ನಿರ್ಮಾಪಕ ಮಾಧವಾನಂದ ಅವರ ಕನ್ನಡ ಓಟಿಟಿ ಅರ್ಪಿಸುವ ಮಹಾರಾಣಿ ಕ್ರಿಕೆಟ್ ಲೀಗ್ ಸೀಸನ್-1 MCL ಸೆಲೆಬ್ರಿಟಿ ಮಹಿಳಾ ಕ್ರಿಕೆಟ್ ಟೂರ್ನಮೆಂಟ್‌ನ ಅಧಿಕೃತ ಜೆರ್ಸಿ, ಟ್ರೋಫಿ ಅನಾವರಣ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಸಾ ರಾ ಗೋವಿಂದು, ಬಿ ಆರ್ ಲಕ್ಷ್ಮಣರಾವ್, ಜೋಗಿ, ಭರಮಣ್ಣ ಉಪ್ಪಾರ್, ತಾರಾ ಅನುರಾಧ, ಸುಂದರರಾಜ್, ಎನ್ ಎಂ ಸುರೇಶ್, ಪ್ರವೀಣ್ ಕುಮಾರ್, ಭಾ.ಮ.ಹರೀಶ್, ವಿಕ್ರಮ್ ಸೂರಿ, ನಮಿತಾ ರಾವ್, ಜಾನ್ಹವಿ, ಅಪೂರ್ವ, ಸತೀಶ್ ಕಾಡ್ ಬಾಮ್, ರಾಜ್ ಕಪ್ ರೂವಾರಿ ರಾಜೇಶ್ ಬ್ರಹ್ಮಾವರ್, SWCLನ ಪೀಟರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ “MCL” ಸೀಸನ್ 1 ಯಶಸ್ವಿಯಾಗಲೆಂದು ತಮ್ಮ ಪ್ರೋತ್ಸಾಹದ ನುಡಿಗಳ ಮೂಲಕ ಹಾರೈಸಿದರು.
ಈ ಟೂರ್ನಿಯಲ್ಲಿ ಆರು ತಂಡಗಳು ಭಾಗವಹಿಸಲಿದ್ದು, ಎಮ್ ಸಿ ಎಲ್ ಟೈಮ್ಸ್ insight ವಾರಿಯರ್ಸ್ ಓನರ್ ಶರತ್ ಕುಮಾರ್ ಎಸ್, ಎನ್ ಎಸ್ ಆರ್ ರೈಡರ್ಸ್ ಓನರ್ ರಘುಕುಮಾರ್ ಬಿ, ವಿ ಪಿ ಚಾಲೆಂಜರ್ಸ್ ಓನರ್ ಆರ್ ಎಸ್ ಮಹೇಶ್, ಪಿ ಆರ್ ಎಮ್ ಟೈಟನ್ಸ್ ಓನರ್ ಪ್ರೇಮ ಗೌಡ, ಕ್ಲಾಸಿಕ್ ಕ್ವೀನ್ ಓನರ್ ಲಕ್ಷ್ಮಣ ಉಪ್ಪಾರ್, ಆರ್ ಜೆ ರಾಯಲ್ ಓನರ್ ರೇನೇಶ್ ಸೇರಿದಂತೆ ಸೆಲೆಬ್ರಿಟಿ ಪ್ಲೇಯರ್ ಗಳಾದ ಸ್ಫೂರ್ತಿ ವಿಶ್ವಾಸ, ಜಯಲಕ್ಷ್ಮಿ, ಕವಿತಾ ಕಂಬಾರ, ಪ್ರೇಮ ಗೌಡ, ವಾಣಿಶ್ರೀ ಸೇರಿದಂತೆ ಆಟಗಾರರೆಲ್ಲ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಖ್ಯಾತ ನಿರೂಪಕ ಹರೀಶ್ ನಾಗರಾಜ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ಇದನ್ನೂ ಓದಿ: Toxic Teaser | ಡ್ಯಾಡಿ ಈಸ್ ಹೋಮ್ – ಯಶ್ ʻಟಾಕ್ಸಿಕ್ʼ ಕಿಕ್ ಅಬ್ಬಬ್ಬಾ!
ಎಂಸಿಎಲ್ ಟೂರ್ನಮೆಂಟ್‌ನ ನಿರ್ಮಾಪಕ ಮಾಧವಾನಂದ ಜೊತೆಗೆ ಕುಮಾರ್, ಮೀನಾ ಗೌಡ ಹಾಗು ಕಲಾವಿದೆ ರೇಣು ಶಿಖಾರಿಯವರು ಸಮಾರಂಭವನ್ನು ಅಯೋಜಿಸಿದ್ದರು. ಎಂಸಿಎಲ್ ಸೀಸನ್ 1 ರ ಪಂದ್ಯಗಳು ಪಂದ್ಯಗಳು ಜನವರಿ 17(ಒಂದು ದಿನ)ರಂದು ಬೆಂಗಳೂರಿನ ಅಶೋಕ್ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯಲಿದೆ. ಇದನ್ನೂ ಓದಿ: ದೈಜಿ ಟೀಮ್ ಸೇರಿಕೊಂಡ ನಟಿ ಖುಷಿ ರವಿ


