ವಾಷಿಂಗ್ಟನ್: ತನ್ನ ತಾಯಿಗೆ ತಣ್ಣನೆಯ ಫ್ರೈಸ್ (ಕೋಲ್ಡ್ ಫ್ರೈಸ್) ತಂದು ಕೊಟ್ಟಿದ್ದಕ್ಕೆ ಮೆಕ್‌ಡೊನಾಲ್ಡ್ ಉದ್ಯೋಗಿಯೊಬ್ಬನನ್ನು ವ್ಯಕ್ತಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಕೆವಿನ್ ಹೊಲೊಮನ್ (23) ಗುಂಡೇಟಿಗೆ ಬಲಿಯಾದ ದುರ್ದೈವಿ. ಸೋಮವಾರ ಬ್ರೂಕ್ಲಿನ್‌ನ ಬೆಡ್-ಸ್ಟುಯ್‌ನಲ್ಲಿರುವ 771 ಹರ್ಕಿಮರ್ ಸೇಂಟ್‌ನಲ್ಲಿ ಈತನ ಮೇಲೆ ಮೂರು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ – ಹಲವು ಮಂದಿ ಸಾವು
Advertisement
Advertisement
ಶೂಟರ್ ಮೈಕೆಲ್ ಮೋರ್ಗನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ 2020ರ ಅಕ್ಟೋಬರ್‌ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಆರೋಪಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
ಕೋಲ್ಡ್ ಫ್ರೆಂಚ್ ಫ್ರೈಸ್ ನೀಡಿದ್ದಕ್ಕೆ ಮೈಕೆಲ್ ತಾಯಿ, ಕೆಲಸಗಾರರನ್ನು ಪ್ರಶ್ನಿಸಿದ್ದಾರೆ. ಮ್ಯಾನೇಜರ್‌ಗೆ ದೂರು ಕೊಡುತ್ತೇನೆಂದ ಆಕೆಯನ್ನು ನೋಡಿ ಕೆಲಸಗಾರರು ನಕ್ಕಿದ್ದಾರೆ. ಈ ವೇಳೆ ತನ್ನ ತಾಯಿ ರಕ್ಷಣೆಗೆಂದು ರೆಸ್ಟೋರೆಂಟ್‌ಗೆ ನುಗ್ಗಿದ ಮೈಕೆಲ್ ಗುಂಡಿನ ದಾಳಿ ನಡೆಸಿದ್ದಾನೆ. ಇದನ್ನೂ ಓದಿ: ಕ್ಯಾಂಪಸ್‍ನಲ್ಲಿ ಗುಂಡಿನ ದಾಳಿ: ಮೂವರು ಬಲಿ, ಇಬ್ಬರಿಗೆ ಗಂಭೀರ ಗಾಯ
Advertisement
ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. ಅಕ್ಟೋಬರ್ 2 ರಂದು ವಾಷಿಂಗ್ಟನ್ ಡಿಸಿ ಬಳಿ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೋರ್ವ ಸಾವೀಗಿಡಾಗಿದ್ದ. ಮೇ 24 ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ 19 ಮಕ್ಕಳು ಸೇರಿದಂತೆ ಅನೇಕರು ಮೃತಪಟ್ಟಿದ್ದರು. ಜೂ.1ರಂದು ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವಿಗೀಡಾಗಿದ್ದರು. ಜೂ.20ರಂದು ಅಪ್ರಾಪ್ತ ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಸಾವನ್ನಪ್ಪಿದ್ದರು.