂತ’ ಯೂಟ್ಯೂಬ್ ವಾಹಿನಿಯ ಸಮೀರ್‌ಗೆ ಕೋರ್ಟ್ (Cour) ಇತ್ತೀಚೆಗೆ ನಿರೀಕ್ಷಣಾ ಜಾಮೀನು (Bail) ಮಂಜೂರು ಮಾಡಿತ್ತು. ಧರ್ಮಸ್ಥಳದಲ್ಲಿ ಅಪಪ್ರಚಾರದ ಆರೋಪ ಎದುರಿಸುತ್ತಿರೋ ಸಮೀರ್, ತಮ್ಮ ವಿಡಿಯೋದಲ್ಲಿ ದಂಗೆ ಏಳುವಂತೆ ಜನರಿಗೆ ಪ್ರಚೋದಿಸಿದ್ದ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದೊಂಬಿ, ಪ್ರಚೋದನೆ ಸೇರಿದಂತೆ ಹಲವರು ಕೇಸ್‌ಗಳು ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡಿದ್ದ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಇದನ್ನೂ ಓದಿ: ವರ್ಷಾಂತ್ಯದಲ್ಲಿ ಭಾರತಕ್ಕೆ ಪುಟಿನ್, ಝೆಲೆನ್ಸ್ಕಿ ಭೇಟಿ – ಅಮೆರಿಕ ತೈಲ ವಾರ್ ನಡ್ವೆ ಹೆಚ್ಚಾಯ್ತು ಭಾರತದ ಪ್ರಾಬಲ್ಯ
ಕೋರ್ಟ್ ಜಾಮೀನು ಬಳಿಕ ಧರ್ಮಸ್ಥಳದಲ್ಲಿ ತನಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದ. ಈ ಹಿನ್ನೆಲೆ ಬೆಳ್ತಂಗಡಿ ಠಾಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದರು. ಅದರಂತೆ ಸಮೀರ್ ಇಂದು ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾನೆ. ಆದ್ರೆ ಬೆಳಗ್ಗೆ 10:30ಕ್ಕೆ ವಿಚಾರಣೆಗೆ ಬರೋದಾಗಿ ತಿಳಿಸಿದ್ದ ಸಮೀರ್ 11 ಗಂಟೆಯಾದ್ರೂ ಸುಳಿವಿಲ್ಲ. ಒಂದು ವೇಳೆ ಸಮೀರ್ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವ ಸಾಧ್ಯತೆಗಳೂ ಇವೆ. ಇದನ್ನೂ ಓದಿ: ಅನನ್ಯಾ ಭಟ್ ನಾಪತ್ತೆ ಪ್ರಕರಣ – ಎಸ್‌ಐಟಿ 2ನೇ ನೋಟಿಸ್‌ಗೂ ಉತ್ತರಿಸದ ಸುಜಾತ ಭಟ್
ದೂತನ ಬಂಡವಾಳ ಬಯಲು
ಇಲ್ಲ ಸಲ್ಲದ ಸುಳ್ಳು ಕತೆಗಳನ್ನು ಸೃಷ್ಟಿಸಿ ಎಲ್ಲರನ್ನೂ ಮರಳು ಮಾಡಿದ್ದವನೇ ಯೂಟ್ಯೂಬರ್ ಸಮೀರ್ ಎಂ.ಡಿ. ಯಾವುದೋ ಕೋಣೇಲಿ ಕೂತ್ಕೊಂಡು ಎಐ ವಿಡಿಯೋಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಲೈಕ್ಸ್, ವೀವ್ಸ್ ಪಡೆದಿದ್ದ ದೂತನ ಬಂಡವಾಳ ಬಯಲಾಗಿದೆ. ತಾನು ಹೇಳಿದ್ದೇ ಸತ್ಯ ಅಂತ ನಂಬಿಸಿ, ಶಿವತಾಂಡವ ಶುರುವಾಗುತ್ತೆ.. ನೋಡಿ ಸತ್ಯ ಹೇಗೆ ಹೊರಬರುತ್ತದೆ.. ಎಲ್ಲದಕ್ಕೂ ಸಾಕ್ಷ್ಯ ಇದೆ ಅಂತಾ ಪುಂಖಾನುಪುಂಖವಾಗಿ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದ. ದೂರುದಾರನಿಗೆ ʻಭೀಮʼ ಎಂದು ಹೆಸರಿಟ್ಟಿದ್ದೇ ಸುಳ್ಳುಕೋರ ಸಮೀರ್. ಅನನ್ಯಾ ಭಟ್ ಅನ್ನುವ ನಕಲಿ ಯುವತಿಯನ್ನು ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರಕ್ಕೆ, ಭಕ್ತರ ಭಾವನೆಗೆ ಚ್ಯುತಿ ಬರುವಂತೆ ಮಾಡಿದ್ದೇ ಈತ. ಬೀದಿಗೆ ಬನ್ನಿ ಹೋರಾಟ ಮಾಡಿ ಅಂತಾನೂ ಕರೆ ಕೊಟ್ಟಿದ್ದ. ಈತನ ವಿಡಿಯೋಗೆ ಫಂಡಿಂಗ್ ಬರುತ್ತಿದೆ ಅನ್ನೋ ಆರೋಪವೂ ಇದೆ.
ಎಐ ಕಟ್ಟುಕತೆಗಳ ಅಸಲಿಯತ್ತು ಬಟಾಬಯಲಾಗ್ತಿದ್ದಂತೆ ಬಿಲ ಸೇರಿಕೊಂಡಿದ್ದಾನೆ. ಬಳ್ಳಾರಿ ಹಾಗೂ ಬನ್ನೇರುಘಟ್ಟದ ಹುಲ್ಲಳ್ಳಿ ಮನೆಗೆ ಪೊಲೀಸರು ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿದ್ದಾರೆ. ಇತ್ತ ನಿಂದನೆ ಕೇಸಲ್ಲಿ ಮಹೇಶ್ ಶೆಟ್ಟಿ ತಿಮರೋಡಿಗೆ ಉಡುಪಿ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ. ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್